Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Soumya Rao ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜತೆ ಮಲಗೋಕೆ ಬರಲ್ವಾ?: ನಟಿ ಸೌಮ್ಯಾ ರಾವ್‌ ಆಕ್ರೋಶ
ಪ್ರಮುಖಮನರಂಜನೆ

Soumya Rao ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜತೆ ಮಲಗೋಕೆ ಬರಲ್ವಾ?: ನಟಿ ಸೌಮ್ಯಾ ರಾವ್‌ ಆಕ್ರೋಶ

Share
3 Min Read
SHARE

newsics.com
ನಿರೂಪಕಿ ಸೌಮ್ಯಾ ರಾವ್‌ ಅವರು ತೆಲುಗಿನ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈಗ ಈ ವಿಚಾರವಾಗಿ ಮತ್ತೆ ಸೌಮ್ಯಾ ರಾವ್‌ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗ ಬೆಳೆದಿಲ್ಲ, ಬೆಳೆಯಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸೌಮ್ಯಾ ʼಕನ್ನಡ ಚಿತ್ರರಂಗದ ಮೇಲೆ ನನಗೆ ಒಲವು ಇಲ್ಲ, ಏಕೆಂದರೆ ಅವರು ನನ್ನನ್ನು ಬೆಳೆಸಿಲ್ಲ ಎಂದು ನಾನು ಹೇಳಿದ್ದೆ. ಅದನ್ನು ನಾನು ಬೇಸರದಿಂದ ಹೇಳಿದ್ದು. ಪ್ರಸ್ತುತ ಕನ್ನಡ ಚಿತ್ರರಂಗ ಒಳ್ಳೆಯ ನಟಿಯರನ್ನು ಕಳೆದುಕೊಳ್ಳುತ್ತಿದೆ. ಕೆಟ್ಟ ಹುಳದಿಂದ ಇಂಡಸ್ಟ್ರಿ ಹಾಳಾಗುತ್ತಿದೆ ಎಂದು ನಾನು ಸಂದರ್ಶನದಲ್ಲಿ ಹೇಳಿದ್ದೆʼ ಎಂದಿದ್ದಾರೆ.

ಅಲ್ಲದೇ ಅಣ್ಣಾವ್ರ ಚಿತ್ರಗಳನ್ನು ನೋಡಿದ್ದೀರಾ ಎಂದೆಲ್ಲಾ ಕಾಮೆಂಟ್‌ ಮಾಡಿದ್ದರು. ನಾನು ಚಿಕ್ಕ ವಯಸ್ಸಿನಲ್ಲಿ ರಾಜ್‌ಕುಮಾರ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು. ಬೇಡರ ಕಣ್ಣಪ್ಪದಿಂದ ಶಬ್ದವೇಧಿವರೆಗೆ ಎಲ್ಲಾ ಚಿತ್ರಗಳನ್ನೂ ನಾನು ನೋಡಿದ್ದೇನೆ ಎಂದು ಸೌಮ್ಯಾ ರಾವ್ ಹೇಳಿದ್ದಾರೆ.

ಇನ್ನೂ ಮುಂದುವರಿದು ಕೆಲವರು ನನ್ನನ್ನು ಕರ್ನಾಟಕಕ್ಕೆ ಬರಬೇಡ, ಬಂದರೆ ಮೆಟ್ಟಲ್ಲಿ ಹೊಡೆಯುತ್ತೇವೆ, ತೆಲುಗಿನಲ್ಲೇ ಸಾಯಿ ಎಂದೆಲ್ಲಾ ನಿಂದಿಸಿದ್ದರು. ನನ್ನ ರಾಜ್ಯಕ್ಕೆ ನಾನು ಬರೋಕೆ ಅವರ ಅನುಮತಿ ಬೇಕಾ? ಬಟ್ಟೆ ಬಿಚ್ಚಿದವರಿಗೆ ಹೆಚ್ಚು ಫಾಲೋವರ್ಸ್‌, ಅವರೇ ಇವರಿಗೆ ದೇವರುಗಳು ಎಂದು ಕಿಡಿಕಾರಿದರು.

ಅಲ್ಲದೇ ʼತೆಲುಗಿನಲ್ಲಿ ಯಾರದ್ದೋ ಜತೆ ಮಲಗಿ ಅವಕಾಶ ಪಡೆದುಕೊಂಡಿದ್ದಾಳೆ ಎಂದು ಯಾರೋ ಕಮೆಂಟ್‌ ಮಾಡಿದ್ದರು. ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜತೆ ಮಲಗೋಕೆ ಬರಲ್ವಾ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ. ನಾನು ಆ ರೀತಿಯ ಕಲಾವಿದೆ ಅಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಈ ಸಂದರ್ಶನ ಕೊಟ್ಟು ಎರಡು ತಿಂಗಳ ಮೇಲಾಯ್ತು. ಸಂದರ್ಶನ ಆಗಿ ಹದಿನೈದು ದಿನ ಆದ್ಮೇಲೆ ಎಡಿಟ್‌ ಆಗಿ ಅಪ್‌ಲೋಡ್‌ ಆಗಿತ್ತು. ಆ ಟೈಮ್‌ನಲ್ಲಿ ಮ್ಯಾಕ್ಸ್‌, ಯುಐ ಸಿನಿಮಾ ರಿಲೀಸ್‌ ಆಗಿರಲಿಲ್ಲ. ನಾನು ಡಾ ರಾಜ್‌ಕುಮಾರ್‌ ಸಿನಿಮಾಗಳನ್ನು ನೋಡಿ ಬೆಳೆದವಳು. ನನಗೆ ಕನ್ನಡ ಅಂದ್ರೆ ತುಂಬ ಇಷ್ಟ. ನಾನು ಕನ್ನಡದ ಬಗ್ಗೆ ಮಾತಾಡಲಿಲ್ಲ, ಕನ್ನಡ ಚಿತ್ರರಂಗದ ಬಗ್ಗೆ ಮಾತಾಡಿದೆ. ನಾನು ಈ ಹಿಂದಿನ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿರಲಿಲ್ಲ, ಪ್ರಸ್ತುತ ಚಿತ್ರರಂಗದ ಬಗ್ಗೆ ಮಾತನಾಡಿದ್ದೆ, ಬೇಸರ ಹೊರಹಾಕಿದ್ದೆ ಅಷ್ಟೇ… ನನಗೆ ತೆಲುಗಿನಲ್ಲಿ ಎಲ್ಲ ಪದಗಳು ಗೊತ್ತಿಲ್ಲ. ಕನ್ನಡ ಚಿತ್ರರಂಗ ಸಣ್ಣದು ಅಂತ ನಾನು ಹೇಳಿಲ್ಲ, ಸಂಕುಚಿತ ಮನಸ್ಸು ಇದೆ ಎಂಬರ್ಥದಲ್ಲಿ ಹೇಳಿದೆ. ಸಂಕುಚಿತ ಪದಕ್ಕೆ ತೆಲುಗಿನಲ್ಲಿ ಏನು ಹೇಳ್ತಾರೆ ಅಂತ ಗೊತ್ತಿಲ್ಲ,’ ಎಂದು ಸೌಮ್ಯಾ ರಾವ್‌ ಹೇಳಿದ್ದಾರೆ.

ನನಗೆ ಕನ್ನಡದಲ್ಲಿ ನಟಿಸಲು ಇಷ್ಟವಿದ್ದರೂ ಅವಕಾಶ ಸಿಗಲಿಲ್ಲ. ಇಲ್ಲಿ ಕಾಸ್ಟಿಂಗ್‌ ಕೌಚ್‌ ಅನುಭವ ಆಗಿದ್ದಕ್ಕೆ ನಾನು ಮಾತನಾಡಿದೆ. ತೆಲುಗಿನಲ್ಲಿ ಅನುಭವ ಆಗಿದ್ದರೆ ಅದನ್ನು ಮಾತಾಡ್ತಿದ್ದೆ. ನಾನು ಬಡತನದಲ್ಲಿ ಬೆಳೆದವಳು. ಕನ್ನಡದಲ್ಲಿ ಇಂದು ಹೀರೋಯಿನ್‌ಗಳು ಕಡಿಮೆ ಆಗಿದ್ದಾರೆ, ಇಲ್ಲಿಯವರಿಗೆ ಅವಕಾಶ ಸಿಗ್ತಿಲ್ಲ. ಹೀಗಾಗಿ ಒಳ್ಳೆಯ ಕಲಾವಿದರನ್ನು ಕಳೆದುಕೊಳ್ತಿದ್ದಾರೆ. ನನಗೆ ಪುನೀತ್‌ ರಾಜ್‌ಕುಮಾರ್‌, ಉಪೇಂದ್ರ, ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ಅಂದ್ರೆ ತುಂಬ ಇಷ್ಟ. ನಾನು ಕನ್ನಡದ ಸಾಕಷ್ಟು ಸುದ್ದಿಗೋಷ್ಠಿಗಳನ್ನು ನಿರೂಪಣೆ ಮಾಡಿದ್ದೇನೆ. ದುಡ್ಡು ಇಷ್ಟೇ ಕೊಡಿ ಅಂತ ನಾನು ಕೇಳಿಲ್ಲ, ಇಷ್ಟೆಲ್ಲ ಚೆನ್ನಾಗಿ ಕನ್ನಡ ಮಾತಾಡ್ತಿದ್ದರೂ ಕೂಡ ಅವಕಾಶ ಕೊಡಲಿಲ್ಲ ಎಂದು ಸೌಮ್ಯಾ ರಾವ್‌ ಹೇಳಿದ್ದಾರೆ.

