Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > GEN Z NEW TREND ಪ್ರಣಯದಾಟದಲ್ಲೂ ಪರಿಸರ ಕ್ರಾಂತಿಗೆ ಮುಂದಾದ್ರಾ ಜೆನ್ ಝೀಗಳು? ಏನಿದು ಹೊಸ ಟ್ರೆಂಡ್ ಗ್ರೀನ್ ಸೆ*ಕ್ಸ್?
ಅನಾವರಣಪ್ರಮುಖರಿಲೇಷನ್‌ಶಿಪ್ವೈರಲ್

GEN Z NEW TREND ಪ್ರಣಯದಾಟದಲ್ಲೂ ಪರಿಸರ ಕ್ರಾಂತಿಗೆ ಮುಂದಾದ್ರಾ ಜೆನ್ ಝೀಗಳು? ಏನಿದು ಹೊಸ ಟ್ರೆಂಡ್ ಗ್ರೀನ್ ಸೆ*ಕ್ಸ್?

Share
3 Min Read
SHARE

https://youtube.com/shorts/s_4DpSB4DuI?si=4AZmgba8KEPzCEfP

Subscribe ನ್ಯೂಸಿಕ್ಸ್ ಕನ್ನಡ

newsics.com

ಜೆನ್‌ ಝೀಗಳು ಈಗ ಸೃಷ್ಟಿಸುತ್ತಿರೋ ಹೊಸ ಟ್ರೆಂಡ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್‌ ಪಡೆದುಕೊಳ್ತಿವೆ. ಸದ್ಯಕ್ಕೆ ಹಾಗೆ ಫೇಮಸ್‌ ಆಗಿರೋ ಟ್ರೆಂಡ್‌ ಅಂದರೆ ಗ್ರೀನ್‌ ಸೆಕ್ಸ್‌. ಅರೆ, ಸೆಕ್ಸ್‌ ಅಂದರೆ ಸೆಕ್ಸ್‌. ಅದಕ್ಕೆ ಕಲರ್‌, ಫ್ಲೇವರ್‌ ಬೇರೆ ಇರುತ್ತಾ ಅಂತೆಲ್ಲ ಕೇಳಂಗಿಲ್ಲ. ಸದಾ ಹೊಸತನ್ನ ಬಯಸೋ ಜನರಿಗೆ ಇದೊಂದು ಹೊಸತು ಅನ್ನೋ ಹಾಗೂ ಇಲ್ಲ. ಅದಕ್ಕೊಂದು ಕಾರಣ ಇದೆ. ಜೆನ್‌ ಜೀಗಳನ್ನು ಅನೇಕ ಕಾರಣಕ್ಕೆ ತಾರಾಮಾರ ಬಯ್ಯೋ ಮಂದಿಯೂ ಅವರ ಈ ಒಂದು ಟ್ರೆಂಡ್‌ ಅನ್ನು ಕೊಂಚ ಅಭಿಮಾನದಿಂದ ನೋಡುತ್ತಿದ್ದಾರೆ. ಅಷ್ಟಕ್ಕೂ ಈ ಗ್ರೀನ್‌ ಸೆಕ್ಸ್‌ ಅನ್ನೋದು ಸಖತ್‌ ಇಂಟರೆಸ್ಟಿಂಗ್.‌ ಆರೋಗ್ಯಕ್ಕೂ ಒಳ್ಳೆಯದಾಗಿರುವ ಕಾರಣ ಜೆನ್‌ ಜೀಗಳು ಸೃಷ್ಟಿಸಿರೋ ಈ ಟ್ರೆಂಡ್‌ ಅನ್ನು ಅವರ ಹಿಂದಿನ ತಲೆಮಾರು ಅಂದರೆ ಮಿಲೇನಿಯಲ್‌ಗಳೂ ಸ್ವಲ್ಪ ಮಟ್ಟಿಗೆ ಜೆನ್‌ ಎಕ್ಸ್‌ಗಳೂ ಫಾಲೋ ಮಾಡ್ತಿದ್ದಾರೆ. ಜತೆಗೆ ಅವರು ಗ್ರೀನ್‌ ಸೆಕ್ಸ್‌ ಬಗ್ಗೆ ಪಾಸಿಟಿವ್‌ ಆಗಿ ಮಾತನಾಡಲು ಶುರು ಮಾಡಿದ್ದಾರೆ. ಹೀಗಾಗಿ ಇದು ಹೆಚ್ಚೆಚ್ಚು ಜನರನ್ನು ರೀಚ್‌ ಆಗ್ತಿದೆ.
ಸರಳವಾಗಿ ಹೇಳುವುದಾದರೆ, ಲೈಂಗಿಕ ಜೀವನದಲ್ಲಿ ಬಳಸುವ ಉತ್ಪನ್ನಗಳು ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುವುದೇ ‘ಗ್ರೀನ್ ಸೆಕ್ಸ್’. ಹವಾಮಾನ ಬದಲಾವಣೆಯ ಬಗ್ಗೆ ಅತೀವ ಕಾಳಜಿ ಹೊಂದಿರುವ ಜೆನ್-ಝಿ ಯುವಕರು, ತಮ್ಮ ಪ್ರಣಯ ಜೀವನದಲ್ಲೂ ಕಾರ್ಬನ್ ಫೂಟ್‌ಪ್ರಿಂಟ್ ಮೂಡಿಸಲು ಬಯಸುತ್ತಿದ್ದಾರೆ. ಅದರ ಮುಂದುವರಿಕೆಯಾಗಿ ಸೆಕ್ಸ್‌ನಲ್ಲೂ ಪರಿಸ್ನೇಹಿತನವನ್ನು ಮುನ್ನೆಲೆಗೆ ತರ್ತಿದ್ದಾರೆ.
ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ
ಸಾಂಪ್ರದಾಯಿಕ ಕಾಂಡೋಮ್‌ಗಳಲ್ಲಿ ಪ್ಲಾಸ್ಟಿಕ್ ಮತ್ತು ಪ್ರಾಣಿಜನ್ಯ ಪದಾರ್ಥಗಳಿರಬಹುದು. ಇದನ್ನು ವಿರೋಧಿಸುವ ಯುವಜನರು ಈಗ ಬಯೋಡಿಗ್ರೇಡಬಲ್ ಕಾಂಡೋಮ್‌ಗಳನ್ನು ಬಳಸುತ್ತಾರೆ. ಇವು ಪರಿಸರದಲ್ಲಿ ಸುಲಭವಾಗಿ ಕರಗುವ ಮತ್ತು ಸಸ್ಯಾಹಾರಿ (Vegan) ಲ್ಯಾಟೆಕ್ಸ್‌ನಿಂದ ತಯಾರಿಸಿದ ಉತ್ಪನ್ನಗಳು. ಜತೆಗೆ ಬ್ಯಾಟರಿ ಚಾಲಿತ ಪ್ಲಾಸ್ಟಿಕ್ ಸೆಕ್ಸ್ ಆಟಿಕೆಗಳ ಬದಲಿಗೆ, ರೀಚಾರ್ಜ್ ಮಾಡಬಹುದಾದ ಅಥವಾ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಸಾಧನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ರಾಸಾಯನಿಕ ಮುಕ್ತ ಮತ್ತು ಸಾವಯವ ಪದಾರ್ಥಗಳಿಂದ ಕೂಡಿದ ಲ್ಯೂಬ್ರಿಕೆಂಟ್‌ಗಳ ಬಳಕೆ ಹೆಚ್ಚುತ್ತಿದೆ.
ಜೆನ್-ಝಿ ಪಾಲಿಗೆ ಸುಸ್ಥಿರತೆ ಎಂಬುದು ಆಕರ್ಷಣೆಯ ಒಂದು ಭಾಗವಾಗಿದೆ. ಡೇಟಿಂಗ್ ಆ್ಯಪ್‌ಗಳಲ್ಲಿ ಪರಿಸರ ಪ್ರೇಮಿಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ದುಬಾರಿ ಗಿಫ್ಟ್ ಅಥವಾ ಪ್ಲಾಸ್ಟಿಕ್ ಬಳಕೆಯ ಹೋಟೆಲ್‌ಗಳ ಬದಲಿಗೆ ಪಾರ್ಕ್‌ಗಳಲ್ಲಿ ನಡಿಗೆ ಅಥವಾ ಸಸ್ಯಗಳನ್ನು ನೆಡುವಂತಹ ಇಕೋ-ಡೇಟ್ಸ್ ಜನಪ್ರಿಯವಾಗುತ್ತಿವೆ.
ನೈತಿಕ ಬ್ರ್ಯಾಂಡ್‌ಗಳಿಗೆ ಬೆಂಬಲ:
ಕೇವಲ ಲಾಭಕ್ಕಾಗಿ ಪರಿಸರವನ್ನು ಹಾಳು ಮಾಡುವ ಕಂಪನಿಗಳ ಉತ್ಪನ್ನಗಳನ್ನು ಇಂದಿನ ಯುವಜನರು ತಿರಸ್ಕರಿಸುತ್ತಿದ್ದಾರೆ. ಕಾರ್ಮಿಕರಿಗೆ ಸರಿಯಾದ ವೇತನ ನೀಡುವ ಮತ್ತು ಪಾರದರ್ಶಕ ಉತ್ಪಾದನಾ ವ್ಯವಸ್ಥೆ ಹೊಂದಿರುವ ಬ್ರ್ಯಾಂಡ್‌ಗಳಿಗೆ ಅವರು ಬೆಂಬಲ ನೀಡುತ್ತಿದ್ದಾರೆ.
ಈ ಟ್ರೆಂಡ್ ಜೆನ್-ಝಿ ಯುವಜನರ ಪರ್ಪಸ್‌ ಫುಲ್‌ ಲೈಫ್‌ ಅಥವಾ ಅರ್ಥಪೂರ್ಣ ಬದುಕನ್ನು ಪ್ರತಿಬಿಂಬಿಸುತ್ತದೆ. ತಮ್ಮ ಪ್ರತಿಯೊಂದು ಕ್ರಿಯೆಯೂ ಭೂಮಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಅರಿವು ಅವರಲ್ಲಿದೆ. ಲೈಂಗಿಕ ಆರೋಗ್ಯದ ಜತೆಗೆ ಭೂಮಿಯ ಆರೋಗ್ಯವನ್ನೂ ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿರುವುದು ಈ ಜನರೇಶನ್‌ಗೆ ಮನದಟ್ಟಾಗಿದೆ.

