Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Sydney’s Bondi Beach attack ಸಿಡ್ನಿಯ ಬೊಂಡಿ ಬೀಚ್ ದಾಳಿಗೆ 12 ಬಲಿ: ಉಗ್ರರ ಕೃತ್ಯ ಶಂಕೆ,‌ ಓರ್ವನ ಹತ್ಯೆ, ಇನ್ನೊಬ್ಬನ ಸೆರೆ, ವಿಡಿಯೋ ನೋಡಿ
ಪ್ರಮುಖವಿದೇಶವೈರಲ್

Sydney’s Bondi Beach attack ಸಿಡ್ನಿಯ ಬೊಂಡಿ ಬೀಚ್ ದಾಳಿಗೆ 12 ಬಲಿ: ಉಗ್ರರ ಕೃತ್ಯ ಶಂಕೆ,‌ ಓರ್ವನ ಹತ್ಯೆ, ಇನ್ನೊಬ್ಬನ ಸೆರೆ, ವಿಡಿಯೋ ನೋಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/ YouTube

newsics.com
ಸಿಡ್ನಿಯ ಬೊಂಡಿ ಬೀಚ್ನಲ್ಲಿ ದುಷ್ಕರ್ಮಿಗಳು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸುಮಾರು ಎರಡು ಗಂಟೆಗಳ ಹಿಂದೆ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 50 ಗುಂಡುಗಳು ಹಾರಿವೆ ಎಂದು ಹೇಳಿದ್ದಾರೆ.

ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದು, ಘಟನೆಯನ್ನು ಆಘಾತಕಾರಿ ಮತ್ತು ದುಃಖಕರ ಎಂದು ಕರೆದಿದ್ದಾರೆ. ಅಲ್ಲದೆ, ಇದು ಭಯೋತ್ಪಾದಕರ ದಾಳಿ ಇರಬಹುದೆಂದು ಶಂಕಿಸಿದ್ದಾರೆ. ಇಬ್ಬರು ದಾಳಿಕೋರರ ಪೈಕಿ ಒಬ್ಬನನ್ನು‌ ಹತ್ಯೆಗೈಯಲಾಗಿದ್ದು, ಇನ್ನೋರ್ವನನ್ನು ಭದ್ರತಾ ಪಡೆಗಳು‌ ವಶಕ್ಕೆ ಪಡೆದಿವೆ.

ಗುಂಡಿನ ದಾಳಿಯಿಂದ ತಪ್ಪಿಸಿಕೊಂಡ ವ್ಯಕ್ತಿ, ಶೂಟರ್ ಹಿಂಬದಿಯಿಂದ ತೆರಳಿ ಶೂಟರ್ ಜತೆ ಗುದ್ದಾಡಿದ್ದಾನೆ. ಬಳಿಕ ಶೂಟರ್ ಕೈಯಿಂದ ಗನ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈತನ ಸಾಹಸ ವಿಡಿಯೋದಲ್ಲಿ ಸೆರೆಯಾಗಿದೆ.

ಯಹೂದಿ ಸಮುದಾಯದ ಹಬ್ಬದ ಆಚರಣೆಗೆ ಸಮುದಾಯ ಬಹುತೇಕರು ಸಿಡ್ನಿ ಬಳಿ ಬೊಂಡಿ ಬೀಚ್‌ನಲ್ಲಿ ಸೇರಿದ್ದರು. ಎಲ್ಲರಲ್ಲಿ ಸಂಭ್ರಮದ ವಾತಾವರಣವಿತ್ತು. ಮಧ್ಯಾಹ್ನ 2.17ರ ವೇಳೆ ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ಶೂಟರ್ ಈ ಹಬ್ಬದ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. 50ಕ್ಕೂ ಹೆಚ್ಚು ಗುಂಡು ಸಿಡಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಹಲವು ಅಮಾಯಕರು ಗಾಯಗೊಂಡಿದ್ದಾರೆ. 12 ಮಂದಿ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಧೈರ್ಯ ತೋರಿದ ಯಹೂದಿ

