newsics.com
ಪಿರಿಯಡ್ಸ್ಗೆ ಒಂದು ವಾರ ಮೊದಲು ಮತ್ತು ಪಿರಿಯಡ್ಸ್ ನಂತರದ ಒಂದು ವಾರದ ಅವಧಿಯಲ್ಲಿ ದೈಹಿಕ ಸಂಪರ್ಕ ಹೊಂದಿದರೆ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆ. ಯಾವುದೇ ಗರ್ಭನಿರೋಧಕಗಳ ಅಗತ್ಯವಿಲ್ಲದೇ ಗರ್ಭಾವಸ್ಥೆಯನ್ನು ತಡೆಗಟ್ಟಲು ಇದು ಉತ್ತಮ ಮಾರ್ಗ.
ಈ ವಿಧಾನವು ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಎಂದು ನಂಬಬಹುದು. ಇದು ಪಿರಿಯಡ್ಸ್ ಬಂದ ನಂತರ ಮತ್ತು ಬರುವ ಮುಂಚಿತ ದಿನಗಳಲ್ಲಿ ನಡೆಯುವ ಪ್ರಕ್ರಿಯೆ. ಇವು ಸಂಭೋಗಕ್ಕೆ ಸುರಕ್ಷಿತವಾದ ದಿನಗಳು ಎಂದು ಪರಿಗಣಿಸಬಹುದು.
ಈ ದಿನಗಳಲ್ಲಿ ನೀವು ಯಾವುದೇ ಗರ್ಭನಿರೋಧಕಗಳನ್ನು ಧರಿಸದೇ ದೈಹಿಕ ಸಂಪರ್ಕ ಹೊಂದಿದರೆ ಗರ್ಭಿಣಿಯಾಗುವ ಭಯ ಇರುವುದಿಲ್ಲ. ಆದರೆ ಮಹಿಳೆಯರು ತಮ್ಮ ಪಿರಿಯಡ್ಸ್ ಅವಧಿ ಮತ್ತು ಅಂಡೋತ್ಪತ್ತಿ ಸಂಭವಿಸುವ ದಿನಗಳ ಕುರಿತು ಸ್ಪಷ್ಟವಾಗಿ ತಿಳಿದಿರಬೇಕು. ಇವುಗಳನ್ನು ‘ಸುರಕ್ಷಿತ ದಿನಗಳು’ ಎಂದು ಕರೆಯಲಾಗುತ್ತದೆ.
ಈ ಸುರಕ್ಷಿತ ದಿನಗಳನ್ನು ಸರಿಯಾಗಿ ತಿಳಿದು ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಿಣಿಯಾಗುವ ಆತಂಕ ಕಡಿಮೆ. ಆದರೆ, ಇದು ಲೈಂಗಿಕವಾಗಿ ಹರಡುವ ಸೋಂಕುಗಳ ವಿರುದ್ಧ ರಕ್ಷಣೆ ನೀಡುವುದಿಲ್ಲ. ಅದಕ್ಕಾಗಿ ಕಾಂಡೋಮ್ಗಳನ್ನು ಬಳಸುವುದು ಉತ್ತಮ. ಬಾಳ ಸಂಗಾತಿಯಾಗಿದ್ದರೆ ಹಾಗೂ ಅವರ ಆರೋಗ್ಯದ ಕುರಿತು ತಿಳಿದಿದ್ದರೆ ಕಾಂಡೋಮ್ ಅಗತ್ಯ ಹೆಚ್ಚಿರುವುದಿಲ್ಲ.
ಈ ಸುರಕ್ಷಿತ ದಿನಗಳು, ನಿಮ್ಮ ಮಟ್ಟಿನ ದಿನಗಳನ್ನು ಟ್ರ್ಯಾಕ್ ಮಾಡುವ ಮೂಲಕ ಪ್ರಾರಂಭಿಸಿ. ಸಾಮಾನ್ಯವಾಗಿ, ನಿಮ್ಮ ಪಿರಿಯಡ್ಸ್ ಮೊದಲ ದಿನವು ನಿಮ್ಮ ಮುಟ್ಟಿನ ಆರಂಭವನ್ನು ಸೂಚಿಸುತ್ತದೆ ಮತ್ತು ಕೊನೆಯ ದಿನವು ಅಂತ್ಯವಾಗಿರುತ್ತದೆ. ಪಿರಿಯಡ್ಸ್ ನಂತರದ ಮೊದಲ ಐದು ದಿನಗಳು ಸಂಭೋಗಕ್ಕೆ ಅಸುರಕ್ಷಿತ ದಿನಗಳು.
ಅದರ ನಂತರ ಬರುವ ಏಳು ದಿನಗಳು ಸುರಕ್ಷಿತ. ಏಕೆಂದರೆ ಅಂಡೋತ್ಪತ್ತಿ ಸಾಮಾನ್ಯವಾಗಿ ನಿಮ್ಮ ಮುಟ್ಟಿನ 14 ನೇ ದಿನದಂದು ಸಂಭವಿಸುತ್ತದೆ. ಅಲ್ಲದೆ ಮುಟ್ಟು ಪ್ರಾರಂಭವಾಗುವ ಹತ್ತಿರದ ದಿನಗಳಲ್ಲಿಯೂ ಲೈಂಗಿಕ ಕ್ರಿಯೆ ನಡೆಸಬಹುದು. ಅಲ್ಲದೇ ಈ ಅವಧಿಯಲ್ಲಿ ಮಹಿಳೆಯರ ಕಾಮಾಸಕ್ತಿಯೂ ಹೆಚ್ಚಿರುವುದರಿಂದ ಲೈಂಗಿಕ ಚಟುವಟಿಕೆ ಉತ್ತಮ ಹಾಗೂ ಉಲ್ಲಾಸದಾಯಕವಾಗಿರುತ್ತದೆ.
ಮಾಜಿ ಲವರ್ ಜತೆ ರೊಮ್ಯಾನ್ಸ್ ಮಾಡುವ ಕನಸು ಬಿತ್ತೇ? ಅದಕ್ಕೆ ಕಾರಣ ಇದೇ..!
ಇದು ಸಾಮೂಹಿಕ ಬೆತ್ತಲೆ ಮದುವೆ: 29 ಜೋಡಿ ವಧು-ವರರಷ್ಟೇ ಅಲ್ಲ, ಬಂಧುಗಳ ಮೈಮೇಲೂ ಇರಲಿಲ್ಲ ಒಂಚೂರೂ ಬಟ್ಟೆ!
ಪುರುಷನೊಂದಿಗೆ ಮಹಿಳೆ ಹೋಟೆಲ್ ರೂಮ್ಗೆ ಹೋದರೆ ದೈಹಿಕ ಸಂಬಂಧಕ್ಕೆ ಸಮ್ಮತಿಯಿದೆ ಎಂದರ್ಥವಲ್ಲ: ಹೈಕೋರ್ಟ್