newsics.com
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.
ಎಂಟನೇ ವೇತನ ಆಯೋಗ ರಚನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಪ್ರಕಟಿಸಿದ್ದಾರೆ.
ನೌಕರರ ವೇತನ ಮತ್ತು ನಿವೃತ್ತರಿಗೆ ಪಾವತಿಸುವ ಪಿಂಚಣಿಗಳ ಪರಿಷ್ಕರಣೆಗೆ ಫಿಟ್ಮೆಂಟ್ ಅಂಶ ಮತ್ತು ಇತರ ವಿಧಾನಗಳನ್ನು ಶಿಫಾರಸು ಮಾಡಲು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗಗಳನ್ನು ರಚಿಸಲಾಗುತ್ತದೆ.
2014ರ ಫೆಬ್ರವರಿಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ 7ನೇ ವೇತನ ಆಯೋಗ ರಚಿಸಿತ್ತು. ಇದರ ಶಿಫಾರಸುಗಳನ್ನು ಸರ್ಕಾರವು ಜನವರಿ 2016ರಿಂದ ಜಾರಿಗೆ ತಂದಿತು.
ಜನವರಿ 2026ರಿಂದ ವೇತನವನ್ನು ಪರಿಷ್ಕರಿಸಲು 8ನೇ ವೇತನ ಆಯೋಗವನ್ನು ಶೀಘ್ರವಾಗಿ ರಚಿಸಬೇಕೆಂದು ಒತ್ತಾಯಿಸುತ್ತಿರುವ ನೌಕರರ ಸಂಘಗಳು ಮತ್ತು ಸಿಬ್ಬಂದಿ ಸಂಘಗಳ ನಿರಂತರ ಬೇಡಿಕೆಗಳ ಮಧ್ಯೆ ವೈಷ್ಣವ್ ಈ ಘೋಷಣೆ ಮಾಡಿದ್ದಾರೆ.
https://twitter.com/i/status/1879827137609539976
Firing in Bidar ಬೀದರ್ನಲ್ಲಿ ಎಟಿಎಂ ವಾಹನದ ಮೇಲೆ ಹಾಡಹಗಲೇ ಗುಂಡಿನ ದಾಳಿ: ಇಬ್ಬರ ಸಾವು
ನಂಜನಗೂಡಲ್ಲೂ ದುಷ್ಕೃತ್ಯ: ಹರಕೆಗೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿ ವಿಕೃತಿ
Health Info… ರಾಜ್ಯದ ಮಕ್ಕಳಲ್ಲಿ ಶೀತ,ಕೆಮ್ಮು, ಉಸಿರಾಟ ಸಮಸ್ಯೆ ಹೆಚ್ಚಳ: ತಜ್ಞರ ಸಲಹೆ ಏನು?
Realbotics ಸಿಂಗಲ್ ಬಾಯ್ಸ್ಗೆ ಖುಷಿ ಸುದ್ದಿ… ಮಾರುಕಟ್ಟೆಗೆ ಬಂದಳು ರೊಮ್ಯಾಂಟಿಕ್ ಎಐ ಪ್ರೇಯಸಿ!
Relationship ಶೇ.60 ಮಹಿಳೆಯರು, 53% ಪುರುಷರು ಹೆಚ್ಚಿನ ‘Sಕ್ಸ್’ ಬಯಸುತ್ತಾರಂತೆ!