Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಹೊಸ ವರ್ಷ ಸ್ವಾಗತ ಪಾರ್ಟಿಯ ಅಮಲಿನಲ್ಲಿ ಮಹಿಳಾ ಪೊಲೀಸ್, ಯುವತಿಯರ ಜತೆ ಅನುಚಿತ ವರ್ತಿಸಿದ ನಾಲ್ವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ.
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮೂವರು ಯುವಕರು ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭ್ರಮ ಆಚರಿಸುತ್ತಿದ್ದ ಯುವತಿಯರಿಗೆ ಕಿರುಕಳ ನೀಡಲು ಆರಂಭಿಸಿದ್ದಾರೆ. ಯುವತಿಯರು ಮಹಿಳಾ ಪೊಲೀಸರ ಬಳಿ ಬಂದಿದ್ದಾರೆ. ಈ ವೇಳೆ ಪುಂಡರ ಪುಂಡಾಟಿಕೆ ಬ್ರೇಕ್ ಹಾಕಲು ಮಹಿಳಾ ಪೊಲೀಸರು ಮುಂದಾದಾಗ ಅನುಚಿತ ವರ್ತನೆ ತೋರಿದ್ದಾರೆ.
ಯುವಕರು ಮಹಿಳಾ ಪೊಲೀಸರು, ಯುವತಿಯರ ಜತೆ ಅನುಚಿತ ವರ್ತನೆ ತೋರಿದ ಮಾಹಿತಿ ಸಿಗುತ್ತದ್ದಂತೆ ಸಿಸಿಬಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಪುಂಡಾಟಿಕೆ, ಅನುಚಿತ ವರ್ತನೆ ತೋರಿದವರಿಗೆ ಯಾವುದೇ ರೀತಿ ವಿನಾಯಿತಿ ಇರುವುದಿಲ್ಲ. ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
WELCOME NEW YEAR 2026 ಹೊಸ ವರ್ಷಕ್ಕೆ ಸ್ವಾಗತ: ಕಿರಿಬಾಟಿ ಮೊದಲು, ಸಮೋವಾ ಲಾಸ್ಟ್