newsics.com
ಬ್ರಿಟನ್ : ಬ್ರಿಟಿಷ್ ರಾಯಲ್ ಕುಟುಂಬಕ್ಕೀಗ ಮತ್ತೊಬ್ಬ ಸದಸ್ಯೆ ಸೇರ್ಪಡೆಯಾಗಿದ್ದಾರೆ. ರಾಜಕುಮಾರಿ ಬೀಟ್ರಿಸ್ ಹಾಗೂ ಅವರ ಪತಿ ಎಡೊರ್ಡೊ ಮಾಪೆಲ್ಲಿ ಮೊಜ್ಜಿ ತಮ್ಮ ಎರಡನೇ ಮಗುವನ್ನು ತುಂಬಾ ಹರುಷದಿಂದ ಬರಮಾಡಿಕೊಂಡಿದ್ದಾರೆ.
ಎಲಿಜೆಬೆತ್ ರೋ್ ಮಾಪೆಲ್ಲಿ ಮೋಜ್ಜಿ ಜನವರಿ 22,2025ರಂದು ಮಧ್ಯಾಹ್ನ 12:57ಕ್ಕೆ ಲಂಡನ್ನ ಚೆಲ್ಸಿಯಾ ಆ್ಯಂಡ್ ವೆಸ್ಟ್ಮಿನಿಸ್ಟರ್ ಆಸ್ಪತ್ರೆಯಲ್ಲಿ ಜನಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್ ತಾಯಿ ಮತ್ತು ಮಗು ಇಬ್ಬರೂ ತುಂಬಾ ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿದೆ. ವಿದೇಶಿ ಮಾಧ್ಯಮಗಳು ವರದಿ ಪ್ರಕಾರ ರಾಜಕುಮಾರಿ ಬೀಟ್ರಿಸ್ ಇದಕ್ಕಿಂತ ಮೊದಲೇ ಮಗುವಿಗೆ ಜನ್ಮ ನೀಡುವ ನೀರಿಕ್ಷೆ ಇತ್ತು. ಆದ್ರೆ ಡಿಸೆಂಬರ್ನಲ್ಲಿ ವೈದ್ಯರು ನೀಡಿದ ಸಲಹೆಯಂತೆ ಅವರಿಗೆ ದೀರ್ಘಪ್ರಯಾಣವನ್ನು ಮಾಡಬಾರದು ಎನ್ನಲಾಗಿತ್ತು. ಇದರಿಂದಾಗಿ ಅವರು ತಮ್ಮ ಹಾಲಿಡೇ ಪ್ಲ್ಯಾನ್ನ್ನು ಬದಲಾಯಿಸಿದರು. ಹೀಗಾಗಿ ಎಲ್ಲರೂ ಕ್ರಿಸ್ಮಸ್ನ್ನು ಸಂದ್ರಂಗಗಾಮ್ನಲ್ಲಿಯೇ ಆಚರಿಸಿದರು.