newsics.com
ಗುರುಗ್ರಾಮ್: ‘ನಾನು ಬಿದ್ದರೆ ಹಿಡಿದುಕೊಳ್ಳುತ್ತೀಯಾ’ ಎಂದು ಕೇಳುತ್ತಲೇ 22 ವರ್ಷದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದುಹಣ ಣ ತಮ್ಮ ಅಪಾರ್ಟ್‌ಮೆಂಟ್‌ನ ಟೆರೇಸ್‌ನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಅಪಾರ್ಟ್‌ಮೆಂಟ್‌ನ ಟೆರೇಸ್ ಗೋಡೆಯ ಮೇಲೆ ಕುಳಿತು ತನ್ನ ಗತಿಯನ್ನು ಹಿಡಿಯುತ್ತೀಯಾ?’ ಎಂದು ತಮಾಷೆಯಾಗಿ ಕೇಳಿದ್ದಾರೆ. ಆದರೆ, ದುರದೃಷ್ಟವಶಾತ್ ಸಮತೋಲನ ಕಳೆದುಕೊಂಡು ಬಿದ್ದಿದ್ದು, ಪತಿ ರಕ್ಷಿಸಲು ಯತ್ನಿಸಿದರೂ ಕೈಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಯಾವುದೇ ದುರುದ್ದೇಶ ಕಂಡುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಬೋರಿಂಗಿ ಪಾರ್ವತಿ(22) ಮೃತಪಟ್ಟ ಮಹಿಳೆ. ಅವರ ಪತಿ 28 ವರ್ಷದ ದುರ್ಯೋಧನ ರಾವ್ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಂಪತಿ ಒಡಿಶಾದ ಗಂಜಾಂ ಮೂಲದವರಾಗಿದ್ದು, ಡಿಎಲ್‌ಎಫ್ ಫೇಸ್ 3ರಲ್ಲಿ ನಾಲ್ಕು ಅಂತಸ್ತಿನ ಕಟ್ಟಡದ ಎರಡು ಕೋಣೆಗಳ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ರಾವ್ ಖಾಸಗಿ ಸಂಸ್ಥೆಯಲ್ಲಿ ಸಾಮಾಜಿಕ ಮಾಧ್ಯಮ ವಿಷಯ ಮಾಡರೇಟರ್ ಆಗಿ ಕೆಲಸ ಮಾಡುತ್ತಿದ್ದರೆ, ಪಾರ್ವತಿ ಕಾಲ್ ಸೆಂಟರ್‌ನಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಡಿಎಲ್‌ಎಫ್ ಫೇಸ್ 3ರಲ್ಲೇ ಕೆಲಸ ಮಾಡುತ್ತಿದ್ದರು.
ದಂಪತಿ ರಾತ್ರಿ ಭೋಜನದ ನಂತರ ತಂಪಾದ ಗಾಳಿಯನ್ನು ಆನಂದಿಸಲು ಟೆರೇಸ್‌ಗೆ ಬಂದಿದ್ದರು. ಅವರು ಮಾತನಾಡುತ್ತಿದ್ದಾಗ, ಪಾರ್ವತಿ ಇದ್ದಕ್ಕಿದ್ದಂತೆ ಟೆರೇಸ್ ಗೋಡೆಯ ಮೇಲೆ ಹತ್ತಿ ಅದರ ಅಂಚಿನಲ್ಲಿ ಕಾಲುಗಳನ್ನು ಇಳಿಬಿಟ್ಟು ಕುಳಿತರು. ‘ನಾನು ಬಿದ್ದರೆ ನನ್ನನ್ನು ರಕ್ಷಿಸುತ್ತೀಯಾ?’ ಎಂದು ತಮ್ಮ ಪತಿಯನ್ನು ಕೇಳಿದರು. ರಾವ್ ಆಕೆಯನ್ನು ಕೆಳಗೆ ಇಳಿಯುವಂತೆ ಹೇಳಿ, ಆಕೆಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾರ್ವತಿ ಕೆಳಗೆ ಇಳಿಯಲು ನಿರ್ಧರಿಸಿದ್ದರಾದರೂ ಸಮತೋಲನ ಕಳೆದುಕೊಂಡು ಅಂಚಿನಿಂದ ಕೆಳಗೆ ಬಿದ್ದರು. ಪಾರ್ವತಿಯನ್ನು ಹಿಡಿದುಕೊಂಡರು ಮತ್ತು ಆಕೆ ಅವರ ತೋಳುಗಳನ್ನು ಹಿಡಿದುಕೊಂಡು ತೂಗಾಡುತ್ತಿದ್ದರು. ಇಬ್ಬರೂ ಸಹಾಯಕ್ಕಾಗಿ ಕೂಗಿದರು. ಆದರೆ ಕೇಳಲು ಯಾರೂ ಇರಲಿಲ್ಲ. ರಾವ್ ಸುಮಾರು ಎರಡು ನಿಮಿಷಗಳ ಕಾಲ ಆಕೆಯನ್ನು ಮೇಲೆ ಎಳೆಯಲು ಪ್ರಯತ್ನಿಸಿದರು. ಆದರೆ ಆಕೆ ಕೈಜಾರಿ ಕೆಳಗೆ ಬಿದ್ದರು. ಕಟ್ಟಡದ ಹಿಂಭಾಗದ ತೇವವಾದ ನೆಲದ ಮೇಲೆ ಬಿದ್ದಿದ್ದರಿಂದ ಅವರಿಗೆ ತೀವ್ರ ಆಂತರಿಕ ಗಾಯಗಳಾಗಿ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಕಾರುಗಳನ್ನು ಕದ್ದು ಕೋಟಿ-ಕೋಟಿಗೆ ಮಾರಾಟ ಮಾಡಿದ್ದ ಎಂಬಿಎ ಪದವೀಧರನ ಕಥೆಯಿದು