ಇವರು ಬಳಸುವ ಕಾಂಡೋಮ್‌ ಗಳಲ್ಲಿ ಪ್ರಾಣಿಜನ್ಯ ಪ್ರೊಟೀನ್ (Casein) ಇರುವುದಿಲ್ಲ ಮತ್ತು ಇವು ನೈಸರ್ಗಿಕವಾಗಿ ಮಣ್ಣಿನಲ್ಲಿ ಕರಗುತ್ತವೆ. ಒಮ್ಮೆ ಬಳಸಿ ಎಸೆಯುವ ಸೆಕ್ಸ್‌ ಟಾಯ್‌ ಬ್ಯಾಟರಿಗಳ ಬದಲಿಗೆ USB ಮೂಲಕ ಚಾರ್ಜ್ ಮಾಡಬಹುದಾದ ಸಿಲಿಕಾನ್ ಸಾಧನಗಳನ್ನು ಬಳಸುವುದು ಪರಿಸರಸ್ನೇಹಿ ಗುಣ. ಅಲೋವೆರಾ ಅಥವಾ ನೀರಿನ ಅಂಶವಿರುವ, ಪೆಟ್ರೋಕೆಮಿಕಲ್ ಮುಕ್ತ ಉತ್ಪನ್ನಗಳನ್ನು ಲೂಬ್ರಿಕೆಂಟ್‌ಗಳಾಗಿ ಬಳಸುತ್ತಾರೆ. ಸೆಕ್ಸ್‌ ಮಾತ್ರವಲ್ಲ, ಇವರು ಬಳಸುವ ಮೆನ್ಸ್ಟ್ರುವಲ್ ಕಪ್ ಅಥವಾ ಪೀರಿಯಡ್ ಪ್ಯಾಂಟಿಗಳ ಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಬೆಡ್‌ರೂಮ್‌ನ ಬೆಡ್‌ಶೀಟ್‌ಗಳ ವಿಚಾರದಲ್ಲೂ ಕಾನ್ಶಿಯಸ್‌ ಆಗಿದ್ದಾರೆ. ಹತ್ತಿಯ ಬೆಡ್‌ಶೀಟ್‌ಗಳನ್ನೇ ಬಳಸುತ್ತಾರೆ.

