newsics.com
ಯಾದಗಿರಿ: ಪರ ಪುರುಷನ ವ್ಯಾಮೋಹಕ್ಕೆ ಸಿಲುಕಿದ್ದ ಪತ್ನಿಯೇ ಪತಿಯನ್ನೇ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿದೆ ನಡೆದಿದೆ.
ಹುಣಸಗಿ ಪಟ್ಟಣದ ನಿವಾಸಿ 34 ವರ್ಷದ ಮಾನಪ್ಪ ಬಂಕಲದೊಡ್ಡಿ ಎಂಬಾತ ಕಳೆದ 11 ವರ್ಷಗಳ ಹಿಂದೆ ಲಕ್ಷ್ಮೀ ಎಂಬಾಕೆಯನ್ನ ಮದುವೆಯಾಗಿದ್ದ. ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಆದ್ರೆ, ಈ ಮಧ್ಯೆ ಲಕ್ಷ್ಮೀ ಪರಪುರುಷರ ವ್ಯಾಮೋಹಕ್ಕೆ ಸಿಲುಕಿ ಪತಿಯನ್ನೇ ಕೊಲೆ ಮಾಡಿದ್ದಾಳೆ. ನಂತರ ಹಾರ್ಟ್ ಅಟ್ಯಾಕ್ನಿಂದ ಗಂಡ ಸಾವನ್ನಪ್ಪಿದ್ದಾನೆಂದು ಕಥೆ ಕಟ್ಟಿದ್ದಾಳೆ.
ಆದರೆ, ಶವದ ಮೇಲಿದ್ದ ರಕ್ತಗಾಯ, ಹೆಪ್ಪುಗಟ್ಟಿದ್ದ ರಕ್ತವನ್ನು ಗಮನಿಸಿದ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದರು.
ಘಟನಾ ಸ್ಥಳಕ್ಕೆ ಸಿಪಿಐ, ಆನಂದ ವಾಗ್ಮೋಡೆ, ಡಿವೈಎಸ್ಪಿ ಜಾವೀದ್ ಇನಾಮದಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಬಳಿಕ ಪತ್ನಿ ಲಕ್ಷ್ಮೀಯನ್ನು ಬಂಧಿಸಿದ್ದು, ಇನ್ನು ಆಕೆಗೆ ಸಹಕರಿಸಿದ ಪ್ರೀಯಕರ ಬಂಧನಕ್ಕೆ ಬಲೆ ಬೀಸಿದ್ದಾರೆ.