newsics.com
ಶುಭೋದಯ
ನಿತ್ಯ ಪಂಚಾಂಗ
12 ಆಗಸ್ಟ್ 2024, ಸೋಮವಾರ
ದಿನ ವಿಶೇಷ:
* ವಿಶ್ವ ಆನೆ ದಿನ
* ವಿಕ್ರಂ ಸಾರಾಭಾಯ್ ಜನ್ಮದಿನ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 12/08/2024
ತಿಂಗಳು – ಆಗಸ್ಟ್
ಬಣ್ಣ – ಕೆಂಪು
ವಾರ – ಸೋಮವಾರ
ತಿಥಿ – ಸಪ್ತಮಿ 07:54:37
ಪಕ್ಷ – ಶುಕ್ಲ
ನಕ್ಷತ್ರ – ಸ್ವಾತಿ 08:32:00
ಯೋಗ – ಶುಕ್ಲ 16:24:16
ಕರಣ – ವಾಣಿಜ 07:54:37
ಕರಣ – ವಿಷ್ಟಿ (ಭದ್ರ) 20:47:42
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ ತುಲಾ till 28:14:12*
ಚಂದ್ರ ರಾಶಿ ವೃಷ್ಚಿಕ from 28:14:12*
ಸೂರ್ಯ ರಾಶಿ ಕರ್ಕಾಟಕ
ಋತು- ವರ್ಷ
ಸೂರ್ಯೋದಯ 06:08:11
ಸೂರ್ಯಾಸ್ತ 18:40:49
ಹಗಲಿನ ಅವಧಿ 12:32:37
ರಾತ್ರಿಯ ಅವಧಿ 11:27:29
ಚಂದ್ರೋದಯ 12:03:49
ಚಂದ್ರಾಸ್ತ 23:45:47
ರಾಹು ಕಾಲ 07:42 – 09:16 ಅಶುಭ
ಯಮಗಂಡ ಕಾಲ 10:50 – 12:25 ಅಶುಭ
ಗುಳಿಕ ಕಾಲ 13:59 – 15:33
ಅಭಿಜಿತ್ 11:59 – 12:50ಶುಭ
ದುರ್ಮುಹೂರ್ತ 12:50 – 13:40 ಅಶುಭ
ದುರ್ಮುಹೂರ್ತ 15:20 – 16:10 ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ಮನಸ್ಸು ಕೊಟ್ಟವರು ಕನಸಲ್ಲೂ ಮೂಡಿಬರುತ್ತಾರೆ; ಹೃದಯ ಗೆದ್ದವರು ನೋವಿನಲ್ಲೂ ನೆನಪಾಗುತ್ತಾರೆ; ಮನಸ್ಸು – ಹೃದಯ ಎರಡನ್ನೂ ಗೆದ್ದವರು ನಾವು ಮರೆಯಲಾಗದ ಅನನ್ಯ ವ್ಯಕ್ತಿಯಾಗುತ್ತಾರೆ.
***
ಇಂದಿನ ಇತಿಹಾಸ
ಆಗಸ್ಟ್ 12 – ವಿಶ್ವ ಆನೆ ದಿನ 🐘
🐘 ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ. ಮೊದಲ ವಿಶ್ವ ಆನೆ ದಿನವನ್ನು 2012ರ ಆಗಸ್ಟ್ 12 ರಂದು ಆಚರಿಸಲಾಯಿತು. ಅಂದಿನಿಂದ, ಆನೆಗಳ ಬಗ್ಗೆ ಕಾಳಜಿ ವಹಿಸಲು ಮತ್ತು ರಕ್ಷಿಸಲು ಇದನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಥಾಯ್ಲೆಂಡ್‌ನ ಎಲಿಫೆಂಟ್ ರಿಇಂಟ್ರಡಕ್ಷನ್ ಫೌಂಡೇಶನ್ ಮತ್ತು ಕೆನಡಾದ ಚಲನಚಿತ್ರ ನಿರ್ಮಾಪಕರಾದ ಪೆಟ್ರೀಷಿಯಾ ಸಿಮ್ಸ್ ಮತ್ತು ಮೈಕೆಲ್ ಕ್ಲಾರ್ಕ್ ಅವರ (2011 ರ) ಪರಿಕಲ್ಪನೆಯಾಗಿತ್ತು. ಈ ದಿನವನ್ನು 2012ರ ಆಗಸ್ಟ್ 12 ರಂದು ಅಧಿಕೃತವಾಗಿ ಪ್ರಾರಂಭಿಸಲಾಯಿತು.
