newsics.com
ಮಂಗಳೂರು: ಕಾರ್ಕಳ ಹಿರ್ಗಾನ ಕ್ಷೇತ್ರದಿಂದ ಪ್ರತಿ ವರ್ಷ ನೀಡಲಾಗುವ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಹಾಸ್ಯ ಚಕ್ರವರ್ತಿ ಅರುಣ್ ಕುಮಾರ್ ಜಾರ್ಕಳ ಆಯ್ಕೆಯಾಗಿದ್ದಾರೆ.
ಜ.23ರಂದು ನಡೆಯುವ ಶ್ರೀ ಕುಂದೇಶ್ವರ ಜಾತ್ರೆಯ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಅರುಣ್ ಕುಮಾರ್ ಜಾರ್ಕಳ ಮಾತೃಭಾಷೆ ತೆಲುಗು. ದೊರೆಸ್ವಾಮಿ ಹಾಗೂ ಲೀಲಾವತಿ ದಂಪತಿ ಪುತ್ರ ಉದ್ಯೋಗ ನಿಮಿತ್ತವಾಗಿ ಜಾರ್ಕಳ ದಲ್ಲಿ ನೆಲೆಸಿದ್ದರು. ಈಗ ಪೆರ್ಣಂಕಿಲದಲ್ಲಿ ವಾಸವಿದ್ದಾರೆ.
ಧರ್ಮಸ್ಥಳ ತರಬೇತಿ ಶಿಬಿರದಲ್ಲಿ ಯಕ್ಷಗಾನದ ಅಭ್ಯಾಸ ಮಾಡಿ ಕಟೀಲು ಮೇಳಕ್ಕೆ ಸೇರಿಕೊಂಡರು. ಈಗ ತೆಂಕು ಮತ್ತು ಬಡಗುತಿಟ್ಟಿನಲ್ಲಿ ಬಹು ಬೇಡಿಕೆ ಕಲಾವಿದರು.
ಸಾಲಿಗ್ರಾಮ ಮೇಳದಲ್ಲಿ ಪ್ರವರ್ಧಮಾನಕ್ಕೆ ಬಂದು ಪ್ರಸ್ತುತ ಬೆಂಕಿನಾಥೇಶ್ವರ ಮೇಳದಲ್ಲಿ ಪ್ರಧಾನ ಹಾಸ್ಯ ಕಲಾವಿದರಾಗಿದ್ದಾರೆ.
ವಿಶಿಷ್ಟ ಶೈಲಿಯ ಆಂಗಿಕ ಅಭಿನಯದಿಂದ ಜನರನ್ನು ನಗೆಗಡಲಲ್ಲಿ ತೇಲಿಸಬಲ್ಲ ಸಮರ್ಥ ಹಾಸ್ಯಗಾರರೆಂಬ ಖ್ಯಾತಿ ಇದೆ. ಶ್ವೇತ ಕುಮಾರ ಚರಿತ್ರೆಯ ಪ್ರೇತದ ಹಾಸ್ಯವಂತು ಸ್ಮರಣೀಯ.
ಅಮೆರಿಕ ಹಾಗೂ ಲಂಡನ್ನಲ್ಲೂ ಯಕ್ಷಗಾನ ಪ್ರದರ್ಶಿಸಿದ್ದಾರೆ.
Continued cruelty ಮುಂದುವರಿದ ಕ್ರೌರ್ಯ: ಕಟ್ಟಿದ್ದ ಕರು ಕದ್ದು ಕತ್ತರಿಸಿ ಮಾಂಸ ಮಾರಿದ ಕಟುಕರು!
Soumya Rao ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜತೆ ಮಲಗೋಕೆ ಬರಲ್ವಾ?: ನಟಿ ಸೌಮ್ಯಾ ರಾವ್ ಆಕ್ರೋಶ