HAPPY UGADI ಯುಗಾದಿ ಹಬ್ಬದ ಶುಭಾಶಯಗಳು… ಯುಗಾದಿ ವರ್ಷ ಭವಿಷ್ಯ
newsics.com
ಬೆಂಗಳೂರು: ಬೆತ್ತಲೆ ಫೋಟೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ ಅತಿಥಿ ಶಿಕ್ಷಕಿ ಮೇಲೆ ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಆರೋಪಿ ಲಿಂಗರಾಜ ನಾಯಕ್(47) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.
ಪ್ರಕರಣದ ದಾಖಲೆ ಪರಿಶೀಲಿಸಿದಾಗ ಇದು ಸಮ್ಮತಿಯ ಲೈಂಗಿಕ ದೌರ್ಜನ್ಯವಲ್ಲ, ಬಲವಂತದಿಂದ ಒತ್ತಾಯಿಸಿ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಹಂತದಲ್ಲಿ ಪ್ರಕರಣ ರದ್ದು ಮಾಡುವುದು ಸೂಕ್ತವಲ್ಲ, ಅರ್ಜಿದಾರರು ಪೂರ್ಣ ಪ್ರಮಾಣದ ವಿಚಾರಣೆ ಎದುರಿಸಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಆರೋಪಿ ಅರ್ಜಿಯನ್ನು ವಜಾಗೊಳಿಸಿದೆ.
ಅಧಿಕಾರ ದುರುಪಯೋಗ ಮಾಡಿಕೊಂಡು ಮೊದಲು ನಗ್ನ ಚಿತ್ರಗಳನ್ನು ಪಡೆದು ನಂತರ ಅವುಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ. ಉದ್ಯೋಗ ಕಳೆದುಕೊಳ್ಳುವ ಭಯ ಮತ್ತು ಅವಮಾನ ಭೀತಿಯಲ್ಲಿದ್ದ ಸಂತ್ರಸ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.
ಶಿವಮೊಗ್ಗದ ಸರ್ಕಾರಿ ಶಾಲೆಯೊಂದಕ್ಕೆ 2023ರಲ್ಲಿ ಅತಿಥಿ ಶಿಕ್ಷಕಿಯಾಗಿ ದೂರುದಾರೆ ಸೇರಿದ್ದರು. ಆಕೆಯನ್ನು ಪರಿಚಯಿಸಿಕೊಂಡ ಆರೋಪಿ ಕಚೇರಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಕೆಲಸದಿಂದ ತೆಗೆಯುವುದಾಗಿ ಬೆದರಿಸಿ ಮೊಬೈಲ್ ಮೂಲಕ ತನಗೆ ನಗ್ನ ಚಿತ್ರ ಕಳುಹಿಸಲು ಬಲವಂತ ಮಾಡಿದ್ದ. ಅವುಗಳನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಶಾಲೆ, ಮಹಿಳೆಯ ಮನೆ ಸೇರಿದಂತೆ ವಿವಿಧೆಡೆ ಅನೇಕ ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ ಎಂದು ಆರೋಪಿಸಿ ಸಂತ್ರಸ್ತ ಶಿಕ್ಷಕಿ ದೂರು ನೀಡಿದ್ದರು.
Film Review ಧುರಂಧರ್ 2 ಹೇಗಿದೆ? ಸಿನಿಮಾ ನೋಡಿದವರು ಹೇಳ್ತಿರೋದೇನು? ವಿಡಿಯೋ ನೋಡಿ
New Fuel policy ಏಪ್ರಿಲ್ 1ರಿಂದ ಹೊಸ ಬಗೆ ಪೆಟ್ರೋಲ್! ದುಬಾರಿಯಾಗತ್ತಾ? ಏನಿದು ಹೊಸ ಪೆಟ್ರೋಲ್?
War field ಹೆಚ್ಚುತ್ತಲೇ ಇದೆ ಮಧ್ಯಪ್ರಾಚ್ಯ ಯುದ್ಧ ತೀವ್ರತೆ: ಗ್ಯಾಸ್ ಸ್ಥಾವರಗಳ ಮೇಲೆ ದಾಳಿ, ಪ್ರತಿದಾಳಿ
Drug controller arrest ಲಂಚದೊಂದಿಗೆ ಪರಾರಿಯಾಗುತ್ತಿದ್ದ ಔಷಧ ನಿಯಂತ್ರಕಿ ಬಂಧನ, ಸಿನಿಮಾ ಮಾದರಿ ಕಾರ್ಯಾಚರಣೆ!