newsics.com
ನ್ಯೂಸಿಕ್ಸ್. ಕಾಮ್
International Tea Day
ಭಾರತ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಷ್ಯಾ, ಬಾಂಗ್ಲಾದೇಶ, ಕೀನ್ಯಾ, ಮಲಾವಿ, ಮಲೇಷ್ಯಾ, ಉಗಾಂಡಾ ಮತ್ತು ತಾಂಜಾನಿಯಾದಂತಹ ಚಹಾ ಉತ್ಪಾದಿಸುವ ದೇಶಗಳಲ್ಲಿ 2005 ರಿಂದ ಡಿಸೆಂಬರ್ 15 ರಂದು ಅಂತಾರಾಷ್ಟ್ರೀಯ ಚಹಾ ದಿನವೆಂದು ಆಚರಿಸಲಾಗುತ್ತದೆ.
***
International Tea Day
ಸುಸ್ತು ನಿವಾರಿಸಿಕೊಳ್ಳಲು, ಮೂಡ್ ಚೆನ್ನಾಗಿರಲಿಕ್ಕೆ ಒಂದು ಕಪ್ ಚಹಾ ಸಾಕು.
ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯೋದು ಬಹುತೇಕರಿಗೆ ಬಲು ಇಷ್ಟ. ಹಲವರಿಗೆ ಇದು ಎನರ್ಜಿ ಡ್ರಿಂಕ್.
ಆದರೆ ಚಹಾ ಕುಡಿದರೆ ತೂಕ ಹೆಚ್ಚಾಗತ್ತೆ, ತೂಕ ಕಡಿಮೆಯಾಗತ್ತೆ ಎನ್ನುವ ಗೊಂದಲಗಳಿವೆ. ತಜ್ಞರ ಪ್ರಕಾರ, ಚಹಾದಲ್ಲಿ ತೂಕ ಹೆಚ್ಚಿಸುವಂತಹ ವಸ್ತು ಏನೂ ಇಲ್ಲ. ಆದ್ರೆ ನೀವು ಚಹಾವನ್ನು ಹೇಗೆ ಕುಡಿಯುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಚಹಾ ತೂಕ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.
ಚಹಾದಲ್ಲಿ ಕೊಬ್ಬಿನ ಕಣಗಳನ್ನು ಸುಡುವ ಮತ್ತು ಮೆಟಬಾಲಿಸಮ್ ಹೆಚ್ಚಿಸುವ ಗುಣಗಳಿವೆ. ಅಲ್ಲದೆ, ಇದರಲ್ಲಿ ಕೆಫೀನ್ ಕೂಡ ಇದೆ. ಇದು ನಿಮಗೆ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಚಹಾದಲ್ಲಿರುವ ಸಂಯುಕ್ತಗಳು ಕರುಳಿನಿಂದ ಹೀರಿಕೊಳ್ಳುವ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ತೂಕ ಇಳಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ತಪ್ಪು ರೀತಿಯಲ್ಲಿ ಚಹಾ ಕುಡಿದರೆ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು.
– ಚಹಾದಲ್ಲಿ ಸಕ್ಕರೆ ಹಾಕಿ ಕುಡಿದರೆ ತೂಕ ಹೆಚ್ಚುತ್ತೆ.
– ಬಿಸ್ಕತ್ತು, ಸ್ನ್ಯಾಕ್ಸ್ ಇಲ್ಲದೆ ಚಹಾ ಕುಡಿಯೋದ್ರಿಂದ ತೂಕ ಹೆಚ್ಚುತ್ತೆ.
– ಊಟದ ನಂತರ ಚಹಾ ಕುಡಿದರೆ ಕ್ಯಾಲೊರಿಗಳ ಸೇವನೆ ಹೆಚ್ಚಾಗಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
– ನೀವು ಚಹಾ ಮಾಡುವಾಗ ಅದಕ್ಕೆ ಲವಂಗ, ಏಲಕ್ಕಿ, ತುಳಸಿ ಅಥವಾ ಯಾಲಕ್ಕಿ ಸೇರಿಸಬಹುದು. ಈ ಮಸಾಲೆಗಳೆಲ್ಲವೂ ಮೆಟಬಾಲಿಸಮ್ ಅನ್ನು ಹೆಚ್ಚಿಸುತ್ತವೆ.
– ಅಷ್ಟೇ ಅಲ್ಲ, ನೀವು ಕಡಿಮೆ ಕೊಬ್ಬಿನ ಹಾಲಿನಲ್ಲಿ ಚಹಾ ಕುಡಿದರೆ ತೂಕ ಹೆಚ್ಚಾಗುವುದಿಲ್ಲ. ನೀವು ಚಹಾ ಕುಡಿಯುವುದನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ ಕಡಿಮೆ ಸಕ್ಕರೆ ಸೇರಿಸಿ ಕುಡಿಯಬಹುದು.
– ಮುಖ್ಯವಾಗಿ ನೀವು ಹಾಲಿನ ಚಹಾ ಕುಡಿಯಲು ಬಯಸಿದರೆ ಅದನ್ನು ಹೆಚ್ಚು ಹೊತ್ತು ಕುದಿಸಬೇಡಿ. ಹೆಚ್ಚು ಕುದಿಸಿದರೆ ಅದರಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ.
Health Tips ನಿತ್ಯವೂ ಚಪಾತಿ ತಿಂದ್ರೆ ಏನಾಗತ್ತೆ? ಒಳ್ಳೆಯದಾ, ಕೆಟ್ಟದ್ದಾ?
Women like being alone ರೊಮ್ಯಾನ್ಸ್ ಟೈಮ್… ಒಂಟಿತನದಲ್ಲೇ ಮಹಿಳೆಯರು ಪುರುಷರಿಗಿಂತ ಹೆಚ್ಚು ತೃಪ್ತಿ ಕಾಣುತ್ತಾರಂತೆ!
Relationship tips ಪ್ರಣಯಕ್ಕೂ ಮುನ್ನ ದಂಪತಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು!
winter season ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರು ಕುಡಿದರೆ ಏನಾಗತ್ತೆ?