newsics.com
ಬೆಂಗಳೂರು: ದರ್ಶನ್ ಪರ ಮಾತನಾಡಿಲ್ಲ ಎಂದು ಕೆಟ್ಟ ಕಮೆಂಟ್ಗಳ ಮೂಲಕ ಟಾರ್ಚರ್ ಕೊಡಲಾಗುತ್ತಿದೆ ಎಂದು ನಟಿ ಸೋನು ಗೌಡ ಅಳಲು ತೋಡಿಕೊಂಡಿದ್ದಾರೆ.
ದರ್ಶನ್ ಜೈಲು ಪಾಲಾಗಿರುವ ಹಿನ್ನೆಲೆಯಲ್ಲಿ ನಟಿ ಸೋನು ಗೌಡಗೆ ಬ್ಯಾಡ್ ಕಮೆಂಟ್ಸ್ ಟಾರ್ಚರ್ ನೀಡಲಾಗುತ್ತಿದೆ ಎನ್ನಲಾಗಿದೆ. ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡ್ತಿದ್ದಾರೆ ಎಂದು ಸೋನು ಗೌಡ ಅಳಲು ತೋಡಿಕೊಂಡಿದ್ದು ಅದಕ್ಕೆ ಸಂಬಂಧಿಸಿ ಅವರು ವಿಡಿಯೋ ಕೂಡ ಮಾಡಿದ್ದಾರೆ.
ಸೋನು ರೀಲ್ಸ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ ಎಂದು ನಟಿ ರೀಲ್ಸ್ನಲ್ಲೆ ಅಳಲು ತೋಡಿಕೊಂಡಿದ್ದಾರೆ. ಕೆಟ್ಟದಾಗಿ ಕಮೆಂಟ್ ಮಾಡದಂತೆ ಸೋನುಗೌಡ ಮನವಿ ಮಾಡಿದ್ದಾರೆ. ದರ್ಶನ್ ಪರವಾಗಿ ಮಾತನಾಡಿಲ್ಲ, ಎಂದು ಕಮೆಂಟ್ ಮಾಡ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದಕ್ಕೆ ರೀಲ್ಸ್ ಮೂಲಕ ಸೋನುಗೌಡ ಪ್ರತಿಕ್ರಿಯೆ ಕೊಟ್ಟಿದ್ದು, ದರ್ಶನ್ ಬಗ್ಗೆ ಮಾತನಾಡುವಷ್ಟು ನಾವು ದೊಡ್ಡವರಲ್ಲ. ನಾನು ತುಂಬಾ ಚಿಕ್ಕವಳು ಎಂದಿದ್ದಾರೆ. ದರ್ಶನ್ ತುಂಬಾ ಜನರಿಗೆ ಸಹಾಯ ಮಾಡಿದ್ದಾರೆ. ಒಂದ್ಸಲಾ ಫ್ಯಾನ್ ಆದರೆ ಸಾಯೋವರೆಗೂ ಫ್ಯಾನೆ ಎಂದಿದ್ದಾರೆ. ಅವರು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಎರಡು ಕುಟುಂಬಕ್ಕೆ ಧೈರ್ಯ ಕೊಡಲಿ, ಬ್ಯಾಡ್ ಕಮೆಂಟ್ಸ್ ಮಾಡಬೇಡಿ ಎಂದು ಸೋನುಗೌಡ ಸೋಶಿಯಲ್ ಮಿಡಿಯಾ ಮೂಲಕ ಮನವಿ ಮಾಡಿದ್ದಾರೆ. ಸದ್ಯ ಅವರ ಈ ಮನವಿ ವೈರಲ್ ಆಗಿದೆ.
ಶಾಂತಂ ಪಾಪಂ ಟೆಲಿ ಸರಣಿಯಲ್ಲಿ ನಟ ದರ್ಶನ್ ಕಥೆ! ಏನಿದು ಡೇರ್ ಡೆವಿಲ್ ದೇವದಾಸ್ ಕಹಾನಿ?
ಹಾಟ್ ಲುಕ್ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ‘ಟೋಬಿ’ ಚೆಲುವೆ ಚೈತ್ರ ಆಚಾರ್
ಸ್ಯಾಂಟೋರಿನಿ ದ್ವೀಪ ಸಮುದ್ರದಲ್ಲಿ ಹನಿಮೂನ್; ಫೋಟೋ ಹಂಚಿಕೊಂಡ ವಿಜಯ ಮಲ್ಯ ಮಗ ಸಿದ್ಧಾಥ್ ಮಲ್ಯ