ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹೊಸ ವರ್ಷ 2026ಕ್ಕೆ ಕಾಲಿರಿಸಿದ್ದೇವೆ. ವರ್ಷಪೂರ್ತಿ ದೈವಿಕ ಆಶೀರ್ವಾದವನ್ನು ಕೋರಿ ಜನರು ತಮ್ಮ ಇಷ್ಟ ದೇವರ ಅಥವಾ ದೇವತೆಗಳ ದೇವಸ್ಥಾನಕ್ಕೆ ಹೊಸ ವರ್ಷದ ಮೊದಲನೇ ದಿನದಂದು ಭೇಟಿ ನೀಡುತ್ತಾರೆ. ಇದರೊಂದಿಗೆ ಹೊಸ ವರ್ಷದ ಮೊದಲನೇ ದಿನದಂದು ಕೆಲವೊಂದು ದೇವರ, ದೇವತೆಗಳ ಮಂತ್ರಗಳನ್ನು ಪಠಿಸಿದರೆ ಉತ್ತಮ.
ಪ್ರತಿ ವ್ಯಕ್ತಿಯು ತನ್ನ ಹೊಸ ವರ್ಷವನ್ನು ಹೊಸ ಭರವಸೆಯೊಂದಿಗೆ ಮತ್ತು ಉತ್ಸಾಹ ಹಾಗೂ ಸಂತೋಷದೊಂದಿಗೆ ಪ್ರಾರಂಭಿಸಲು ಬಯಸುತ್ತಾರೆ.
ಕೆಲವರು ದೈವಿಕ ಆಶೀರ್ವಾದವನ್ನು ಅಥವಾ ದೇವರು ಮತ್ತು ದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳಲು ಪೂಜೆ – ಪುನಸ್ಕಾರಗಳನ್ನು, ಹೋಮ – ಹವನಗಳನ್ನು ನಡೆಸುತ್ತಾರೆ. ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.
ಹೊಸ ವರ್ಷದ ಮೊದಲ ದಿನದಂದು ದೇವರ ಪೂಜೆ, ಪುನಸ್ಕಾರಗಳನ್ನು ಮಾಡುವುದರ ಜತೆಗೆ ಮಂತ್ರಗಳನ್ನು ಪಠಿಸುವುದು ಕೂಡ ಪ್ರಯೋಜನಕಾರಿಯಾಗಿರುತ್ತದೆ.
ಶಿವನನ್ನು ಧ್ಯಾನಿಸಿ
ಈ ರೀತಿ ಹೊಸ ವರ್ಷದ ಮೊದಲ ದಿನ ಮಂತ್ರಗಳನ್ನು ಪಠಿಸುವುದರಿಂದ ವರ್ಷವಿಡೀ ಸಕಾರಾತ್ಮಕ ಶಕ್ತಿ ನಮ್ಮೊಂದಿಗಿರುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.
ಈ ಬಾರಿ ಹೊಸ ವರ್ಷದ ಮೊದಲ ದಿನ ಪ್ರದೋಷ ತಿಥಿಯೊಂದಿಗೆ ಬಂದಿದೆ. ಪ್ರದೋಷ ದಿನವನ್ನು ಶಿವನಿಗೆ ಸಮರ್ಪಿಸಲಾದ ಕಾರಣ ಶಿವ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿಯಾಗಿರುತ್ತದೆ.
