newsics.com
ಬೆಂಗಳೂರು : ಇತ್ತೀಚೆಗೆ ಸಮಾರಂಭವೊಂದರಲ್ಲಿ ಶಾರುಖ್ ಅವರು ದುಬಾರಿ ವಾಚ್ ಧರಿಸಿ ಸಖತ್ ಆಗಿ ಮಿಂಚಿದ್ದಾರೆ. ಈ ಬೆನ್ನಲ್ಲೇ ವಾಚ್ ಅಸಲಿ ಬೆಲೆ ತಿಳಿದು ನೆಟ್ಟಿಗರು ಶಾಕ್ ಆಗಿದ್ದಾರೆ.
ಒಂದಲ್ಲ, ಎರಡಲ್ಲ ಬರೋಬ್ಬರಿ 5 ಕೋಟಿ ರೂ. ಬೆಲೆ ಬಾಳುವ ವಾಚ್ ಅನ್ನು ಧರಿಸಿಕೊಂಡು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.
ಶಾರುಖ್ ಅವರು ‘ಆಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್ ಡಬಲ್ ಬ್ಯಾಲೆನ್ಸ್ ವೀಲ್ ಓಪನ್ವರ್ಕ್ಡ್ ವಾಚ್’ ಅನ್ನು ಧರಿಸಿದ್ದಾರೆ. ಇದು 41 ಎಂಎಂ, 18-ಕ್ಯಾರೆಟ್ ರೋಸ್ ಗೋಲ್ಡ್ ಈ ವಾಚ್ ಅನ್ನು ರಚಿಸಲಾಗಿದೆ. ಶಾರುಖ್ ಧರಿಸಿದ್ದ ಈ ವಾಚ್ ಸಖತ್ ಸ್ಟೈಲೀಶ್ ಆಗಿದ್ದು, ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ.