ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು ಪುತ್ರ ಸಿದ್ಧಾರ್ಥ್ ಮಲ್ಯ ಇತ್ತೀಚೆಗೆ ಬಹುಕಾಲದ ಗೆಳತಿ ಜೊಅವರು ತನ್ನ ಗೆಳತಿ ಜಾಸ್ಮಿನ್ ರನ್ನು ಕೈಹಿಡಿದಿದ್ದಾರೆ. ಸದ್ಯ ಹನಿಮೂನ್ ಮೂಡ್‌ನಲ್ಲಿರುವ ಸಿದ್ದಾರ್ಥ್, ಸ್ಯಾಂಟೋರಿನಿ ದ್ವೀಪ ಸಮುದ್ರದಲ್ಲಿರುವ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ.
ಕಳೆದ ವಾರವಷ್ಟೆ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ಅವರು ತಾವು ಈಗ ವಿವಾಹಿತ ವ್ಯಕ್ತಿ ಅಂತ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಇದೀಗ ಸಿದ್ದಾರ್ಥ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ಮತ್ತು ತಮ್ಮ ಪತ್ನಿ ಜಾಸ್ಮಿನ್ ಅವರ ಫೋಟೋವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಸಿದ್ದಾರ್ಥ್ ಮತ್ತು ಜಾಸ್ಮಿನ್ ಅವರ ವಿವಾಹವು ಇಂಗ್ಲೆಂಡ್‌ನ ಹರ್ಟ್‌ಫೋರ್ಡ್‌ಶೈರ್‌ನಲ್ಲಿ ಎಂಬ ನಗರದಲ್ಲಿ ನಡೆಯಿತು.
ಆದರೆ ಹನಿಮೂನ್ ಮೂಡ್ ನಲ್ಲಿರುವ ಸಿದ್ದಾರ್ಥ್ ಮಲ್ಯಗೆ ಭಾರತೀಯರು ಹಳೆ ಗರ್ಲ್ ಪ್ರೆಂಡ್ಸ್ ಗಳನ್ನು ನೆನಪಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಯಾವಾಗ ಅಪ್ಪ ವಿಜಯ್ ಮಲ್ಯರನ್ನು ಕರೆದುಕೊಂಡು ಭಾರತಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದ್ದಾರೆ ನೆಟ್ಟಿಗರು.