newsics.com
ಬೆಂಗಳೂರು: ಅಕ್ಟೋಬರ್ 15ರಿಂದ ಪ್ರತಿ ಕೆ.ಜಿ. ಕಾಫಿ ಪುಡಿ ದರ 100 ರೂ. ದುಬಾರಿಯಾಗಲಿದೆ.
ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಶನ್ ಕಾಫಿ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಒಂದು ವಾರದಲ್ಲಿ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಅಸೋಸಿಯೇಶನ್ ಅಧ್ಯಕ್ಷ ಪೆರಿಕಲ್ ಸುಂದರ್, ಶ್ರೇಷ್ಠ ಗುಣಮಟ್ಟದ ಕಾಫಿ ಬೀಜ ದೊರೆಯುತ್ತಿಲ್ಲ. ಇದರ ಜತೆಗೆ ಉತ್ಪಾದನಾ ನಿರ್ವಹಣೆ ವೆಚ್ಚ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಫಿ ಮಾರಾಟದ ಪ್ರತಿ ಕೆಜಿ ಮೇಲೆ 100 ರೂ. ಹೆಚ್ಚಳ ಮಾಡಲು ಅಸೋಸಿಯೇಶನ್ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಯ ಗುಣಮಟ್ಟ ಹಾಗೂ ಕಾಫಿ ಬೆಳೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ದಿನ ಕಾಫಿ ಬೆಲೆ ಏರಿಕೆಯಾಗುತ್ತಲೇ ಇದೆ. ಕಾಫಿ ಬೆಳೆಯಲ್ಲಿ ಶೇ.20ರಷ್ಟು ಕುಸಿತವಾಗಿದೆ.
ಈ ವರ್ಷದ ಜನವರಿಯಿಂದಲೂ ಬೆಲೆ ಹೆಚ್ಚಳವಾಗುತ್ತಲೇ ಇದೆ. ಪ್ರತಿ ಕೆ.ಜಿಗೆ 200 ರೂ. ಇದ್ದ ಒಂದು ಕೆ.ಜಿ. ರೋಬಸ್ಟಾ ತಳಿಯ ಕಾಫಿ ಬೆಲೆ ಈಗ 420 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಅರೇಬಿಕಾ ತಳಿಯ ಕಾಫಿ ಬೆಲೆಯು 290 ರೂ.ನಿಂದ 465 ರೂ.ಗೆ ಏರಿಕೆಯಾಗಿದೆ ಎಂದು ಪೆರಿಕಲ್ ಸುಂದರ್ ಹೇಳಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ *ಕೈ’ ನಾಯಕರ ಡಿನ್ನರ್ ಮೀಟಿಂಗ್
ರೈತ ನಾಯಕಿ ಮೇಲೆ ಅತ್ಯಾಚಾರ ಆರೋಪ: ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಎಫ್ಐಆರ್