Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Gold card visa 44 ಕೋಟಿ ಕೊಟ್ರೆ ಗ್ರೀನ್ ಬದಲು ಗೋಲ್ಡ್ ಕಾರ್ಡ್ ವೀಸಾ: ಟ್ರಂಪ್‌ ಘೋಷಣೆ
ದೇಶಪ್ರಮುಖವಿದೇಶ

Gold card visa 44 ಕೋಟಿ ಕೊಟ್ರೆ ಗ್ರೀನ್ ಬದಲು ಗೋಲ್ಡ್ ಕಾರ್ಡ್ ವೀಸಾ: ಟ್ರಂಪ್‌ ಘೋಷಣೆ

Share
2 Min Read
SHARE

newsics.com

ವಾಷಿಂಗ್ಟನ್:‌ ವಿದೇಶಿ ಹೂಡಿಕೆದಾರರ ಆಕರ್ಷಿಸಲು 35 ವರ್ಷಗಳಿಂದ ನೀಡುತ್ತಿದ್ದ ಗ್ರೀನ್‌ ಕಾರ್ಡ್‌ ವೀಸಾ ರದ್ದು ಮಾಡಿ ಅದರ ಬದಲು 44 ಕೋಟಿ ಕೊಟ್ಟರೆ ಬಹುತೇಕ ಪೌರತ್ವದ ಎಲ್ಲಾ ಸೌಲಭ್ಯ ಹೊಂದಿರುವ ಪಟಾಫಟ್‌ ವೀಸಾ ದೊರಕಿಸುವ ಗೋಲ್ಡ್‌ ಕಾರ್ಡ್‌ ವಿತರಣೆ ಮಾಡುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ರೀಮಂತ ವಲಸಿಗರಿಗಾಗಿ ‘ಗೋಲ್ಡ್ ಕಾರ್ಡ್‌’ಗಳನ್ನು ಪರಿಚಯಿಸುವ ಮೂಲಕ ಅಮೆರಿಕದ ಪೌರತ್ವ ಪಡೆಯುವುದನ್ನು ಸುಲಭಗೊಳಿಸಲು ಯೋಜಿಸುತ್ತಿದ್ದಾರೆ. ಈ ಕಾರ್ಡ್‌ಗಳನ್ನು ಶ್ರೀಮಂತ ವಲಸಿಗರು 5 ಮಿಲಿಯನ್ ಅಮೆರಿಕನ್ ಡಾಲರ್‌ (ಅಂದಾಜು 43 ಕೋಟಿ 55 ಲಕ್ಷ) ಪಾವತಿಸಿ ಖರೀದಿಸಬಹುದಾಗಿದೆ ಎಂದು ವರದಿಯಾಗಿದೆ.

ಅಮೆರಿಕದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ, ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ ಇಬಿ-5 ವೀಸಾ ಯೋಜನೆಯನ್ನು ಗೋಲ್ಡ್ ಕಾರ್ಡ್‌ನೊಂದಿಗೆ ಬದಲಾಯಿಸಲಾಗುವುದು’ ಎಂದು ಟ್ರಂಪ್‌ ತಿಳಿಸಿದ್ದಾರೆ.

ಈ ಗೋಲ್ಡ್ ಕಾರ್ಡ್‌ಗಳು ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೀನ್ ಕಾರ್ಡ್ ನಿವಾಸಿಗಳು ಮತ್ತು ಹೊಸ ವಿದೇಶಿಯರಿಗೆ ಅಮೆರಿಕನ್ ಪೌರತ್ವದ ಮಾರ್ಗವನ್ನು ಮತ್ತಷ್ಟು ಸುಲಭಗೊಳಿಸಲಿದೆ. ಸುಮಾರು ಒಂದು ಮಿಲಿಯನ್ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಉದ್ದೇಶವಿದ್ದು, ಈ ಉಪಕ್ರಮವು ರಾಷ್ಟ್ರೀಯ ಸಾಲವನ್ನು ತ್ವರಿತವಾಗಿ ತೀರಿಸಲು ಸಹಾಯ ಮಾಡಲಿದೆ ಎಂದು ಟ್ರಂಪ್‌ ವಿವರಿಸಿದ್ದಾರೆ.

ಇಬಿ-5 ಯೋಜನೆಯು ಅಮೆರಿಕನ್ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಭರವಸೆ ನೀಡುವ ವಿದೇಶಿಯರಿಗೆ, ಗ್ರೀನ್ ಕಾರ್ಡ್‌ಗಳನ್ನು ನೀಡುತ್ತದೆ. ನಾವು ಈಗ ಸುಮಾರು 5 ಮಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡಲಿದ್ದೇವೆ. ಇದು ನಿಮಗೆ ಗ್ರೀನ್ ಕಾರ್ಡ್ ಸವಲತ್ತುಗಳನ್ನು ನೀಡುವುದರ ಜೊತೆಗೆ, ಅಮೆರಿಕನ್ ಪೌರತ್ವ ಪಡೆಯುವ ಮಾರ್ಗವನ್ನು ಸುಲಭಗೊಳಿಸಲಿದೆ ಎಂದಿದ್ದಾರೆ.

ಅಕ್ರಮ ವಲಸಿಗರ ನೋಂದಣಿ

ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ ಪ್ರತಿ ವ್ಯಕ್ತಿಯ ಹೆಸರು ನೋಂದಾಯಿಸುವ ಕೆಲಸವನ್ನು ಟ್ರಂಪ್ ನೇತೃತ್ವದ ಆಡಳಿತವು ಆರಂಭಿಸಿದೆ. ಅಕ್ರಮವಾಗಿ ನೆಲಸಿರುವವರು ತಾವಾಗಿಯೇ ಹೆಸರು ನೋಂದಾಯಿಸಿಕೊಳ್ಳದೆ ಇದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮವಾಗಿ ನೆಲಸಿರುವ ಪ್ರತಿ ವ್ಯಕ್ತಿಯೂ ತನ್ನ ಬೆರಳಚ್ಚು ವಿಳಾಸವನ್ನು ಒದಗಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. 14 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರುವ ಪ್ರತಿಯೊಬ್ಬರಿಗೂ ಇದು ಅನ್ವಯವಾಗುತ್ತದೆ. ‘ಹೊರಗಿನವರು ಹೆಸರು ನೋಂದಾಯಿಸಲು ವಿಫಲರಾದಲ್ಲಿ ದಂಡ ಅಥವಾ ಜೈಲು ಶಿಕ್ಷೆ ಅಥವಾ ಅವರೆಡೂ ಶಿಕ್ಷೆಗಳಿಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಲಾಗಿದೆ.

https://x.com/CollinRugg/status/1894509396333601094?ref_src=twsrc%5Etfw%7Ctwcamp%5Etweetembed%7Ctwterm%5E1894509396333601094%7Ctwgr%5E9b1c2db0f76619f5a73deed8bfc443ea350fa596%7Ctwcon%5Es1_c10&ref_url=https%3A%2F%2Fapi-news.dailyhunt.in%2F

TAGGED:Gold Card 44 Crore Visa Padiri: Trump's announcement that Gold Card will be distributed
Share This Article
Facebook Twitter Copy Link Print
Previous Article Vishnu Bhat arrest ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಮಗ ವಿಷ್ಣು ಭಟ್ ಬಂಧನ, ಆಗಿದ್ದೇನು?
Next Article Mahakumba mela ಮುಂದಿನ ಕುಂಭ ಮೇಳ ಎಲ್ಲಿ ನಡೆಯುತ್ತೆ?ಯಾವಾಗ..?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?