newsics.com
ಕೇರಳ : ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ನಡೆಸುವ ಬಂಪರ್ ಲಾಟರಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ. 2024ನೇ ಸಾಲಿನ ಬಂಪರ್ ಲಾಟರಿಯಲ್ಲಿ ಮೊದಲ ಬಹುಮಾನ 25 ಕೋಟಿ ರೂಪಾಯಿಗಳನ್ನು ಮೈಸೂರಿನ್ ವ್ಯಕ್ತಿಯೊಬ್ಬರು ಪಡೆದುಕೊಂಡಿದ್ದಾರೆ.
ಇಂದು ಮಧ್ಯಾಹ್ನ 2 ಗಂಟೆಗೆ ಕೇರಳದ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಅವರು ಓಣಂ ಲಾಟರಿ ಗೆದ್ದ ನಂಬರ್ ಯಾವುದು ಅನ್ನೋದನ್ನ ಅನೌನ್ಸ್ ಮಾಡಿದರು. 2024ರ ಓಣಂ ಬಂಪರ್ ಲಾಟರಿಯ ಗೆದ್ದಿರುವ ಲಕ್ಕಿ ನಂಬರ್ TG 434222. ಈ ಲಾಟರಿ ನಂಬರ್ ಇರುವ ಟಿಕೆಟ್‌ಗೆ 25 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ.
ಬಂಪರ್ ಲಾಟರಿಯ ಲಕ್ಕಿ ನಂಬರ್ TG 434222 ವಯನಾಡಿನ ಏಜೆಂಟ್‌ನದ್ದಾಗಿದೆ. ಎನ್.ಜಿ.ಆರ್ ಲಾಟರಿ ಸಂಸ್ಥೆ ನಾಗರಾಜ್ ಎಂಬುವವರಿಗೆ ಈ ಬಹುಮಾನ ಸಿಕ್ಕಿದೆ ಎಂದು mathrubhumi.com ವರದಿ ಮಾಡಿದೆ. ಇನ್ನೂ ವಿಶೇಷ ಏನಂದ್ರೆ 25 ಕೋಟಿ ರೂಪಾಯಿ ಗೆದ್ದಿರುವ ನಾಗರಾಜ್ ಎಂಬುವವರು ಮೈಸೂರಿನ ಮೂಲದವರು ಅನ್ನೋ ಮಾಹಿತಿ ಸಿಕ್ಕಿದೆ. ನಾಗರಾಜ್ ಅವರು ವಯನಾಡಿನಲ್ಲಿ ತಮ್ಮ ಸಹೋದರನ ಜೊತೆ ಸೇರಿ ಲಾಟರಿ ಏಜೆಂಟ್ ನಡೆಸುತ್ತಿದ್ದಾರೆ.
ಮೊದಲ ಬಹುಮಾನ 25 ಕೋಟಿ ರೂಪಾಯಿ. ದ್ವಿತೀಯ ಬಹುಮಾನ 20 ಮಂದಿಗೆ 1 ಕೋಟಿ ರೂಪಾಯಿ. ಹೀಗೆ ಒಟ್ಟು 9 ಹಂತದಲ್ಲಿ ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಈ ಬಾರಿ ಒಟ್ಟು 125 ಕೋಟಿ ರೂಪಾಯಿ ಲಕ್ಕಿ ಡ್ರಾ ವಿಜೇತರಿಗೆ ವಿತರಣೆ ಮಾಡಲಾಗುತ್ತಿದೆ.