newsics.com
ಬೆಂಗಳೂರು: ರಾಜ್ಯದಲ್ಲಿ ಸುಮಾರು 6,158 ಸರ್ಕಾರಿ ಶಾಲೆಗಳಲ್ಲಿ ತಲಾ ಒಬ್ಬರು ಶಿಕ್ಷಕರಿದ್ದು, 1.38 ಲಕ್ಷ ವಿದ್ಯಾರ್ಥಿಗಳ ಜವಾಬ್ದಾರಿ ಹೊಂದಿದ್ದರೆ, ಶೂನ್ಯ ದಾಖಲಾತಿ ಹೊಂದಿರುವ 530 ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ. ಆದರೆ 358 ಶಿಕ್ಷಕರಿದ್ದಾರೆ.
ಇದು ವ್ಯವಸ್ಥೆಯಲ್ಲಿನ ಗಂಭೀರ ಲೋಪವನ್ನು ತೋರಿಸುತ್ತದೆ. ಕೆಲವು ಶಾಲೆಗಳು ಕೆಲವೇ ಶಿಕ್ಷಕರನ್ನು ಹೊಂದಿದ್ದರೆ (ಹಲವು ಸಂದರ್ಭಗಳಲ್ಲಿ ಒಬ್ಬರು) ಇನ್ನೂ ಕೆಲವು ಶಾಲೆಗಳಲ್ಲಿ ಮಕ್ಕಳು ದಾಖಲಾಗದಿದ್ದರೂ ಹೆಚ್ಚುವರಿ ಸಿಬ್ಬಂದಿ ಇದ್ದಾರೆ. ಆದರೆ, ಅಂತಹ ಶಾಲೆಗಳ ಶಿಕ್ಷಕರನ್ನು ಅಗತ್ಯವಿರುವೆಡೆಗೆ ವರ್ಗಾಯಿಸಲಾಗಿದೆ ಎಂದು ಇಲಾಖೆ ಹೇಳಿದೆ.
ರಾಜ್ಯದಲ್ಲಿ ಒಬ್ಬರೇ ಶಿಕ್ಷಕರನ್ನು ಹೊಂದಿರುವ ಒಟ್ಟು ಶಾಲೆಗಳ ಸಂಖ್ಯೆ 2023-24ರಲ್ಲಿದ್ದ 6,360 ರಿಂದ 2024-25ರಲ್ಲಿ 6,158ಕ್ಕೆ ಅಂದರೆ 202ಕ್ಕೆ ಕಡಿಮೆಯಾಗಿದೆ. ಆದಾಗ್ಯೂ, ದಾಖಲಾತಿಯು 33,794 ರಷ್ಟು ಕಡಿಮೆಯಾಗಿದೆ. ಇದಕ್ಕೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಏರಿಕೆಯಾಗಿರಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಷಯ ಶಿಕ್ಷಕರ ಕೊರತೆ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಯಿಂದ ದೂರ ಮಾಡುತ್ತಿದೆ. ಅನೇಕ ಸಂದರ್ಭಗಳಲ್ಲಿ ಕನ್ನಡ ಅಥವಾ ಸಮಾಜಶಾಸ್ತ್ರ ಕಲಿಸಲು ಮಾತ್ರ ಶಿಕ್ಷಕರನ್ನು ನಿಯೋಜಿಸಲಾಗಿದೆ ಮತ್ತು ಗಣಿತ ವಿಜ್ಞಾನ ಅಥವಾ ಇಂಗ್ಲಿಷ್‌ನಂತಹ ಪ್ರಮುಖ ವಿಷಯಗಳಲ್ಲ. ಅದೇ ಸಮಯದಲ್ಲಿ ಶೇ,100 ರಷ್ಟು ಉತ್ತೀರ್ಣ ದರ ಕಾಪಾಡಿಕೊಳ್ಳಲು ಶಾಲೆಗಳು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೊರಹಾಕುತ್ತಿವೆ ಎಂದು ತಜ್ಞರು ಹೇಳುತ್ತಾರೆ.
ತಮ್ಮ ಮಕ್ಕಳು ಗಣಿತ ಮತ್ತು ವಿಜ್ಞಾನವನ್ನು ಕಲಿಸುವ ಶಾಲೆಗಳಿಗೆ ಹೋಗಬೇಕೆಂದು ಪೋಷಕರು ಬಯಸುತ್ತಾರೆ. ಇದರಿಂದ ಅನೇಕರು ಅನುದಾನಿತ ಅಥವಾ ಖಾಸಗಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ.
ಈ ಮಧ್ಯೆ, ಸರ್ಕಾರ ರಾಜ್ಯಾದ್ಯಂತ ಸುಮಾರು 5,000 ಶಿಕ್ಷಕರ ನೇಮಕಾತಿಗೆ ಇಲಾಖೆ ಚಾಲನೆ ನೀಡಿದೆ. ಇದು ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಶಿಕ್ಷಕರ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು.
ಮಾಜಿ ಲವರ್ ಜತೆ ರೊಮ್ಯಾನ್ಸ್ ಮಾಡುವ ಕನಸು ಬಿತ್ತೇ? ಅದಕ್ಕೆ ಕಾರಣ ಇದೇ..!
ಕುಮಾರಸ್ವಾಮಿ ವಿರುದ್ಧ ವಿವಾದಿತ ಹೇಳಿಕೆ: ಜಮೀರ್ ಅಹ್ಮದ್ ಖಾನ್ ವಿರುದ್ಧ ಪೊಲೀಸ್ ಕಂಪ್ಲೈಂಟ್