newsics.com
ಕೊನೆಗೂ ನಟಿ ವೈಷ್ಣವಿ ಗೌಡ ಅದ್ದೂರಿಯಾಗಿಯೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಆದರೆ ಮದುವೆ ಯಾವಾಗ ಎನ್ನುವ ವಿಷಯವನ್ನು ಬಿಟ್ಟುಕೊಟ್ಟಿಲ್ಲ. ಸದ್ಯ ಎಂಗೇಜ್ಮೆಂಟ್ ಮಾಡಿಕೊಂಡು ಉಸಿರು ಬಿಡ್ತಾ ಇದ್ದೇನೆ. ಮದುವೆಯ ಬಗ್ಗೆ ಆಮೇಲೆ ತಿಳಿಸ್ತೇನೆ. ಇನ್ನೂ ಸಾಕಷ್ಟು ಅರೇಂಜ್ಮೆಂಟ್ ಆಗಬೇಕಿದೆ. ಏನೇ ಆದರೂ ಮದುವೆಯ ಸಂಭ್ರಮ ಸಕತ್ ಫನ್ನಿ ಆಗಿರುತ್ತದೆ ಎಂದಿದ್ದಾರೆ ವೈಷ್ಣವಿ ಗೌಡ.
ಆದರೆ ವಿಷಯ ಅದಲ್ಲ, ಅವರು ಬೇರೊಂದು ಕಾರಣಕ್ಕೆ ಟೆನ್ಶನ್ ಆಗಿದ್ದಾರೆ. ಅನುಕೂಲ್ ಮಿಶ್ರಾ ಎನ್ನುವವರ ಜತೆ ಎಂಗೇಜ್ಮೆಂಟ್ ನಡೆದಿದೆ. ಅನುಕೂಲ್ ಅವರು ಬೇರೆ ರಾಜ್ಯದವರು. ಏರ್ಫೋರ್ಸ್ನಲ್ಲಿ ಅನುಕೂಲ್ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್ ಷೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್ ಷೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿಕೊಂಡಿದ್ದರು. ಆದರೆ, ಆಗ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಅವರೇ ಭಾವೀ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಇದೇ ವೇಳೆ ಎಡವಟ್ಟೊಂದು ನಡೆದಿದೆ. ಹಲವಾರು ಯೂಟ್ಯೂಬ್ಗಳಲ್ಲಿ ವೈಷ್ಣವಿ ಅವರ ಭಾವೀ ಪತಿಯ ಬಗ್ಗೆ ವಿಭಿನ್ನ ರೀತಿಯಲ್ಲಿ ವಿಷಯಗಳು ಬಂದವು. ಆರಂಭದಲ್ಲಿ ಅನುಕೂಲ್ ಅವರ ಹೆಸರು ಅಕಾಯ್ ಎಂದೇ ಹೇಳಿದ್ದರಿಂದ ಬಹುತೇಕ ಎಲ್ಲಾ ಕಡೆ ಅಕಾಯ್ ಎಂದೇ ಹೇಳಲಾಗಿತ್ತು. ಇವರು ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಟಿ ಹೇಳಿದ್ದರೂ, ಅದನ್ನು ಹಲವರು ಏರ್ಪೋರ್ಟ್ ಎಂದು ಬರೆದರು. ಕೆಲವು ಪರ್ಸನಲ್ ಯೂಟ್ಯೂಬ್ ಚಾನೆಲ್ ಮಾಡುವವರು ಪೈಪೋಟಿಗೆ ಬಿದ್ದವರಂತೆ ವೈಷ್ಣವಿ ಅವರ ಭಾವಿ ಪತಿಯ ಬಗ್ಗೆ ಮನಸೋಇಚ್ಛೆ ವರ್ಣಿಸಿದರು. ಹಲವರು ಅವರನ್ನು ಉದ್ಯಮಿ ಎಂದು ಕರೆದರು. ಇದಕ್ಕೆಲ್ಲ ಈಗ ವೈಷ್ಣವಿ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅವರು ಏರ್ಪೋರ್ಟ್ನಲ್ಲಿ ಕೆಲಸ ಮಾಡ್ತಿರೋದಲ್ಲ ಎಂದು ನೋವಿನಿಂದಲೇ ನುಡಿದಿದ್ದರು. ಇದೀಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ, ನನ್ನ ಭಾವೀ ಪತಿಯ ಹೆಸರು ಅಕಾಯ್ ಎನ್ನುತ್ತಾರೆ. ಉದ್ಯಮಿ ಎಂದು ಕೆಲವು ಯೂಟ್ಯೂಬ್ ಚಾನೆಲ್ಗಳಲ್ಲಿ ಬರೆಯಲಾಗಿದೆ ಎನ್ನುತ್ತಲೇ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಹೆಸರು ಅಕಾಯ್ ಅಲ್ಲ, ಅನುಕೂಲ್ ಎಂದು. ದಯವಿಟ್ಟು ಏನೇನೋ ಪ್ರಸಾರ ಮಾಡಬೇಡಿ. ಅದೆಷ್ಟು ಕಾನ್ಫಿಡೆಂಟ್ ಆಗಿ ಹೇಳಿಬಿಡುತ್ತಾರೆ ಎಂದು ಕಂಡರೆ ನನಗೇ ಅಚ್ಚರಿಯಾಗುತ್ತದೆ, ಯಾವುದೇ ಕ್ರಾಸ್ ಚೆಕ್ ಮಾಡಿಕೊಳ್ಳುವುದಿಲ್ಲ. ಸಂಬಂಧಪಟ್ಟವರನ್ನು ಕೇಳುವುದೂ ಇಲ್ಲ. ಮನಸ್ಸಿಗೆ ಬಂದಂತೆ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿರುವ ನಟಿ, ಪ್ಲೀಸ್ ಹಾಗೆಲ್ಲಾ ಮಾಡಬೇಡಿ. ಸರಿಯಾದ ವಿಷಯ ಕೇಳಿ ತಿಳಿದುಕೊಂಡು ಬರೆಯಿರಿ. ಈ ಬಗ್ಗೆ ನನ್ನ ಅಮ್ಮನೂ ಈಗಾಗಲೇ ಹೇಳಿದ್ದಾರೆ. ಆದರೂ ಹೆಸರು, ಉದ್ಯೋಗ ಸೇರಿದಂತೆ ಬಹುತೇಕ ವಿಷಯಗಳನ್ನು ತಪ್ಪುತಪ್ಪಾಗಿ ಪ್ರಸಾರ ಮಾಡಲಾಗ್ತಿದೆ ಎಂದು ನೋವಿನಿಂದ ನುಡಿದಿದ್ದಾರೆ ವೈಷ್ಣವಿ ಗೌಡ. ಯಾರ್ಯಾರನ್ನೋ ನನ್ನ ಗಂಡನನ್ನಾಗಿಸಬೇಡಿ ಎಂದು ಮನವಿ ಮಾಡಿದ್ದಾರೆ.
Marriage matter ಮದುವೆಗೆ ಈಕೆ ರೆಡಿ, ಆದರೆ… ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕಂತೆ! ಹುಡುಗರ ಎದೆಯಲ್ಲಿ ಢವಢವ!
Actor Prem ನಟ ಪ್ರೇಮ್ ವಿರುದ್ಧ ಕಾನೂನು ಕ್ರಮಕ್ಕೆ ಆ ನಟ ಮುಂದಾದ್ರ?
ಶೀಘ್ರದಲ್ಲೇ ಸ್ಯಾಂಡಲ್ವುಡ್ ನಟಿ ಅರ್ಚನಾ ಜೊತೆ IPL ಸ್ಟಾರ್ ಕ್ರಿಕೆಟರ್ ಮದುವೆ