newsics.com
ನಿಮಗೆಲ್ಲಾ ‘ನಮಸ್ಕಾರ ದೇವ್ರು’ ಎನ್ನುತ್ತಾ ವಿಡಿಯೊ ಶುರು ಮಾಡೋ ಗಗನ್ ಶ್ರೀನಿವಾಸ್ ಎನ್ನುವ ಹುಡುಗ, ಡಾ.ಬ್ರೋ ಎಂದೇ ಫೇಮಸ್ ಆಗಿದ್ದಾರೆ.
ಡಾ.ಬ್ರೋ ಬಗ್ಗೆ ಹೇಳೋದಕ್ಕೂ, ನಾವೀಗ ಹೇಳೋಕೆ ಹೋಗ್ತಿರೋ ಸ್ಟೋರಿಗೂ ಲಿಂಕ್ ಇದೆ. ಈ ಹುಡುಗಿಯ ಹೆಸರು ಶ್ರೀನವಲ್ ಕಿಶೋರಿ… ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಶುರು ಮಾಡಿರೋ ಹುಡುಗಿ. ಶ್ರೀನವಲ್ ಕಿಶೋರಿ, ತೆಲಂಗಾಣ ರಾಜ್ಯದ ಹೈದ್ರಾಬಾದ್‌ನ ಹುಡುಗಿ. ಇನ್ನೂ 20 ವರ್ಷನೂ ದಾಟಿಲ್ಲ. ಈ ಹುಡುಗಿಯ ವೈಶಿಷ್ಟ್ಯತೆಗೆ ಹಲವು ಹುಡುಗರು ಮಾರುಹೋಗಿದ್ದಾರೆ. ಆಕೆಯನ್ನು ಫಾಲೋ ಮಾಡ್ತಿದ್ದಾರೆ. ಇನ್ನೂ ಕೆಲವು ಯುವಕರು ಈಕೆಯ ಅದ್ಭುತ ಕಲೆಗೆ ಫುಲ್ ಫಿದಾ ಆಗಿಹೋಗಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿರೋ ಕಿಶೋರಿ, ತನ್ನ ಅಕೌಂಟ್ನಲ್ಲಿ ಒಂದು ವಿಡಿಯೊ ಅಪ್ಲೋಡ್ ಮಾಡಿದ್ರೆ, ಲಕ್ಷ ಲಕ್ಷ ಜನರು ವೀಕ್ಷಣೆ ಮಾಡ್ತಿದ್ದಾರೆ. ದಿನಾ ಹಾಕ್ತಿರೋ ವಿಡಿಯೊ ನೋಡಿ ಆಕೆಗಾಗಿ ಏನ್ ಬೇಕಾದ್ರೂ ಮಾಡ್ತೀವಿ ಎನ್ನುತ್ತಿರುವ ಹುಡುಗರು ಟ್ರೆಂಡಿಂಗ್ ಶುರು ಮಾಡ್ತಿದ್ದಾರೆ.
ಈಕೆಯ ಮುಗ್ಧತೆ, ನಗು, ಹೇರ್ ಸ್ಟೈಲ್, ಆಕೆ ಹಾಕುವ ಸಂಪ್ರದಾಯ ಬದ್ಧ ಬಟ್ಟೆ.. ಹಣೆ ಪೂರ್ತಿ ಲಕ್ಷಣವಾಗಿ ಹಚ್ಚೋ ಶ್ರೀಗಂಧದ ನಾಮ ಸೇರಿದಂತೆ ಹಲವೂ ಗುಣಗಳು ಯುವಕರ ಮನಸ್ಸಿಗೆ ಖುಷಿ ಕೊಡ್ತಿದೆಯಂತೆ. ಇಷ್ಟೆಲ್ಲಾ ಲಕ್ಷಣವಿರೋ ಹುಡುಗಿ ಇದ್ರೇ ಸಾಕಪ್ಪ.. ಲವ್ ಮಾಡೋಕೆ, ಮದುವೆ ಆಗೋಕೆ ನಾವು ರೆಡಿ ಅಂತಾ ಹುಡುಗರು ಹೇಳ್ತಿದ್ದಾರೆ.
ಒಬ್ಬರ ಬಳಿ ಗರಿಷ್ಠ ಎಷ್ಟು ಸಿಮ್ ಕಾರ್ಡ್ ಇರಬಹುದು? ಹೆಚ್ಚಿದ್ದರೆ ಶಿಕ್ಷೆ ನಿಶ್ಚಿತ