‘ನನ್ನ ಸಂದರ್ಶನದ ಪೂರ್ತಿ ವಿಡಿಯೋವನ್ನು ನೋಡದೆ ಕೆಟ್ಟ ಕೆಟ್ಟದಾಗಿ ಕಾಮೆಂಟ್‌ ಮಾಡ್ತಿದ್ದಾರೆ. ಈ ರೀತಿ ಕಮೆಂಟ್‌ ಮಾಡೋರಿಗೆ ತಾಯಿ-ಅಕ್ಕ ಇರೋದಿಲ್ವಾ? ಬಿಟ್ಟಿ ಕರೆನ್ಸಿ ಹಾಕ್ತಾರೆ ಅಂತ ಈ ರೀತಿ ಕೆಟ್ಟದಾಗಿ ಕಮೆಂಟ್‌ ಮಾಡೋದು ಸರೀನಾ? ಈ ರೀತಿ ಕೆಟ್ಟದಾಗಿ ಕಮೆಂಟ್‌ ಮಾಡೋರು ನನ್ನ ಕಾಲು ಎಕ್ಕಡಕ್ಕೂ ಸಮ ಇಲ್ಲ. ನಾನು ಪದೇ ಪದೇ ಹೇಳ್ತಿದೀನಿ, ನನ್ನ ತಾಯಿಯಷ್ಟೇ ಕನ್ನಡ ಕೂಡ ತುಂಬ ಇಷ್ಟ,’ ಎಂದು ಸೌಮ್ಯಾ ರಾವ್‌ ಅವರು ಸ್ಪಷ್ಟಪಡಿಸಿದ್ದಾರೆ.

ತೆಲುಗಿನವ್ರು ನನ್ನಂತೆ ಕನ್ನಡ ಮಾತಾಡ್ತಾರಾ?
‘ಇತ್ತೀಚೆಗೆ ತೆಲುಗಿನ ಶೋವೊಂದರಲ್ಲಿ ಓರ್ವ ವ್ಯಕ್ತಿ ನಿನಗೆ ತೆಲುಗು ಸರಿಯಾಗಿ ಬರೋದಿಲ್ಲಾ ಅಂತ ಹೇಳ್ತಾರೆ. ನಾನು ತೆಲುಗಿಗೆ ಹೋಗಿ ಎರಡು-ಮೂರು ವರ್ಷ ಆಗಿದೆ, ಇಷ್ಟು ತೆಲುಗು ಮಾತಾಡ್ತೀನಿ, ಈ ಟೈಮ್‌ನಲ್ಲಿ ನೀನು ಕನ್ನಡ ಕಲಿತು ಮಾತಾಡ್ತೀಯಾ ಅಂತ ಕೇಳಿದೆ. ಅದು ವೈರಲ್‌ ಆಗೋಯ್ತು. ಆ ವ್ಯಕ್ತಿಗೆ ಎಲ್ಲರೂ ಬೈಯ್ದರು, ನನ್ನ ಬೆಂಬಲಿಸಿದರು. ಆಮೇಲೆ ಆ ವ್ಯಕ್ತಿ ಜತೆ ಲೈವ್‌ ಬಂದು ಜೈ ಕರ್ನಾಟಕ ಅಂತ ಹೇಳಿಸಿದೆ’ ಎಂದು ಸೌಮ್ಯಾ ರಾವ್‌ ಹೇಳಿದ್ದಾರೆ.

‘ನನ್ನ ರಾಜ್ಯದ ವೀರ ಮಹಿಳೆ ಕಿತ್ತೂರು ಚೆನ್ನಮ್ಮ ರಾಣಿ ಬಗ್ಗೆ ನಟಿಸೋಕೆ ಕನ್ನಡದಲ್ಲಿ ನನಗೆ ಅವಕಾಶ ಸಿಗಲಿಲ್ಲ, ತೆಲುಗಿನಲ್ಲಿ ಸಿಗ್ತು. ಇದು ನನ್ನ ದುರದೃಷ್ಟ’ ಎಂದು ಸೌಮ್ಯಾ ರಾವ್‌ ಹೇಳಿದ್ದಾರೆ.

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಬ್ಲಾಕ್ ಮೇಲ್ ಮಾಡ್ತಿದ್ದ ಆರೋಪಿ ಅರೆಸ್ಟ್

ನಿಮ್ಮ ಲೈಂಗಿಕ ಬದುಕಿಗೂ ಕುತ್ತು ತರುತ್ತೆ ಈ ಕಾಯಿಲೆ

ಕೊಲ್ಕತ್ತಾ ವೈದ್ಯೆ ರೇಪ್ ಕೇಸ್ : ಆರೋಪಿ ಸಂಜಯ್ ರಾಯ್ ದೋಷಿ ಎಂದ ಕೋರ್ಟ್

TAGGED:Can a woman who sleeps in Telugu sleep with a Kannada guy?: Actress Soumya Rao outraged
Share This Article
Facebook Twitter Copy Link Print
Previous Article Team India ಚಾಂಪಿಯನ್ಸ್ ಟ್ರೋಫಿ’ಗೆ ‘ಟೀಮ್ ಇಂಡಿಯಾ’ ಪ್ರಕಟ
Next Article ಪತ್ನಿಯನ್ನು ಗುಂಡಿಕ್ಕಿ ಕೊಂದು ಆ್ಯಸಿಡ್ ಸೇವಿಸಿ ಪತಿ ಆತ್ಮಹತ್ಯೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?