newsics.com
ಕಾಂಗ್ರಾ: ರೈಲು ಚಲಿಸುತ್ತಿದ್ದಾಗಲೇ ಸೇತುವೆ ಕುಸಿದ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧಂಗು ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಧಂಗು ಬಳಿಯ ಚಕ್ಕಿ ನದಿಯ ಮೇಲಿನ ರೈಲ್ವೆ ಸೇತುವೆಯ ತಡೆಗೋಡೆ ಸೋಮವಾರ ನಿರಂತರ ಮಳೆಯಿಂದಾಗಿ ಕುಸಿದುಬಿದ್ದಿದ್ದು, ರೈಲಿನ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಧಂಗು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಗಡಿಯಲ್ಲಿದೆ. ಈ ಸೇತುವೆ ಪಠಾಣ್ಕೋಟ್ ಮೂಲಕ ಸಾಗುವ ದೆಹಲಿ-ಜಮ್ಮು ರೈಲು ಮಾರ್ಗದಲ್ಲಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಭಯಾನಕ ದೃಶ್ಯಗಳು ರೈಲು ಪವಾಡಸದೃಶವಾಗಿ ಪಾರಾಗಿರುವುದನ್ನು ತೋರಿವೆ.
ನೂರ್ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಶೋಕ್ ರತನ್, ಈ ಪ್ರದೇಶದಲ್ಲಿ ಅತಿಯಾದ ಮಳೆಯಿಂದಾಗಿ ತಡೆಗೋಡೆ ಕುಸಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ಇದೀಗ ಪಕ್ಕದ ಧಂಗು ರಸ್ತೆಯನ್ನು ಮುಚ್ಚಿದ್ದೇವೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.
https://twitter.com/i/status/1947223945918177684
Married woman dies ‘ನಾನು ಬಿದ್ದರೆ ಹಿಡಿದುಕೊಳ್ಳುತ್ತೀಯಾ’ ಎಂದು ಕೇಳುತ್ತಲೇ ಬಿದ್ದು ಮೃತಪಟ್ಟ ವಿವಾಹಿತೆ!
ಕಾರುಗಳನ್ನು ಕದ್ದು ಕೋಟಿ-ಕೋಟಿಗೆ ಮಾರಾಟ ಮಾಡಿದ್ದ ಎಂಬಿಎ ಪದವೀಧರನ ಕಥೆಯಿದು