ಆನೆಗಳ ವಾಸಸ್ಥಾನದ ಕೊರತೆ, ಬೇಟೆಯಾಡುವ ಬೆದರಿಕೆಗಳು, ಪೋಷಕಾಂಶ ಹಾಗೂ ಆರೈಕೆ ಕೊರತೆ ಆನೆಗಳ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ. ಬೇಟೆಯಾಡುವುದು, ದಂತ ವ್ಯಾಪಾರ ತಡೆಯುವುದು ಮತ್ತು ಆನೆಗಳ ಆವಾಸ ಸ್ಥಾನಗಳನ್ನು ರಕ್ಷಿಸಲು ಸರ್ಕಾರ ಕಾರ್ಯಗಳನ್ನು ಚುರುಕುಗೊಳಿಸಬೇಕಾದುದು ಇಂದಿನ ಅಗತ್ಯವಾಗಿದೆ.
ಪ್ರಮುಖ ಘಟನೆಗಳು
* ಆಗಸ್ಟ್ 12, 1851 ರಂದು ಐಸಾಕ್ ಸಿಂಗರ್ ಅವರಿಗೆ ಅವರ ಹೊಲಿಗೆ ಯಂತ್ರಕ್ಕೆ ಪೇಟೆಂಟ್ ನೀಡಲಾಯಿತು.
* ಆಗಸ್ಟ್ 12, 1868 ರಂದು ಬ್ರಿಟಿಷ್ – ಇಂಡಿಯಾದ ವೈಸೆರಾಯ್ ಆಗಿದ್ದ ಫ್ರೆಡ್ರಿಕ್ ಜೆ.ಎನ್.ಟಿ ಲಾರ್ಡ್ ಕ್ಲೆಮ್ಸ್ಫೋರ್ಡ್ ಅವರು ಜನಿಸಿದರು.
* ಸಿದ್ದರಾಮಯ್ಯ– ಕರ್ನಾಟಕದ 22ನೇ ಮುಖ್ಯಮಂತ್ರಿ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ 22ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿ. ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ 1948 ರ ಆಗಸ್ಟ್ 12 ರಂದು ಜನಿಸಿದರು.
* ಆಗಸ್ಟ್ 12, 1973 ರಂದು ಗೋವಾ, ದಾಮನ್ ಮತ್ತು ದಿಯು ಮೊದಲ ಮುಖ್ಯಮಂತ್ರಿ ಆಗಿದ್ದ ದಯಾನಂದ್ ಬಾಲಕೃಷ್ಣ ಬಂಡೋಡ್ಕರ್ ನಿಧನರಾದರು.
* ಆಗಸ್ಟ್ 12, 1981 ರಂದು IBM ತನ್ನ ಮೊದಲ PCಯನ್ನು ಅನಾವರಣಗೊಳಿಸಿತು.
* ಆಗಸ್ಟ್ 12, 1985 ರಂದು ಜಪಾನ್ ಏರ್ ಲೈನ್ಸ್ ಬೋಯಿಂಗ್ 747 ದೇಶೀ ಹಾರಾಟ ನಡೆಸುತ್ತಿದ್ದಾಗ ಪರ್ವತಕ್ಕೆ ಅಪ್ಪಳಿಸಿ 520 ಜನ ಮೃತರಾದರು. ಇದು ಜಗತ್ತಿನ ಅತ್ಯಂತ ಭೀಕರ ವಿಮಾನ ಅಪಘಾತ ಎಂದು ಪರಿಗಣಿತವಾಗಿದೆ.