ಪಾಗಲ್ ಪ್ರೇಮಿಯೊಬ್ಬ ಪ್ರೇಮ ವೈಫಲ್ಯ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನಸಾವಿಯಲ್ಲಿ ನಡೆದಿದೆ.
ಸಂತೋಷ್ ಅತ್ತಿಗೆ ತಂಗಿಯನ್ನು ಪ್ರೀತಿಸುತ್ತಿದ್ದ. ಮದುವೆಗೆ ಯುವತಿಯಿಂದ ಒಪ್ಪಿಗೆ ಸಿಗದಿದ್ದಾಗ ಮನನೊಂದು ಆತದ್ಮಹತ್ಯೆ ಮಾಡಿಕೊಂಡಿದ್ದಾನೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂತೋಷ್ (22) ನೇಣುಬಿಗಿದುಕೊಂಡು ಸಾವಿಗೆ ಶರಣಾದ ಯುವಕ. ನೀನು ಇಲ್ಲದ ಲೈಫ್ ನನಗೆ ಬೇಡ, ನಾನು ಸತ್ತರು ಪ್ರೀತಿಗೊಸ್ಕರ, ನಾನು ಒಬ್ಬ ಹುಚ್ಚು ಪ್ರೇಮಿ ಎಂದು ಮೊಬೈಲ್ ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ಬಳಿಕ ಮನೆಯಲ್ಲಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.