newsics.com
ಬೆಂಗಳೂರು: ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಪುತ್ರ ವಿಷ್ಣು ಭಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಹೆಚ್ ಎಸ್ ಆರ್ ಠಾಣೆಯ ಪೊಲೀಸರು ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಮಗ ವಿಷ್ಣು ಭಟ್ ಎಂಬುವರನ್ನು ಬಂಧಿಸಿದ್ದಾರೆ.
ಕಳೆದ ಫೆಬ್ರವರಿ 7ರಂದು ಹೋಟೆಲ್ ಬಳಿ ಗಲಾಟೆ ಮಾಡಿದ್ದರು. ಬಳಿಕ ಬುಧವಾರ (ಫೆಬ್ರವರಿ 26) ಕೂಡ ಹೋಟೆಲ್ ಬಳಿಗೆ ಬಂದು ವಿನಾಕಾರಣ ಜಗಳಕ್ಕೆ ಇಳಿದಿದ್ದರು. ಜಗಳದ ವೇಳೆಯಲ್ಲೇ ಕಬ್ಬಿಣದ ವಸ್ತುವಿನಿಂದ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದರು.
ಘಟನೆ ಸಂಬಂಧ ಹೋಟೆಲ್ ಸಿಬ್ಬಂದಿ ಹೆಚ್ ಎಸ್ ಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಪುತ್ರ ವಿಷ್ಣು ಭಟ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷ್ಣು ಭಟ್‌ರನ್ನು ವಿಚಾರಣೆ ನಡೆಸುತ್ತಿದ್ದಾರೆ.
AI Robot Attack: ಎಲ್ಲರ ಭಯ ನಿಜವಾಯ್ತು: ಜನರ ಮೇಲೆ ಎಐ ರೋಬೋಟ್ ದಾಳಿ
Priyanka chopra 21.75 ಕೋಟಿಯ ಕಿವಿಯೋಲೆ, 2 ಕೋಟಿ ಉಂಗುರ; ರಾಣಿಯಂತೆ ಬದುಕುತ್ತಿರೋ ಈ ನಟಿ ಯಾರು?