newsics.com
ಬೆಂಗಳೂರು: ನಗರದಲ್ಲಿ ಮತ್ತೆ ಕಸ ವಿಲೇವಾರಿ ಸಮಸ್ಯೆ ತೀವ್ರಗೊಂಡಿದೆ.
ಕಣ್ಣೂರು ಬಳಿಯ ಮಿಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್ನಲ್ಲಿ ಕಸ ಹಾಕುವುದನ್ನೇ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲೆಲ್ಲೂ ಕಸದ ರಾಶಿಗಳೇ ಕಾಣುತ್ತಿವೆ.
ಬಿಬಿಎಂಪಿ ವಾಹನಗಳು ಸಹ ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ಈ ಬೆಳವಣಿಗೆ ಬೆನ್ನಲ್ಲೇ ಕಸಕ್ಕೆ ತೆರಿಗೆ ವಿಧಿಸಲು ಮುಂದಾಗಿರುವ ಸರ್ಕಾರದ ನಡೆಗೆ ಆಕ್ರೋಶ ಭುಗಿಲೆದ್ದಿದೆ.
ಕಣ್ಣೂರು ಬಳಿಯ ಮಿಟ್ಟಗಾನ ಹಳ್ಳಿಯಲ್ಲಿ ಕಸದ ಡಂಪಿಂಗ್ ಹೆಚ್ಚಾಗಿದ್ದು, ಮಾಲಿನ್ಯ ಮಿತಿಮೀರಿದೆ. ಗರಿಷ್ಠ ಹಂತ ತಲುಪಿ ವಾತಾವರಣ ಹದಗೆಟ್ಟಿದ್ದರೂ ಪಾಲಿಕೆ ಮಾತ್ರ ಇನ್ನೂ ಕಸ ಸುರಿಯುವುದನ್ನು ಮುಂದುವರಿಸಿದೆ.
ಹೀಗಾಗಿ ಕಣ್ಣೂರು, ಮಿಟ್ಟಗಾನಹಳ್ಳಿ ಕಲ್ಲು ಕ್ವಾರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ಸುರಿಯುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ 400ಕ್ಕೂ ಹೆಚ್ಚು ಕಸ ವಿಲೇವಾರಿ ಲಾರಿಗಳು ಸಾಲುಗಟ್ಟಿ ನಿಂತಿವೆ.
ಕಣ್ಣೂರು ಬಳಿಯ ಮಿಟ್ಟಗಾನ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿದೆ ಎಂದು ಸ್ಥಳೀಯರು ಬಿಬಿಎಂಪಿ ವಾಹನಗಳನ್ನು ತಡೆದು ನಿಲ್ಲಿಸಿದ್ದಾರೆ.
ಪ್ಲಾಸ್ಟಿಕ್ ಬಾಟಲ್ಗಳಲ್ಲಿನ ನೀರು ಕುಡಿದರೆ ರಕ್ತದೊತ್ತಡ ಗಣನೀಯ ಹೆಚ್ಚಳ!
Good news for the injured ಗಾಯಾಳುಗಳಿಗೆ ಸಿಹಿ ಸುದ್ದಿ… ಬರಲಿದೆ ಕೇವಲ 4 ಗಂಟೆಯಲ್ಲಿ ಗಾಯ ವಾಸಿಮಾಡುವ ಹೈಡ್ರೋಜೆಲ್!
Know your personality ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ! ನಿಮ್ಮ ಆಯ್ಕೆಯ ವೃತ್ತ ಯಾವುದು? ನೀವೆಂಥವರು?