newsics.com
ಸುಡಾನ್ ನಲ್ಲಿ ಮಹಿಳೆಯರನ್ನು ಕಿತ್ತು ತಿನ್ನಲಾಗ್ತಿದೆ. ಸೈನಿಕರ ಕ್ರೌರ್ಯ ಮುಗಿಲುಮುಟ್ಟಿದೆ. ರಣಹದ್ದಿನಂತೆ ಮಹಿಳೆಯರ ಮೇಲೆ ಸೈನಿಕರು ಎರಗುತ್ತಿದ್ದಾರೆ. ಸುಡಾನ್ ನ ಓಮ್‌ದುರ್‌ಮನ್ ನಗರದಲ್ಲಿ ಮಹಿಳೆಯರು ಬದುಕಲು ಹೆಣಗಾಡುತ್ತಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಸೈನಿಕರ ಜೊತೆ ಮಲಗುವ ಸ್ಥಿತಿ ನಿರ್ಮಾಣವಾಗಿದೆ.
ಸುಡಾನ್ ನಗರದ ಓಮ್‌ಡುರ್‌ಮನ್‌ನಿಂದ ಪಲಾಯನ ಮಾಡಿದ ಎರಡು ಡಜನ್‌ಗಿಂತಲೂ ಹೆಚ್ಚು ಮಹಿಳೆಯರ ಸ್ಥಿತಿ ಶತ್ರುವಿಗೂ ಬೇಡ ಎನ್ನುವಂತಿದೆ. ಆಹಾರ ಪಡೆಯಲು ಅವರಿಗೆ ಇರುವ ಒಂದೇ ಮಾರ್ಗವೆಂದರೆ ಸೈನಿಕರೊಂದಿಗೆ ಹಾಸಿಗೆ ಹಂಚಿಕೊಳ್ಳುವುದು. ಯೋಧರೊಂದಿಗೆ ಸಹಕರಿಸಿದರೆ ಮಾತ್ರ ಮಹಿಳೆಯರಿಗೆ ಆಹಾರ, ಅವರ ಕುಟುಂಬಕ್ಕೆ ಬೇಕಾದ ವಸ್ತುಗಳು ಸಿಗುತ್ತವೆ.
ಊಟ, ನೀರು ಬಯಸುವ ಮಹಿಳೆಯರು ಮೊದಲು ಸರತಿ ಸಾಲಿನಲ್ಲಿ ನಿಲ್ಲಬೇಕು. ನಂತ್ರ ಸೈನಿಕರ ಜೊತೆ ಶಾರೀರಿಕ ಸಂಬಂಧ ಬೆಳೆಸಬೇಕು. ಸೂಡಾನ್ ಅಂತರ್ಯುದ್ಧ ಮಹಿಳೆಯರನ್ನು ಈ ದುಸ್ಥಿತಿಗೆ ತಳ್ಳಿದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಜನರಿಗೆ ಹೊತ್ತಿನ ಊಟ ಸಿಗ್ತಿಲ್ಲ.
ಆರ್‌ಎಸ್‌ಎಫ್ ಯೋಧರು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರ ಹಂಚಿಕೊಳ್ಳಲು ಹಲವು ಮಹಿಳೆಯರು ಮುಂದಾಗಿದ್ದಾರೆ.
ಸರ್ಕಾರಿ ನೌಕರರೂ ಈಗ RSS ಸೇರಬಹುದು; ಇಂದಿರಾ ಗಾಂಧಿ ಹೇರಿದ್ದ ನಿಷೇಧ ರದ್ದು!