2 ಲಕ್ಷಕ್ಕೆ ಮಂಚಕ್ಕೆ ಕರೆಸಿದ್ದಾಗಲೇ ಸ್ವಾಮೀಜಿ ಲಾಕ್ ಮಾಡಿಕೊಂಡ ಆಂಟಿ! ಮರ್ಯಾದೆಗೆ ಅಂಜಿ ಸುಚಿತ್ರಾಳ ದಾಸನಾದ ಕಮಲಾಕರ್ ಭಟ್

TAGGED:Gen Z New Trend What new trend is green sex?
Share This Article
Facebook Twitter Copy Link Print
Previous Article 2 ಲಕ್ಷಕ್ಕೆ ಮಂಚಕ್ಕೆ ಕರೆಸಿದ್ದಾಗಲೇ ಸ್ವಾಮೀಜಿ ಲಾಕ್ ಮಾಡಿಕೊಂಡ ಆಂಟಿ! ಮರ್ಯಾದೆಗೆ ಅಂಜಿ ಸುಚಿತ್ರಾಳ ದಾಸನಾದ ಕಮಲಾಕರ್ ಭಟ್
Next Article Kidnap attempt ಪಿಯು ವಿದ್ಯಾರ್ಥಿನಿ ಕಿಡ್ನ್ಯಾಪ್‌ಗೆ ಯತ್ನ, ಬಾಲಕಿಗೆ ಗಾಯ, ಆಸ್ಪತ್ರೆಗೆ ದಾಖಲು, ಬೆಳ್ತಂಗಡಿಯಲ್ಲಿ ಆತಂಕ

Popular Posts

Tattoo HIV Case ಟ್ಯಾಟೂ ಪ್ರೇಮಿಗಳೇ ಎಚ್ಚರ..! ಹಚ್ಚೆ ಹಾಕಿಸಿಕೊಂಡ ಮಹಿಳೆಗೆ ತಗುಲಿದ ಎಚ್‌ಐವಿ ಸೋಂಕು

2 Min Read

Wall Fungus ಮಳೆಗಾಲದಲ್ಲಿ ಗೋಡೆಗಳ ಮೇಲೆ ಬೂಷ್ಟು ಸಮಸ್ಯೆಯೇ? ದುಬಾರಿ ಕೆಮಿಕಲ್ ಬೇಡ, ಮನೆಯಲ್ಲೇ ಇದೆ ಸುಲಭ ಪರಿಹಾರ

2 Min Read

Pregnancy Skincare Guide ಗರ್ಭಿಣಿಯರೇ ಎಚ್ಚರ..! ನೀವು ಬಳಸುವ ಮೇಕಪ್ ಪ್ರಾಡಕ್ಟ್ ಮಗುವಿಗೆ ಸೇಫ್ ಅಲ್ವಾ? ತಪ್ಪದೇ ಓದಿ ಈ ಸ್ಟೋರಿ

2 Min Read

Cholesterol problem ದೇಶದ ಹತ್ತು ವಯಸ್ಕರಲ್ಲಿ 9 ಮಂದಿಗೆ ಕೊಲೆಸ್ಟ್ರಾಲ್ ಸಮಸ್ಯೆ!

3 Min Read

You Might Also Like

ದೇಶಪ್ರಮುಖ

Techie mysterious death ಬೆತ್ತಲೆಯಾಗಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಹೊತ್ತೊಯ್ದ ಯುವತಿ ನಿಗೂಢ ಸಾವು!

2 Min Read
ದೇಶಪ್ರಮುಖ

Today Gold Rate | ಚಿನ್ನದ ಬೆಲೆ ಮತ್ತೆ ಏರಿಕೆ

2 Min Read
ದೇಶಪ್ರಮುಖವಿದೇಶ

P V Sindhu Record ಜಪಾನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಬರೆದ ಪಿ.ವಿ. ಸಿಂಧು

3 Min Read
ಕರ್ನಾಟಕಪ್ರಮುಖ

Crime news ಆಸ್ತಿ ಕೊಡದ ತಂದೆಯನ್ನು‌ ಕೊಂ*ದು ತಾನೂ ಜೀವ ಕಳೆದುಕೊಂಡ ಮಗ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?