newsics.com
ಶಿರಡಿ: ಭದ್ರತೆಯ ದೃಷ್ಟಿಯಿಂದ ಇಲ್ಲಿನ ಸಾಯಿಬಾಬಾ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದದೂಟಕ್ಕೆ ಟೋಕನ್ ವ್ಯವಸ್ಥೆ ಜಾರಿಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಈ ವ್ಯವಸ್ಥೆ ನಾಳೆಯಿಂದಲೇ (ಫೆ.7) ಜಾರಿಯಾಗಲಿದೆ. ಸಾಯಿಬಾಬಾ ದರ್ಶನಕ್ಕೆ ಬರುವ ಭಕ್ತರಿಗೆ ಟೋಕನ್ ವಿಧಾನದ ಮೂಲಕ ಉಚಿತ ಪ್ರಸಾದ ನೀಡಲಾಗುವುದು. ಸಾಯಿ ಪ್ರಸಾದಾಲಯದಲ್ಲಿ ಭಕ್ತರಿಗೆ ಉಚಿತ ಊಟಕ್ಕಾಗಿ ಕೂಪನ್ಗಳನ್ನು ನೀಡಲಾಗುವುದು. ಶಿರಡಿಯಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಅಪರಾಧ ಪ್ರಮಾಣ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.
ಪ್ರತಿದಿನ 50 ರಿಂದ 60 ಸಾವಿರ ಜನರು ಊಟ ಮಾಡುತ್ತಾರೆ. ಶಿರಡಿ ಸಂಸ್ಥಾನದ ಭಕ್ತ ನಿವಾಸದಲ್ಲಿ ಆಹಾರಕ್ಕಾಗಿ ಕೂಪನ್ಗಳನ್ನು ಸಹ ನೀಡಲಾಗುವುದು. ಪ್ರಸಾದಾಲಯದಲ್ಲಿ ಕೂಪನ್ಗಳನ್ನು ಪಡೆಯಲು ಹೆಚ್ಚುವರಿ ವ್ಯವಸ್ಥೆಗಳನ್ನು ಸಹ ಮಾಡಲಾಗುವುದು ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋರಕ್ಷ ಗಾಡಿಲ್ಕರ್ ಹೇಳಿದ್ದಾರೆ.
ಈ ಮೊದಲು ಶಿರಡಿಯಲ್ಲಿ ಉಚಿತ ಊಟಕ್ಕೆ ನೇರ ಪ್ರವೇಶವಿತ್ತು. ಆದರೆ ಇನ್ನು ಕೂಪನ್ಗಳನ್ನು ಹೊಂದಿರುವವರಿಗೆ ಮಾತ್ರ ಪ್ರವೇಶ ಅನುಮತಿಸಲಾಗುವುದು ಎಂದು ತಿಳಿಸಿದರು.
ದರೋಡೆ ಮಾಡುವ ಉದ್ದೇಶದಿಂದ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಶಿರಡಿ ಸಾಯಿಬಾಬಾ ಸಂಸ್ಥಾನದ ಇಬ್ಬರು ಉದ್ಯೋಗಿಗಳನ್ನು ಹತ್ಯೆ ಮಾಡಿದ್ದರು.
ಅಲ್ಲದೆ, ಕೆಲವು ದಿನಗಳ ಹಿಂದೆ, ಮಾಜಿ ಸಂಸದ ಮತ್ತು ಬಿಜೆಪಿ ನಾಯಕ ಸುಜಯ್ ವಿಖೆ, ಶಿರಡಿಯಲ್ಲಿ ಉಚಿತ ಊಟವನ್ನು ನಿಲ್ಲಿಸಬೇಕು. ಶಿರಡಿ ದೇವಸ್ಥಾನದೊಳಗೆ ಯಾರ್ ಯಾರೋ ಆಗಮಿಸುತ್ತಾರೆ. ಊಟದ ಕೋಣೆಗೂ ಬರುತ್ತಾರೆ. ಹೀಗಾಗಿ ಅಪಾಯ ಕೂಡ ಹೆಚ್ಚಿದೆ. ಶಿರಡಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಉಚಿತ ಊಟ ನಿಲ್ಲಿಸಬೇಕೆಂದು ಸುಜಯ್ ವಿಖೆ ಒತ್ತಾಯಿಸಿದ್ದರು.
Surprise silence | ಇಲ್ಲಿ ನಾಯಿಗಳು ಬೊಗಳಲ್ಲ, ಗುಡುಗು, ಸಿಡಿಲುಗಳ ಸದ್ದಿಲ್ಲ! ಯಾಕೆ ಹೀಗೆ?