newsics.com
ಮಂಗಳೂರು: ಕರ್ನಾಟಕ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ(77) ಶನಿವಾರ (ಡಿ14) ಸಂಜೆ ಇಹಲೋಕ ತ್ಯಜಿಸಿದರು.
ಕೇರಳದ ಕಾಸರಗೋಡಿನ ಮಧೂರಿನಲ್ಲಿ 1947 ನೇ ಮೇ 23 ರಂದು ಜನಿಸಿದ್ದ ಲೀಲಾವತಿ ಅವರು ಹಿರಿಯ ಹಿಮ್ಮೇಳ ವಾದಕ ಹರಿನಾರಾಯಣ ಬೈಪಾಡಿತ್ತಾಯರ ಪತ್ನಿ.
ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಕಾರಣಕ್ಕಾಗಿ ತಾಯಿ ತವರೂರು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿ ಸೋದರಮಾವನ ಆಶ್ರಯದಲ್ಲಿ ಬೆಳೆದರು. ಸೋದರಮಾವ ರಾಮಕೃಷ್ಣ ಭಟ್ ಮಧೂರು ದೇವಾಲಯದಲ್ಲಿ ದೇವನೃತ್ಯ ಕಲಾವಿದರಾಗಿದ್ದರು.
ಬೆಳ್ತಂಗಡಿಯಲ್ಲಿ ಅರುವ ನಾರಾಯಣ ಶೆಟ್ಟಿ ಅವರ ಆಳದಂಗಡಿ ಮೇಳದಲ್ಲಿ ಪತಿ ಹರಿನಾರಾಯಣ ಬೈಪಾಡಿತ್ತಾಯ ಅವರೊಂದಿಗೆ ಭಾಗವತಿಕೆ ಮಾಡಿ ಹಲವು ಯಕ್ಷಗಾನ ಕಲಾವಿದರನ್ನು ಕುಣಿಸಿ ಆ ಕಾಲದಲ್ಲಿ ಖ್ಯಾತಿ ಪಡೆದಿದ್ದರು. ಲೀಲಾವತಿ ಅಮ್ಮನವರ ಪದ್ಯ ಇದೆ ಎಂದು ಅನೇಕರು ಯಕ್ಷಗಾನಗಳಿಗೆ ಬರುತ್ತಿದ್ದರು. ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತೆ ಎಂಬ ಖ್ಯಾತಿ ಅವರದ್ದಾಗಿತ್ತು. ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ತಲಕಳ ಮೇಳಗಳಲ್ಲಿಯೂ ಭಾಗವತಿಕೆ ಮಾಡಿದ್ದರು.
ಯಕ್ಷಗಾನ ರಂಗದ ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತೆ ಎಂಬ ಖ್ಯಾತಿ ಅವರದ್ದಾಗಿತ್ತು. ಕುಂಬಳೆ, ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ತಲಕಳ ಮೇಳಗಳಲ್ಲಿಯೂ ಭಾಗವತಿಕೆ ಮಾಡಿದ್ದರು.
ಲೀಲಾವತಿಯವರ ಪುತ್ರ ಅವಿನಾಶ್ ಬೈಪಾಡಿತ್ತಾಯ ಅವರು ಹಿರಿಯ ಪತ್ರಕರ್ತರಾಗಿದ್ದು, ಸದ್ಯ ಪ್ರಜಾವಾಣಿ ವೆಬ್ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Sodium blast ನೀರಲ್ಲಿ ಸೋಡಿಯಂ ಸ್ಫೋಟ: ಡ್ರೋನ್ ಪ್ರತಾಪ್ ಜತೆ ನೆರವಾದ ಗೆಳೆಯನಿಗೂ ಸಂಕಷ್ಟ
Pejawara Seer ನಕ್ಸಲ್ಪೀಡಿತ ಕಾಡಲ್ಲಿ ಪೇಜಾವರ ಶ್ರೀಗಳ ಮೆರವಣಿಗೆ, ಮೊಳಗಿದ ರಾಮಮಂತ್ರ!
SWIFT City ಬೆಂಗಳೂರಿನ ಸರ್ಜಾಪುರದಲ್ಲಿ ಸ್ವಿಫ್ಟ್ ಸಿಟಿ: ಸರ್ಕಾರ ನಿರ್ಧಾರ