newsics.com
ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣವೂ ದುಬಾರಿಯಾಗಲಿದೆ.
ಬೆಂಗಳೂರಿನಲ್ಲಿ ಆಟೋ ಮೀಟರ್ ದರ ಏರಿಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮಾರ್ಚ್‌ನಲ್ಲಿ ಮೀಟರ್ ದರ ಏರಿಕೆ ಬಹುತೇಕ ಖಚಿತ ಎಂದು ವರದಿಗಳು ಹೇಳಿವೆ.
ಜನವರಿಯಲ್ಲಿ ರಾಜ್ಯ ಬಸ್ ಟಿಕೆಟ್ ದರವನ್ನು ಕರ್ನಾಟಕ ರಾಜ್ಯದಾದ್ಯಂತ ಹೆಚ್ಚಳ ಮಾಡಿತ್ತು. ಇದರೊಂದಿಗೆ ಬಿಎಂಟಿಸಿ ಬಸ್ ದರವೂ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಫೆಬ್ರವರಿಯಲ್ಲಿ ನಮ್ಮ ಮೆಟ್ರೋ ದರವೂ ಗಣನೀಯ ರೀತಿಯಲ್ಲಿ ಹೆಚ್ಚಳವಾಗಿತ್ತು. ಮಾರ್ಚ್‌ನಲ್ಲಿ ಆಟೋ ಮೀಟರ್ ದರ ಏರಿಕೆ ಸಾಧ್ಯತೆ ಹೆಚ್ಚಿದೆ.
ಇಂದು ಸಭೆ:
ನೂತನ ಆಟೋ ಮೀಟರ್ ದರ ಹೆಚ್ಚಳ ಸಂಬಂಧ ಮಾರ್ಚ್ 12 ರಂದು ಬೆಳಗ್ಗೆ 11 ಗಂಟೆಗೆ ದರ ಏರಿಕೆ ಕುರಿತಂತೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ದರ ಪರಿಷ್ಕರಣೆ ಸಭೆ ನಡೆಯಲಿದೆ.
ಈಗಾಗಲೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮೀಟರ್ ದರ ಹೆಚ್ಚಳ ಮಾಡುವಂತೆ ಒತ್ತಡ ಹೆಚ್ಚಾಗಿದೆ. ಕಳೆದ ವರ್ಷವೇ ಆಟೋ ಚಾಲಕ ಸಂಘಟನೆಗಳು ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದವು. ಒಂದು ಕಿ.ಮೀಗೆ 5 ರುಪಾಯಿ, ಎರಡು ಕಿಮೀಗೆ 10 ರುಪಾಯಿ ಏರಿಕೆ ಮಾಡುವಂತೆ ಮನವಿ ಮಾಡಲಾಗಿತ್ತು
ಬೆಂಗಳೂರಲ್ಲಿ ಕನಿಷ್ಠ ಆಟೋ ಮೀಟರ್ ದರ ಎರಡು ಕಿಮೀಗೆ 30 ರೂಪಾಯಿ ಇದೆ, ಈಗ ಕನಿಷ್ಟ ದರವನ್ನು 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ.
ಈ ಹಿಂದೆ ಅಂದರೆ 2021 ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು. ಅಲ್ಲದೇ, ಆಟೋ ಸಿಎನ್ಜಿ ಅನಿಲದ ದರವೂ ಒಂದು ಕೆಜಿಗೆ 88 ರೂಪಾಯಿ ಆಗಿದೆ. ಎಲ್ಪಿಜಿ ದರ ಕೆಜಿಗೆ 61 ರೂಪಾಯಿ ಆಗಿದ್ದಾಗ ಮೀಟರ್ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ ಈಗ 88 ರೂಪಾಯಿಗೆ ಹೆಚ್ಚಳವಾಗಿದೆ. ಅದ್ದರಿಂದ ಆಟೋ ಮೀಟರ್ ದರವನ್ನು ಏರಿಕೆ ಮಾಡಲೇಬೇಕೆಂದು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ.
ರನ್ಯಾ ಸಿಕ್ಕಿಬೀಳಲು ಗಂಡ ಜತಿನ್ ಕಾರಣನಾ? ರನ್ಯಾಗೆ ದುಬಾರಿ ಗಿಫ್ಟ್ ಕೊಟ್ಟ ಸಚಿವರು ಯಾರು?
DYSP Arrest ವಕೀಲೆ ಜೀವಾ ಆತ್ಮಹ*ತ್ಯೆ ಪ್ರಕರಣ: ಡಿವೈಎಸ್ಪಿ ಕನಕಲಕ್ಷ್ಮೀ ಬಂಧನ