newsics.com
ಬಾಳೆಹಣ್ಣು ಬಡವರ ಸೇಬು ಎಂದೇ ಹೆಸರುವಾಸಿ. ಬಾಳೆಹಣ್ಣು ಸೇವನೆಯಿಂದ ದೇಹಕ್ಕೆ ಹತ್ತಾರು ಪ್ರಯೋಜನಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ 6 ಜತೆಗೆ, ಬಾಳೆಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳಾದ ಗ್ಲುಟಾಥಿಯೋನ್, ಫೀನಾಲಿಕ್ಸ್, ಡೆಲ್ಪಿಡಿನ್, ರುಟಿನ್ ಮತ್ತು ನರಿಂಗಿನ್ ಸತ್ವಗಳನ್ನೊಳಗೊಂಡಿದೆ.
ಊಟವಾದ ನಂತರ ಬಾಳೆಹಣ್ಣು ತಿನ್ನುವ ಅಭ್ಯಾಸ ನಿಜಕ್ಕೂ ಉತ್ತಮವಾದದ್ದು. ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಆದ್ದರಿಂದ ಪ್ರತಿದಿನ ಎಲ್ಲಾ ವಯೋಮಾನದವರು ಬಾಳೆಹಣ್ಣನ್ನು ತಿನ್ನುವುದು ಆರೋಗ್ಯಕರ ಎಂದು ಹೇಳಲಾಗುತ್ತದೆ.

ಬಾಳೆಹಣ್ಣು ದೇಹದಲ್ಲಿರುವ ಹಲವು ರೋಗಗಳನ್ನು ನಿವಾರಿಸಿ ನಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಹಾಗಾಗಿ ವೈದ್ಯರು ಕೂಡ ಬಾಳೆಹಣ್ಣು ತಿನ್ನಲು ಸಲಹೆ ನೀಡುತ್ತಾರೆ.
ಬಾಳೆಹಣ್ಣಿನಲ್ಲಿ ವಿಟಮಿನ್‌ಗಳು, ನಾರಿನಂಶ ಮತ್ತು ಖನಿಜಾಂಶಗಳೂ ಇವೆ. ಬಾಳೆಹಣ್ಣು ಪೊಟ್ಯಾಷಿಯಮ್‌ನ್ನೂ ಒದಗಿಸುತ್ತದೆ. ಇದು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸಲು ಬಾಳೆಹಣ್ಣು ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಇವುಗಳಲ್ಲಿ ಕಾರ್ಬೋಹೈಡ್ರೇಟ್‌ಗಳೂ ಸೇರಿವೆ.
ಬಾಳೆಹಣ್ಣು ಶಕ್ತಿಯನ್ನು ನೀಡುತ್ತದೆ. ತಾಲೀಮು ನಂತರದ ಆಹಾರಕ್ಕೆ ಬಾಳೆಹಣ್ಣು ಒಳ್ಳೆಯದು.
ಬಾಳೆಹಣ್ಣಿನಲ್ಲಿ ಅಮೈನೋ ಆಮ್ಲಗಳಿವೆ. ಉತ್ತಮ ನಿದ್ರೆಗೂ ಸಹಕಾರಿ.
ಬಾಳೆಹಣ್ಣು ಮನಸ್ಥಿತಿಯನ್ನು ಸುಧಾರಿಸಲು, ಖಿನ್ನತೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಬಾಳೆಹಣ್ಣಿನಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ, ಇದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕರುಳು ಚೆನ್ನಾಗಿದ್ದರೆ ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗುವುದಿಲ್ಲ. ಹಾಗಾಗಿ ಮಲಬದ್ಧತೆ ಸಮಸ್ಯೆ ಇದ್ದರೆ ಪ್ರತಿದಿನ ಬಾಳೆಹಣ್ಣು ತಿನ್ನಿ.

ಅಷ್ಟೇ ಅಲ್ಲ, ಬಾಳೆಹಣ್ಣು ವಿಶೇಷವಾಗಿ ಪುರುಷರಿಗೆ ಅಮೃತವಿದ್ದಂತೆ. ಮಲಗುವ ಕೋಣೆಯಲ್ಲಿ ಪುರುಷರನ್ನು ಹೀರೋ ಮಾಡುವ ಹಣ್ಣು ಕೂಡ ಇದು. ಬಾಳೆಹಣ್ಣಿನಲ್ಲಿರುವ ಪೊಟ್ಯಾಷಿಯಮ್ ಲೈಂಗಿಕ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ರಕ್ತದ ಹರಿವನ್ನೂ ಸುಧಾರಿಸುತ್ತದೆ. ಪುರುಷ ಅಂಗವು ರಕ್ತದ ಹರಿವಿನ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ರಕ್ತದ ಹರಿವು, ಉತ್ತಮ ಹೆಪ್ಪುಗಟ್ಟುವಿಕೆ,
ರಕ್ತದ ಹರಿವು ಲೈಂಗಿಕ ಆಸಕ್ತಿಯನ್ನು ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ.

ಬಾಳೆಹಣ್ಣಿನಲ್ಲಿರುವ ವಿಟಮಿನ್-ಸಿ, ಬಿ1 ಮತ್ತು ಮೆಗ್ನೀಸಿಯಮ್ ವೀರ್ಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ಸಂತಾನ ಸಮಸ್ಯೆಗಳೂ ಉಂಟಾಗುವುದಿಲ್ಲ. ಇನ್ನೇಕೆ ತಡ, ನಿತ್ಯ ಬಾಳೆಹಣ್ಣು ತಿನ್ನಿ, ಬೆಡ್‌ರೂಮ್‌ನಲ್ಲಿ ಫುಲ್ ಖುಷಿಯಾಗಿರಿ.
ಗರ್ಭಿಣಿಯರಿಗೆ ಹುಳಿ ತಿನ್ನಬೇಕು ಅಂತನಿಸೋದೇಕೆ? ಹುಳಿ ಸೇವನೆ ಅತಿಯಾದರೆ ಏನಾಗುತ್ತೆ?
ಮದುವೆಯಾದ್ಮೇಲೆ ಪ್ರೀತಿ ಜಾಸ್ತಿ ಆಗಬೇಕಾ..? ಹೀಗೆ ಮಾಡಿ, ಬೇರೆಯವರನ್ನು ಕಣ್ಣೆತ್ತಿಯೂ ನೋಡಲ್ಲ!