pool of blood ಇರಾನ್‌ನಲ್ಲಿ ಧಾರಾಕಾರ ಮಳೆ, ರಕ್ತದ ಮಡುವಿನಂತೆ ಕಂಡ ಹಾರ್ಮುಜ್ ಬೀಚ್! ವೈರಲ್ ವಿಡಿಯೋ ನೋಡಿ

newsics.com ಇರಾನ್‌ನಲ್ಲಿ ಧಾರಾಕಾರ ಮಳೆಯಾಗಿದ್ದು, ಈ ಮಳೆ ನೀರು ಅಲ್ಲಿನ ಕಡುಗೆಂಪು ಮಣ್ಣಿನೊಂದಿಗೆ ಮಿಶ್ರಿತಗೊಂಡು ಅದನ್ನು ಸಮುದ್ರಕ್ಕೆ ಹೊತ್ತೊಯ್ಯುತ್ತಿರುವುದರಿಂದ ಆ ಪ್ರದೇಶವಿಡೀ ಕೆಂಪು ರಕ್ತದ ಹೊಳೆಯಂತೆ ಗೋಚರಿಸುತ್ತಿದೆ. ಇರಾನ್‌ನಿಂದ ಹೊರಗಿರುವ ಜನರಿಗೆ ಅಪರೂಪವೆನಿಸುವ ಈ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಮಳೆನೀರು ಕಡುಗೆಂಪು ಮಣ್ಣನ್ನು ಬೀಚ್‌ಗೆ ತೊಳೆದುಕೊಂಡು ಹೋಗಿದ್ದು, ಸಮುದ್ರದ ನೀರಿನೊಂದಿಗೆ ಬೆರೆತು ಎದ್ದುಕಾಣುವ ಕೆಂಪು ನೀರು ಅಲ್ಲಿ ಅಲೆಗಳ ಉಬ್ಬರವಿಳಿತಗಳನ್ನು ಸೃಷ್ಟಿಸುವುದನ್ನು ನೋಡಬಹುದಾಗಿದೆ. ಈ ದೃಶ್ಯ ಕಾಣ ಸಿಗುವುದು ಇರಾನ್‌ನ ಹಾರ್ಮುಜ್ ದ್ವೀಪದಲ್ಲಿ. … Continue reading pool of blood ಇರಾನ್‌ನಲ್ಲಿ ಧಾರಾಕಾರ ಮಳೆ, ರಕ್ತದ ಮಡುವಿನಂತೆ ಕಂಡ ಹಾರ್ಮುಜ್ ಬೀಚ್! ವೈರಲ್ ವಿಡಿಯೋ ನೋಡಿ