newsics.com
ಬೆಂಗಳೂರು: ಬಾಸ್ಕೆಟ್ ಬಾಲ್ ಆಟಗಾರ್ತಿ ಸೋನಿಯಾ ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.
ಸ್ಟೇಟ್, ನ್ಯಾಷನಲ್ ಲೆವೆಲ್ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಭಾಗಿಯಾಗಿದ್ದ 26 ವರ್ಷದ ಸೋನಿಯಾ ಬುಧವಾರ (ಮಾರ್ಚ್ 12) ಬೆಳಗ್ಗೆ 10 ಗಂಟೆ ವೇಳೆಗೆ ಬೆಂಗಳೂರಿನ ಪೊಟ್ಲಪ್ಪ ಗಾರ್ಡನ್ ಬಳಿ ಇರುವ ಮನೆಯಲ್ಲಿ ಸಾವನ್ನಪ್ಪಿದ್ದಾಳೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಶಂಕೆ ವ್ಯಕ್ತಪಡಿಸಿದ್ದರೆ. ಬಾತ್ ರೂಮ್ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಹೇಳುತ್ತಿದ್ದಾರೆ. ಹೀಗಾಗಿ ಸೋನಿಯಾ ಸಾವು ನಿಗೂಢವಾಗಿದೆ.
ಕಳೆದ ಏಳೆಂಟು ವರ್ಷಗಳಿಂದ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಗುರುತಿಸಿಕೊಂಡಿದ್ದ ಸೋನಿಯಾ, ರಾಜ್ಯ, ರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಿಗಳಲ್ಲಿ ಸೋನಿಯಾ ಭಾಗಿಯಾಗಿದ್ದಳು. ಮುಂದಿನ ತಿಂಗಳು ದುಬೈನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸೋನಿಯಾ ಭಾಗವಹಿಸಬೇಕಿತ್ತು.
ಸದ್ಯ ಸೋನಿಯಾ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಆಡುಗೋಡಿ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸದ್ಯ ಸೋನಿಯಾ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಆಡುಗೋಡಿ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
pool of blood ಇರಾನ್‌ನಲ್ಲಿ ಧಾರಾಕಾರ ಮಳೆ, ರಕ್ತದ ಮಡುವಿನಂತೆ ಕಂಡ ಹಾರ್ಮುಜ್ ಬೀಚ್! ವೈರಲ್ ವಿಡಿಯೋ ನೋಡಿ
ಸರ್ಕಾರಿ ಮನೆ ಮಂಜೂರು ಮಾಡಲು ಮಹಿಳೆಯನ್ನು ಮಂಚಕ್ಕೆ ಕರೆದ ಗ್ರಾಪಂ ಸದಸ್ಯ! ದೂರು ದಾಖಲು
ಪ್ಲಾಸ್ಟಿಕ್ ಬಾಟಲ್‌ಗಳಲ್ಲಿನ ನೀರು ಕುಡಿದರೆ ರಕ್ತದೊತ್ತಡ ಗಣನೀಯ ಹೆಚ್ಚಳ!