https://youtube.com/shorts/fUqc-HD4bis?si=BTQaSysLhuDRvAiz
Subscribe ನ್ಯೂಸಿಕ್ಸ್ ಕನ್ನಡ
newsics.com
ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಪಬ್ಜಿ ಗೇಮ್ ಆಡುತ್ತಿದ್ದ ಯುವಕನ ರಕ್ತದೊತ್ತಡ ಇದ್ದಕ್ಕಿದ್ದಂತೆ ಹೆಚ್ಚಾಗಿದ್ದು, ಮೆದುಳಿನ ನರ ಒಡೆದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೇರಠ್ ಎಂಬ ಪ್ರದೇಶದಲ್ಲಿ ಪಬ್ಜಿ ಗೇಮ್ ಚಟಕ್ಕೆ ಬಲಿಯಾದ ಯುವಕ ಮೊಹಮ್ಮದ್ ಕೈಫ್ (22).ರಿಯಲ್ ಎಸ್ಟೇಟ್ ಉದ್ಯಮಿ ಫಾರೂಕ್ ಅವರ ಏಕೈಕ ಪುತ್ರ ಮೊಹಮ್ಮದ್ ಕೈಫ್ ಶುಕ್ರವಾರ ರಾತ್ರಿ ತನ್ನ ಕೋಣೆಯಲ್ಲಿ ಹೆಡ್‌ಫೋನ್ ಹಾಕಿಕೊಂಡು ಮೊಬೈಲ್‌ನಲ್ಲಿ ಪಬ್ಜಿ ಆಡುತ್ತಿದ್ದನು. ಕುಟುಂಬಸ್ಥರ ಪ್ರಕಾರ, ಕೈಫ್‌ಗೆ ಕಳೆದ ನಾಲ್ಕು ತಿಂಗಳುಗಳಿಂದ ಆನ್‌ಲೈನ್ ಗೇಮಿಂಗ್ ಹುಚ್ಚು ಹಿಡಿದಿತ್ತು. ಶುಕ್ರವಾರ ಸುಮಾರು 3 ಗಂಟೆಯ ಸಮಯದಲ್ಲಿ ಗೇಮ್ ಆಡುತ್ತಿದ್ದಾಗ ಆತ ಇದ್ದಕ್ಕಿದ್ದಂತೆ ಹಾಸಿಗೆಯಿಂದ ಕೆಳಗೆ ಬಿದ್ದಿದ್ದ.
ಕುಟುಂಬದವರು ತಕ್ಷಣ ಆತನನ್ನು ದೆಹಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಆಗ ಆತನ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ಬರುವಾಗ ಕೈಫ್‌ನ ರಕ್ತದೊತ್ತಡ 300ರ ಗಡಿ ದಾಟಿರುವುದನ್ನು ಕಂಡು ವೈದ್ಯರೇ ಆತಂಕಗೊಂಡಿದ್ದರು. ನೆ. ಮೊಹಮ್ಮದ್ ಕೈಫ್ ಕುಟುಂಬಕ್ಕೆ ಆಸರೆಯಾಗಿದ್ದ, ಇಡೀ ರಾತ್ರಿ ಗೇಮ್ ಆಡುತ್ತಿದ್ದ ಎಂದು ಪೋಷಕರು ಹೇಳಿದ್ದಾರೆ.
ದೆಹಲಿಯ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಭಾನುವಾರ ಬೆಳಿಗ್ಗೆ ಆತ ಸಾವನ್ನಪ್ಪಿದ್ದಾನೆ. ವೈದ್ಯರ ಪ್ರಕಾರ ವಿಪರೀತ ಒತ್ತಡ ಮತ್ತು ಉದ್ರೇಕದಿಂದಾಗಿ ರಕ್ತದೊತ್ತಡ ಹೆಚ್ಚಾಗಿ, ಮೆದುಳಿನ ನರ ಒಡೆದಿದ್ದೇ ಸಾವಿಗೆ ಪ್ರಮುಖ ಕಾರಣವಾಗಿದೆ.
https://www.newsics.com/2026/02/09/bomb-threats-to-9-schools-in-delhi/