newsics.com
ನವದೆಹಲಿ : ಇಲ್ಲೊಬ್ಬಳು ಯುವತಿ ಮಾತ್ರ ಹುಡುಗರ ಸಹವಾಸವೇ ನನಗೆ ಬೇಡಪ್ಪಾ ಎಂದು ಮರದೊಂದಿಗೆ ಡೇಟಿಂಗ್ ಮಾಡಲು ಶುರು ಮಾಡಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವಿಚಿತ್ರ ಪ್ರೇಮಕಥೆಯನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ.
ಇಲ್ಲೊಬ್ಬಳು ಯುವತಿ ಮರವನ್ನೇ ತನ್ನ ಬಾಯ್‌ಫ್ರೆಂಡ್ ಆಗಿ ಮಾಡಿಕೊಂಡಿದ್ದಾಳೆ. ಇನ್‌ಫ್ಲುಯೆನ್ಸರ್ ಐವಿ ಬ್ಲೂಮ್ ಮರದೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಈ ಕುರಿತ ವಿಡಿಯೋವನ್ನು ಆಕೆ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾಳೆ. ಕಳೆದ ಎರಡು ವಾರಗಳಿಂದ ನಾನು ಮರದೊಂದಿಗೆ ಡೇಟಿಂಗ್ ಮಾಡುತ್ತಿದ್ದು, ಮರದೊಂದಿಗೆ ಮೂವಿ ನೋಡುವುದರಿಂದ ಹಿಡಿದು ಟ್ರಿಪ್ ಹೋಗುವುದರವರೆಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ ಆ ಮರಕ್ಕೆ ಎಐ ವ್ಯವಸ್ಥೆಯನ್ನು ಸಂಯೋಜಿಸುವ ಮೂಲಕ ಮರವೂ ಸಂಭಾಷಣೆ ನಡೆಸುವಂತೆ ಮಾಡಿದ್ದಾಳೆ.
Ivy Bloom ಹೆಸರಿನ ಯುಟ್ಯೂಬ್ ಚಾನೆಲ್‌ನಲ್ಲಿಈ ಡೇಟಿಂಗ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಪುಟ್ಟ ಮರದೊಂದಿಗೆ ಐವಿ ಬ್ಲೂಮ್ ಡೇಟಿಂಗ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಐವಿ ಮರವನ್ನು ತಬ್ಬಿಕೊಂಡು ಮುತ್ತುಕೊಡುವುದರಿಂದ ಹಿಡಿದು, ಅದರೊಂದಿಗೆ ಮೂವಿ ನೋಡುತ್ತಾ ರೊಮ್ಯಾಂಟಿಕ್ ಪಿಕ್‌ನಿಕ್ ಕೂಡಾ ಹೋಗುತ್ತಿರುತ್ತಾಳೆ. ಎರಡು ವಾರಗಳಿಂದ ಈ ಬಾಯ್‌ಫ್ರೆಂಡ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ, ಈ ಅನುಭವವು ತುಂಬಾನೇ ಅದ್ಭುತವಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.