– ಓಂ ನಮಃ ಶಿವಾಯ
– ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ|
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್||
– ಓಂ ತತ್ಪುರುಷಾಯ ವಿದ್ಮಹೇ|
ಮಹಾದೇವಾಯ ಧೀಮಹಿ|
ತನ್ನೋ ರುದ್ರಃ ಪ್ರಚೋದಯಾತ್||
– ಕರ್ಪೂರ ಗೌರಂ ಕರುಣಾವತಾರಂ ಸಂಸಾರ ಸಾರಂ ಭುಜಗೇಂದ್ರ ಸಾರಂ|
ಸದಾ ವಸಂತಂ ಹೃದಯಾರವಿಂದೇ ಭವಾನ್ ಭವಾನೀ ಸಹಿತಂ ನಮಾಮಿ||
ಗಣಪತಿಯನ್ನು ಪೂಜಿಸಿ
ಯಾವುದೇ ಶುಭ ಅಥವಾ ಮಂಗಳಕರ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಗಣಪತಿ ಪೂಜೆ ಮಾಡುವ ಸಂಪ್ರದಾಯವಿದೆ. ಯಾಕೆಂದರೆ, ಈ ರೀತಿ ಹೊಸ ಕೆಲಸದ ಆರಂಭಕ್ಕೂ ಮುನ್ನ ವಿಘ್ನನಿವಾರಕ ಗಣೇಶನನ್ನು ಪೂಜಿಸುವುದರಿಂದ ಕೆಲಸದಲ್ಲಿ ಎದುರಾಗುವ ಕಷ್ಟಗಳೆಲ್ಲಾ ದೂರಾಗುವುದು. ನಿರ್ವಿಘ್ನವಾಗಿ ಕೆಲಸಗಳೆಲ್ಲಾ ಪೂರ್ತಿಯಾಗುವುದು ಎನ್ನುವ ನಂಬಿಕೆಯಿದೆ. ಹೊಸ ವರ್ಷದ ಮೊದಲ ದಿನದಂದು ಗಣಪತಿಯ ಮಂತ್ರಗಳನ್ನು ಪಠಿಸುವುದರಿಂದ, ಜೀವನದ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ದೂರಾಗುತ್ತವೆ.
– ಓಂ ಏಕದಂತಾಯ ವಿದ್ಮಹೇ|
ವಕ್ರತುಂಡಾಯ ಧೀಮಹಿ|
ತನ್ನೋ ದಂತಿಃ ಪ್ರಚೋದಯಾತ್||
– ಓಂ ಏಕದಂತಾಯ ವಿದ್ಮಹೇ|
ವಕ್ರತುಂಡಾಯ ಧೀಮಹಿ|
ತನ್ನೋ ಬುದ್ಧಿಃ ಪ್ರಚೋದಯಾತ್||
– ಓಂ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ
ನಿರ್ವಿಘ್ನಂ ಕುರುಮೇ ದೇವ
ಸರ್ವಕಾರ್ಯೇಸು ಸರ್ವದಾ||
– ಓಂ ಗಂ ಗಣಪತಯೇ ನಮಃ
ವಿಷ್ಣುದೇವನನ್ನು ಸ್ತುತಿಸಿ
2026ರ ಹೊಸ ವರ್ಷ ಗುರುವಾರದಂದು ಪ್ರಾರಂಭವಾಗುತ್ತದೆ. ಈ ಗುರುವಾರದ ದಿನವು ವಿಷ್ಣು ದೇವನಿಗೆ ಅಥವಾ ವೆಂಕಟೇಶ್ವರ ಸ್ವಾಮಿಗೆ ಸಮರ್ಪಿತವಾದ ದಿನವಾಗಿದೆ. ಈ ಕಾರಣಕ್ಕಾಗಿ ವಿಷ್ಣು ದೇವನ ಅಥವಾ ವಿಷ್ಣು ದೇವನ ವಿವಿಧ ಅವತಾರಗಳ ಮಂತ್ರಗಳನ್ನು ಪಠಿಸಬೇಕು. ಈ ದಿನ ವಿಷ್ಣು ಮಂತ್ರಗಳನ್ನು ಪಠಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗಿರುತ್ತದೆ. ಇದು ನಿಮ್ಮ ಮೇಲೆ ಶ್ರೀಹರಿಯ ಆಶೀರ್ವಾದವೂ ಇರುವಂತೆ ಮಾಡುತ್ತದೆ.
