newsics.com
ಮುಂಬೈ: ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್ನ ಚೇರ್ಮನ್ ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಎರಡು ದಿನಗಳ ಹಿಂದೆ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದ ರತನ್ ಟಾಟಾ ಎಂದಿನ ಚೆಕಪ್ಗಾಗಿ ಆಸ್ಪತ್ರೆಗೆ ಬಂದಿದ್ದೇನೆ ಎಂದು ತಿಳಿಸಿದ್ದರು. ಆದರೆ, ಈಗ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ರಾಯಿಟರ್ಸ್ ಬುಧವಾರ ವರದಿ ಮಾಡಿದೆ. 86 ವರ್ಷ ವಯಸ್ಸಿನ ರತನ್ ಟಾಟಾ
ಅವರು ಬುಧವಾರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಅವರ ಪರಿಸ್ಥಿತಿ ಹೇಗಿದೆ. ಯಾವ ರೀತಿಯ ಸಮಸ್ಯೆ ಅವರಿಗೆ ಕಾಡುತ್ತಿದೆ ಎನ್ನುವುದು ಈವರೆಗೂ ಬಹಿರಂಗವಾಗಿಲ್ಲ.
1991ರಲ್ಲಿ ಟಾಟಾ ಸನ್ಸ್ನ ಚೇರ್ಮನ್ ಆಗಿದ್ದ ರತನ್ ಟಾಟಾ, 2012ರವರೆಗೂ ಈ ಹುದ್ದೆಯಲ್ಲಿದ್ದರು. ತಮ್ಮ ಮರಿ ಮುತ್ತಜ್ಜ ಸ್ಥಾಪನೆ ಮಾಡಿದ್ದ ಗ್ರೂಪ್ ಅನ್ನು ದೊಡ್ಡ ಮಟ್ಟದಲ್ಲಿ ಯಶಸ್ಸಿನ ಪಥದಲ್ಲಿ ಸಾಗಿಸಿದ್ದರು.
1996ರಲ್ಲಿ ಟಾಟಾ ಟೆಲಿಸರ್ವೀಸಸ್ ಕಂಪನಿ ಸ್ಥಾಪನೆ ಮಾಡಿದ್ದರೆ, 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಕಂಪನಿಯನ್ನು ಸಾರ್ವಜನಿಕ ಪಾಲುದಾರ ಕಂಪನಿಯನ್ನಾಗಿ ಮಾಡಿದ್ದರು. ಟಾಟಾ ಸನ್ಸ್ನಿಂದ ಕೆಳಗಿಳಿದ ಬಳಿಕ ಅವರನ್ನು ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಕೆಮಿಕಲ್ಸ್ನ ಗೌರವ ಅಧ್ಯಕ್ಷ ಪದವಿಯನ್ನು ನೀಡಲಾಯಿತು ಎಂದು ಕಂಪನಿಯ ವೆಬ್ಸೈಟ್ನಲ್ಲಿ ವಿವರಿಸಲಾಗಿದೆ.
ತುಟಿ ಸುಡಲಿದೆ ಕಾಫಿ: ಅ.15ರಿಂದ ಕೆಜಿಗೆ 100 ರೂ. ತುಟ್ಟಿಯಾಗಲಿದೆ ಕಾಫಿ ಪೌಡರ್