ಹಬ್ಬಕ್ಕೆ ಆಗಮಿಸಿದ ಹಲವರು ಸಿಕ್ಕ ಸಿಕ್ಕ ವಸ್ತು, ಗೋಡೆ, ಮರ, ಕಾರುಗಳ ಬದಿಯಲ್ಲಿ ಪ್ರಾಣ ಉಳಿಸಿಕೊಳ್ಳಲು ಅಡಗಿ ಕುಳಿತಿದ್ದಾರೆ. ಹೀಗೆ ಕಾರಿನ ಬದಿಯಲ್ಲಿ ಅಡಗಿ ಕುಳಿತ ವ್ಯಕ್ತಿ ಹತ್ತಿರದಿಂದಲೇ ಶೂಟರ್ ದಾಳಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಮರದ ಬಳಿ ನಿಂತಿದ್ದ ಶೂಟರ್ ಅಮಾಯಕರ ಮೇಲೆ ಗುಂಡಿನ ದಾಳಿ ಮುಂದುವರಿಸಿದ್ದ. ಧೈರ್ಯ ಮಾಡಿ ಯೂಹೂದಿ ಹಿಂಬದಿಯಿಂದ ತೆರಳಿ ಶೂಟರ್ ಗನ್ ಹಾಗೂ ಕೊರಳನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಈ ವೇಳೆ ಜಟಾಪಟಿ ಶುರುವಾಗಿದೆ. ಸಾಹಸ ಮೆರೆದ ಯೂಹೂದಿ ಶೂಟರ್ ಕೈಯಲ್ಲಿದ್ದ ಗನ್ ಕಸಿದುಕೊಂಡಿದ್ದಾನೆ. ಗನ್ ಕಸಿದ ವ್ಯಕ್ತಿ ಬಳಿಕ ಗನ್ ಕೆಳಗಿಟ್ಟಿದ್ದಾನೆ. ಅಷ್ಟೊತ್ತಿಗೆ ಶೂಟರ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ಇಬ್ಬರು ಶೂಟರ್‌ಗಳ ಪೈಕಿ ಒಬ್ಬನನ್ನು ಪೊಲೀಸರು ಹತ್ಯೆ ಮಾಡಿದ್ದರೆ. ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಮತ್ತೊಬ್ಬ ಶೂಟರ್‌ನನ್ನು ಅರೆಸ್ಟ್ ಮಾಡಲಾಗಿದೆ. ಭಯೋತ್ಪಾದಕ ಕೃತ್ಯವಾಗಿರಬಹುದೇ ಎನ್ನುವ ಅನುಮಾನಗಳು ಕಾಡುತ್ತಿವೆ.

ಯಹೂದಿಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಶೂಟರ್ ಹೆಚ್ಚು ಮಕ್ಕಳು ಹಾಗೂ ಹಿರಿಯ ನಾಗರೀಕರನ್ನು ಟಾರ್ಗೆಟ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಜನ ಸೇರಿದ್ದ ಹಬ್ಬದ ವಾತಾವರಣದಲ್ಲಿ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಆಯಂಥೋನಿ ಆಲ್ಬನಿಸ್, ಪೊಲೀಸ್ ಸೂಚನೆಗಳನ್ನು ಪಾಲಿಸಲು ಮನವಿ ಮಾಡಿದ್ದಾರೆ. ಈ ಘಟನೆಯಲ್ಲಿ ಮಡಿದವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿರುವ ಪ್ರಧಾನಿ ಆಲ್ಬನಿಸ್, ದಾಳಿ ಮಾಡಿದ ಇಬ್ಬರು, ಇದರ ಹಿಂದಿನ ಶಕ್ತಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

https://twitter.com/i/status/2000133367619355097

ಅಹಾರ ಪ್ರಿಯರೇಎಚ್ಚರ; ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ!

Psycho attack on female doctor ಮಲಗಿದಾಗ ಇಣುಕಿ ನೋಡುವ ಸೈಕೋ! ಬೆಂಗಳೂರಿನ ವೈದ್ಯೆ ಮಾಡಿದ್ದೇನು?

ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಬೇಡ ಎಂದ ವಧು -ವೈರಲ್ ವಿಡಿಯೋ ನೋಡಿ

ಪ್ರೀತಿಸಿ ಕೈಕೊಟ್ಟು ಮತ್ತೊಬ್ಬಳ ಜೊತೆ ವಿವಾಹ : ಮದುವೆ ಮಂಟಪದಲ್ಲಿ ಪ್ರಿಯತಮೆ ಗಲಾಟೆ!

TAGGED:12 killed in Sydney's Bondi Beach attackanother arrestedone killedterror suspect
Share This Article
Facebook Twitter Copy Link Print
Previous Article ಅಹಾರ ಪ್ರಿಯರೇಎಚ್ಚರ; ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ!
Next Article Shamanur Shivashankarappa ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ

Popular Posts

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

You Might Also Like

ಪ್ರಮುಖಕರ್ನಾಟಕ

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read
ಕರ್ನಾಟಕಪ್ರಮುಖ

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read
ಪ್ರಮುಖಕರ್ನಾಟಕ

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read
ಪ್ರಮುಖCrimeಕರ್ನಾಟಕ

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?