newsics.com
ಬೆಂಗಳೂರು :
ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಆಗಿರುವ ಶ್ರೇಯಾ ಮಿತ್ರಾ ಎಂಬವವರು ಒಡಿಶಾದ ಪುರಿಗೆ ಭೇಟಿ ನೀಡುವ ಉತ್ಸಾಹದಲ್ಲಿದ್ದರು. ಅದಕ್ಕಾಗಿ ಒಳ್ಳೆಯ ಹೋಟೆಲ್ಗಾಗಿ ಅವರು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಅಲ್ಲಿ ಮೇಫೇರ್ ಹೆರಿಟೇಜ್ ಪುರಿ ಎಂಬ ಹೋಟೆಲ್ ಕಂಡಿದೆ. ಅದರ ಮೇಲೆ ಕ್ಲಿಕ್ ಮಾಇಡದನ ಶ್ರೇಯಾ. ಅದರ ಸೌಕರ್ಯಗಳಿಗೆ ಮಾರು ಹೋಗಿ ಕಾಂಟ್ಯಾಕ್ಟ್ ನಂಬರ್ ತೆಗೆದುಕೊಂಡು ಕಾಲ್ ಮಾಡಿದ್ದಾರೆ.
ಉಳಿದುಕೊಳ್ಳುವ ಬಗ್ಗೆ ಅವರಲ್ಲಿ ವಿಚಾರಿಸಿದ್ದಾರೆ. ಆ ಕಡೆ ಇದ್ದ ವಂಚಕ ರೂಮ್ ಹಾಗೂ ಅದರ ಪೂರ್ತಿ ವಿವರಗಳ ಫೋಟೋಗಳನ್ನು ಶ್ರೇಯಾಗೆ ಕಳುಹಿಸಿದ್ದಾರೆ. ಅಲ್ಲದೇ ರೂಮ್ ಬುಕ್ಕಿಂಗ್ನ ಸಂಪೂರ್ಣ ವಿವವರನ್ನು ಹೇಳಿದ್ದಾನೆ ಅಲ್ಲದೇ ಸದ್ಯ ಕೊಡಬೇಕಾದ ಹಣದ ಬಗ್ಗೆಯೂ ಹೇಳಿದ್ದಾರೆ.
ಫೇಕ್ ಇನ್ವೈಸ್ ಕಳುಹಿಸಿದ್ದಾನೆ. ಆದರೆ ಶ್ರೇಯಾ ಇ-ಮೇಲ್ ಕನ್ಫರ್ಮೇಷನ್ ಬಗ್ಗೆ ಆತನಲ್ಲಿ ಕೇಳಿದ್ದಾರೆ. ಮಾರನೇ ದಿನ ಮತ್ತೆ ಶ್ರೇಯಾಗೆ ಕಾಲ್ ಮಾಡಿದ ವಂಚಕ ನಿಮ್ಮ ಗೂಗಲ್ ಪೇ ಒಪನ್ ಮಡಿ ಮತ್ತು ಪೇಯ್ಲಿ ಕ್ಲಿಕ್ ಮಾಡಿದಲ್ಲಿ ನಿಮ್ಮ ಬುಕ್ಕಿಂಗ್ ಐಡಿ ಕನ್ಫರ್ಮೆಷನ್ ನೀವು ಸ್ವೀಕರಿಸಲಿದ್ದೀರಿ ಎಂದು ಹೇಳಿದ್ದಾನೆ. ಶ್ರೇಯಾಗೆ ಈ ಬಾರಿ ಫುಲ್ ಡೌಟ್ ಬಂದಿದೆ. ಇ-ಮೇಲ್ ಕನ್ಫರ್ಮೇಷನ್ ಬರುವವರೆಗೂ ನಾನು ಪೇಮೆಂಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ವಂಚಕ ಫೋನ್ ಕಟ್ ಮಾಡಿದ್ದಾರೆ.
ಬಳಿಕ ಶ್ರೇಯಾ ಮಿತ್ರಾ ಮೇಫೆರ್ನ ಅಧಿಕೃತ ವೆಬ್ಸೈಟ್ ಹುಡುಕಿದ್ದಾರೆ. ಮತ್ತು ತಮ್ಮ ಬುಕ್ಕಿಂಗ್ ಕನ್ಫರ್ಮಮೇಷನ್ ಬಗ್ಗೆ ಮಾಹಿತಿ ಕೇಳಿದ್ದಾರೆ. ಆಗ ಹೋಟೆಲ್ನವರು ನಿಮಗೆ ಯಾರೋ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಶ್ರೇಯಾ ಒಟ್ಟು 93,600 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ತಮಗಾದ ಈ ವಂಚನೆಯನ್ನು ಶ್ರೇಯಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/reel/DFcDUFGpoqF/?igsh=NnI1cHQ4cGo1ZGxo