newsics.com | ನ್ಯೂಸಿಕ್ಸ್
ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ, ‘ಬೇಹದ್’ ಹಾಗೂ ‘ಸರಸ್ವತಿಚಂದ್ರ’ ಧಾರವಾಹಿಗಳ ಮೂಲಕ ಮನೆಮಾತಾಗಿದ್ದ ಜೆನ್ನಿಫರ್ ವಿಂಗೆಟ್ (Jennifer Winget) ಅವರು ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿಂಗಾಪುರ ಮೂಲದ ಉದ್ಯಮಿ ವಿಲಿಯಂ ಇಸ್ಮಾಯಿಲ್ ಅವರೊಂದಿಗೆ ನಟಿ ಹೊಸ ಜೀವನ ಆರಂಭಿಸಿದ್ದು, ಈ ಸಂಸದಭ್ರಮದ ಸುದ್ದಿಯನ್ನು ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋ ಒಂದನ್ನು ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಝಲಕ್
ಜೆನ್ನಿಫರ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮದುವೆಯ ಸುಂದರ ಕ್ಷಣಗಳ ಫೋಟೋ ಸರಣಿಯಿದೆ. ವಿಡಿಯೋದ ಒಂದು ಸ್ಲೈಡ್‌ನಲ್ಲಿ, “ಸಭಿಕರೇ, ದಯವಿಟ್ಟು ಎದ್ದು ನಿಲ್ಲಿ. ನನ್ನ ಪತಿ ‘ವಿಲ್’ ಅವರನ್ನು ಅಧಿಕೃತವಾಗಿ ನಿಮಗೆ ಪರಿಚಯಿಸುತ್ತಿದ್ದೇನೆ” ಎಂದು ಬರೆಯಲಾಗಿದ್ದು, ಅದರ ಮುಂದಿನ ಸ್ಲೈಡ್‌ನಲ್ಲಿ ಮದುವೆಯ ಉಂಗುರಗಳ ಚಿತ್ರದೊಂದಿಗೆ “ಜಸ್ಟ್ ಮ್ಯಾರೀಡ್” ಎಂದು ಬರೆದುಕೊಳ್ಳಲಾಗಿದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ಈ ವಿವಾಹದಲ್ಲಿ ಜೆನ್ನಿಫರ್ ಬಿಳಿ ಬಣ್ಣದ ‘ಆಫ್-ಶೋಲ್ಡರ್ ಕಾರ್ಸೆಟ್’ ಉಡುಪಿನಲ್ಲಿ ಮಿಂಚಿದರೆ, ಪತಿ ವಿಲಿಯಂ ನೀಲಿ ಬಣ್ಣದ ಸೂಟ್ ಹಾಗೂ ಬಿಳಿ ವೇಸ್ಟ್‌ಕೋಟ್ ಧರಿಸಿ ಕಂಗೊಳಿಸಿದ್ದಾರೆ. “ಅಂತಿಮವಾಗಿ ನಮ್ಮ ನಕ್ಷತ್ರಗಳು ಒಂದಾದವು” ಎಂದು ನಟಿ ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಜೆನ್ನಿಫರ್ ವಿಂಗೆಟ್ ಅವರಿಗೆ ಇದು ಎರಡನೇ ಮದುವೆಯಾಗಿದೆ. ಈ ಹಿಂದೆ ಅವರು ‘ದಿಲ್ ಮಿಲ್ ಗಯೆ’ ಸೀರಿಯಲ್‌ನ ಸಹನಟ ಕರಣ್ ಸಿಂಗ್ ಗ್ರೋವರ್ ಅವರನ್ನು ಪ್ರೀತಿಸಿ, 2012 ರಲ್ಲಿ ಮದುವೆಯಾಗಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 2014 ರಲ್ಲಿ ಈ ಜೋಡಿ ವಿಚ್ಛೇದನ ಪಡೆದು ದೂರಾಗಿತ್ತು. ಜೆನ್ನಿಫರ್ ಅವರಿಂದ ದೂರಾದ ಬಳಿಕ ಕರಣ್ ಸಿಂಗ್ ಗ್ರೋವರ್ ಬಾಲಿವುಡ್ ನಟಿ ಬಿಪಾಶಾ ಬಸು ಅವರನ್ನು ಮದುವೆಯಾಗಿದ್ದು, ಪ್ರಸ್ತುತ ಈ ದಂಪತಿಗೆ ದೇವಿ ಎಂಬ ಮಗಳಿದ್ದಾಳೆ. ಇದೀಗ ಜೆನ್ನಿಫರ್ ಕೂಡ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಅಭಿಮಾನಿಗಳು ಹಾಗೂ ಸಹನಟರು ಅವರಿಗೆ ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.
Toxic Movie ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್