newsics.com
ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಐಟಿ ಸರ್ವೀಸ್ ಕಂಪನಿ ಇನ್ಫೋಸಿಸ್ ಇದೀಗ ತನ್ನ ಉದ್ಯೋಗಿಗಳ ವೇತನ ಹೆಚ್ಚಳ ಘೋಷಿಸಿದೆ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ 70 ಗಂಟೆ ಕೆಲಸದ ಹೇಳಿಕೆಯಿಂದ ಆತಂಕದಲ್ಲಿದ್ದ ಉದ್ಯೋಗಿಗಳಿಗೆ ಇನ್ಫೋಸಿಸ್ ಗುಡ್ ನ್ಯೂಸ್ ನೀಡಿದೆ.
ಇನ್ಫೋಸಿಸ್ ಫೆಬ್ರವರಿ ಆರಂಭದಲ್ಲೇ ಉದ್ಯೋಗಿಗಳ ಸ್ಯಾಲರಿ ಹೆಚ್ಚಳ ಘೋಷಿಸಿದೆ. ಈ ಮೂಲಕ ಇತರ ಎಲ್ಲಾ ಕಂಪನಿಗಳಿಗಿಂತ ಮೊದಲು ಉದ್ಯೋಗಿಗಳ ವೇತನ ಹೆಚ್ಚಿಸಿದ ಕಂಪನಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಉದ್ಯೋಗ ಲೆವೆಲ್ 5 ಹಾಗೂ ಅದಕ್ಕಿಂತ ಕಡಿಮೆ ಲೆವೆಲ್‌ನಲ್ಲಿರುವ ಎ ಉದ್ಯೋಗಿಗಳ ತಿಂಗಳ ವೇತನ ಹೆಚ್ಚಳ 2024ರ ಆರಂಭದಿಂದಲೇ ಆಗಲಿದೆ.
ಸಾಪ್ಟ್‌ವೇರ್ ಎಂಜಿನಿಯರ್, ಸೀನಿಯರ್ ಎಂಜಿನಿಯರ್, ಸಿಸ್ಟಮ್ ಎಂಜಿನಿಯರ್, ಕನ್ಸಲ್ಟೆಂಟ್ಸ್ ನೌಕರರಿಗೆ ವೇತನ ಹೆಚ್ಚಳವಾಗಲಿದ. ಜನವರಿ 1, 2024ರಿಂದ ಅನ್ವಯವಾಗುವಂತೆ ಉದ್ಯೋಗಿಗಳ ವೇತನ ಹೆಚ್ಚಳವಾಗಲಿದೆ. ಈ ಹಂತದ ಉದ್ಯೋಗಿಗಳಿಗೆ ಬರೋಬ್ಬರಿ 1 ವರ್ಷದ ಹೆಚ್ಚಳ ವೇತನ ಕೈಸೇರಲಿದೆ.
ಜಾಬ್ ಲೆವೆಲ್ 6 ಹಾಗೂ ಅದಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳ ವೇತನ ಹೆಚ್ಚಳ ಆದೇಶ ಏಪ್ರಿಲ್ 1, 2024ರಿಂದ ಅನ್ವಯವಾಗಲಿದೆ. ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೆಲಿವರಿ ಮ್ಯಾನೇಜರ್, ಸೀನಿಯರ್ ಡೆಲಿವರಿ ಮ್ಯಾನೇಜರ್ ಸೇರಿದ್ದಾರೆ.
ಇನ್ಫೋಸಿಸ್ ಪ್ರತಿ ವರ್ಷ ಎರಡು ಹಂತದಲ್ಲಿ ಉದ್ಯೋಗಿಗಳ ವೇತನ ಹೆಚ್ಚಳ ಮಾಡಲಿದೆ. ಈ ಹಿಂದೆ 2023ರಲ್ಲಿ ಇನ್ಫೋಸಿಸ್ ವೇತನ ಹೆಚ್ಚಳ ಮಾಡಿತ್ತು.
ಇನ್ಫೋಸಿಸ್, ಆಯ್ದ ಕಾಲೇಜುಗಳಲ್ಲಿ ಹೊಸ ಟ್ರೈನಿಂಗ್ ಪ್ರೋಗ್ರಾಮ್ ಶುರು ಮಾಡಿದ್ದು, ‘ಪವರ್ ಪ್ರೋಗ್ರಾಮ್‌ನಲ್ಲಿ ಫ್ರೆಷರ್ಸ್‌ಗೆ ವರ್ಷಕ್ಕೆ 9 ಲಕ್ಷ ರೂಪಾಯಿ ಸಂಬಳ ನೀಡಲು ನಿರ್ಧರಿಸಿದೆ.
ಸಾಮಾನ್ಯವಾಗಿ ಇನ್ಫೋಸಿಸ್ ಫ್ರೆಷರ್ಸ್‌ಗೆ ವರ್ಷಕ್ಕೆ 4 ಲಕ್ಷ ರೂಪಾಯಿ ಸಂಬಳ ನೀಡ್ತಿತ್ತು. ಈಗ ತುಂಬ ಜನ ಕೆಲಸ ಬಿಟ್ಟು ಹೋಗುತ್ತಿರುವ ಕಾರಣ ವೇತನ ಹೆಚ್ಚಳಕ್ಕೆ ಮುಂದಾಗಿದೆ.
ಕೆಲವು ಕಾಲೇಜುಗಳಲ್ಲಿ ಮಾತ್ರ ಈ ಟ್ರೈನಿಂಗ್ ಪ್ರೋಗ್ರಾಮ್ ಇದೆ. ಇದರಲ್ಲಿ ಸೇರಿಕೊಳ್ಳುವ ಫ್ರೆಷರ್ಸ್‌ಗೆ ವರ್ಷಕ್ಕೆ 9 ಲಕ್ಷ ರೂಪಾಯಿವರೆಗೆ ಸಂಬಳ ಕೊಡುವ ಯೋಜನೆಗೆ ಇನ್ಫೋಸಿಸ್ ಬದ್ಧವಾಗಿದೆ.
ಟ್ರೈನಿಂಗ್ ಮುಗಿದ ವಿದ್ಯಾರ್ಥಿಗಳನ್ನ ಕೆಲಸಕ್ಕೆ ತೆಗೆದುಕೊಳ್ಳುವಾಗ, ಬರೀ ಪರೀಕ್ಷೆ, ಇಂಟರ್ವ್ಯೂ ಮಾತ್ರ ಅಲ್ಲ, ಸಾಫ್ಟ್‌ವೇರ್ ಚಾಲೆಂಜ್‌ಗಳು, ಪ್ರೋಗ್ರಾಮಿಂಗ್ ಟೆಸ್ಟ್‌ಗಳನ್ನೂ ಮಾಡಲಿದೆ.
ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಬಿಸಿಲಿನ ತಾಪದ ಜತೆಗೆ ಭಾರೀ ಮಳೆ ಬೀಳುವ ಮುನ್ಸೂಚನೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ…
Optical illusion : 6 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬಣ್ಣದ ಚಿಟ್ಟೆಯನ್ನು ಹುಡುಕಿ!