newsics.com
10 ವರ್ಷಗಳ ಹಿಂದೆ ಮಾಡಿದ ದೃಢ ನಿರ್ಧಾರದ ಬಳಿಕ ಕಠಿಣ ಪರಿಶ್ರಮಪಟ್ಟು ಓದಿದ ಮಗಳು ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದನ್ನು ಕೇಳಿ ದೆಹಲಿಯ ಬೀದಿಯಲ್ಲಿ ಚಹಾ ಮಾರಾಟ ಮಾಡುವ ತಂದೆಯ ಸಂತೋಷ ಕಣ್ಣೀರಾಗಿ ಹರಿದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ಅಮಿತಾ ಪ್ರಜಾಪತಿ ಸಿಎ ಪರೀಕ್ಷೆ ಪಾಸಾಗಿರುವ ವಿದ್ಯಾರ್ಥಿನಿ. ತನ್ನ ಶೈಕ್ಷಣಿಕ ಪಯಣದುದ್ದಕ್ಕೂ ತಂದೆ ಹೇಗೆ ತನಗೆ ಬೆಂಬಲವಾಗಿ ನಿಂತರು ಎಂಬುದನ್ನು ಆಕೆ ಹೇಳಿಕೊಂಡಿದ್ದಾಳೆ. ಅಮಿತಾ ಪ್ರಜಾಪತಿ ಅವರು ಪರೀಕ್ಷೆಯನ್ನು ಹೇಗೆ ಎದುರಿಸಿದರು ಎಂಬುದನ್ನು ವಿವರಿಸಿದ್ದಾರೆ. ತಂದೆಯನ್ನು ತಬ್ಬಿಕೊಂಡು ಕಣ್ಣೀರು ಈಡುತ್ತಿರುವ ಭಾವನಾತ್ಮಕ ವಿಡಿಯೋವನ್ನು ಆಕೆ ಪೋಸ್ಟ್ ಮಾಡಿದ್ದಾಳೆ.