– ಓಂ ನಮೋ ನಾರಾಯಣಾಯ
– ಓಂ ನಾರಾಯಣಾಯ ವಿದ್ಮಹೇ|
ವಾಸುದೇವಾಯ ಧೀಮಹಿ|
ತನ್ನೋ ವಿಷ್ಣುಃ ಪ್ರಚೋದಯಾತ್
ಲಕ್ಷ್ಮೀದೇವಿಯನ್ನು ಪ್ರಾರ್ಥಿಸಿ
ವರ್ಷಪೂರ್ತಿ ನೀವು ಧನ, ಸಂಪತ್ತು, ಸಮೃದ್ಧಿಯ ಜೀವನವನ್ನು ನಡೆಸಬೇಕೆಂದುಕೊಂಡಿದ್ದರೆ 2026ರ ಮೊದಲನೇ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದು, ಲಕ್ಷ್ಮೀ ದೇವಿಯ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿಯಾಗಿದೆ. ಇದರಿಂದ ವರ್ಷಪೂರ್ತಿ ಸಂಪತ್ತಿನ ಕೊರತೆ ಎದುರಿಸುವ ಅವಶ್ಯಕತೆಯಿರುವುದಿಲ್ಲ. ವರ್ಷವಿಡೀ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸಿದರೆ ಈ ಲಕ್ಷ್ಮೀ ಮಂತ್ರಗಳನ್ನು ಪಠಿಸಿ.
– ಓಂ ಶ್ರೀ ಮಹಾಲಕ್ಷ್ಮಿಯೈ ನಮಃ
– ಓಂ ಮಹಾಲಕ್ಷ್ಮಿಯೈ ಚ ವಿದ್ಮಹೇ
ವಿಷ್ಣುಪ್ರಿಯಾಯೈ ಚ ಧೀಮಹಿ
ತನ್ನೋ ಲಕ್ಷ್ಮಿಃ ಪ್ರಚೋದಯಾತ್
– ಓಂ ಹ್ರೀಂ ಹ್ರೀಂ ಶ್ರೀಂ ಶ್ರೀಂ ಕ್ರೀಂ ಮಹಾಲಕ್ಷ್ಮೀ ಸ್ವರೂಪಿಣಿ ಪೂರ್ಣೇ ಪೂರ್ಣೇ ಸಿದ್ಧಯೇ ಸಿದ್ಧಯೇ ನಮಃ
– ಓಂ ವಿಷ್ಣುಪ್ರಿಯಾಯೈ ಕಮಲಾಸನಾಯೈ ನಮಃ
– ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ||
– ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಯೇ
ಪ್ರಸೀದ ಪ್ರಸೀದ
– ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮೈ ನಮಃ
2026ರ ಆರಂಭದ ದಿನದಂದು ದಿನದಂದು ನೀವು ಈ ಮಂತ್ರಗಳನ್ನು ಪಠಿಸುವುದರ ಮೂಲಕ ವರ್ಷವನ್ನು ಪ್ರಾರಂಭಿಸುವ ಮೂಲಕ ವರ್ಷಪೂರ್ತಿ ದೇವರ ಮತ್ತು ದೇವತೆಗಳ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಇದು ವರ್ಷಪೂರ್ತಿ ನಮ್ಮ ಜೀವನದಲ್ಲಿ ಎದುರಾಗುವಂತಹ ಸಮಸ್ಯೆಗಳನ್ನು ದೂರ ಮಾಡುವುದು.
ಹೊಸ ವರ್ಷ ಶುಭವನ್ನೇ ತರಲಿ.
WELCOME NEW YEAR 2026 ಹೊಸ ವರ್ಷಕ್ಕೆ ಸ್ವಾಗತ: ಕಿರಿಬಾಟಿ ಮೊದಲು, ಸಮೋವಾ ಲಾಸ್ಟ್
ಹೊಸ ವರ್ಷದ ರಾತ್ರಿ 12 ಗಂಟೆಗೆ 12 ದ್ರಾಕ್ಷಿಗಳನ್ನು ತಿನ್ನೋದೇಕೆ? ವಿಶಿಷ್ಟ ಸಂಪ್ರದಾಯ ಹೇಗೆ ಆರಂಭವಾಯಿತು?
ಎಷ್ಟೇ ಕುಡಿದರೂ ಕಿಡ್ನಿಗೆ ಏನೂ ಆಗಲ್ಲ, ಎಣ್ಣೆ ಹೊಡೆಯೋಕೂ ಮುಂಚೆ 2 ಗಂಟೆ ಜಸ್ಟ್ ಹೀಗೆ ಮಾಡಿ