newsics.com
ಬೆಂಗಳೂರು: ಕನ್ನಡ ಬರಲ್ಲ ಎನ್ನುವ ವಿಚಾರವಾಗಿ ನೀವೆಷ್ಟೇ ಟ್ರೋಲ್ ಮಾಡಿದ್ರೂ ನಾನು ಹೆದರಲ್ಲ. ಸುಮ್ಮನೆ ಇಲ್ಲದೆ ಇರೋದನ್ನು ತರಬೇಡಿ. ಪದೇ ಪದೇ ಇದನ್ನು ತರೋದು ಮಾಧ್ಯಮಗಳು ನಿಲ್ಲಿಸಬೇಕು ಎಂದು ಮಾಧ್ಯಮಗಳಿಗೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಾಕೀತು ಮಾಡಿದರು.
ಮಕ್ಕಳಿಗೆ ಮೊಟ್ಟೆ ಕೊಟ್ಟಿರೋ ವಿಚಾರ ಹೇಳಲ್ಲ. ಆದರೆ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎನ್ನುವುದನ್ನು ಹಾಕ್ತೀರಾ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳ ಮೇಲೆ ಗರಂ ಆದರು.
ಕಾನ್ಫರೆನ್ಸ್ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬ ‘ಸಚಿವರಿಗೆ ಕನ್ನಡ ಬರಲ್ಲ’ ಎಂದು ಅಪಹಾಸ್ಯ ಮಾಡಿದ್ದ ವಿದ್ಯಾರ್ಥಿ ಮೇಲೆ ಕೆರಳಿ ಕೆಂಡವಾಗಿ ಕ್ರಮಕ್ಕೆ ಸೂಚಿಸಿದ್ದಾರೆ ಎನ್ನಲಾದ ವಿಚಾರಕ್ಕೆ ಸಚಿವರು ಪ್ರತಿಕ್ರಿಯಿಸಿದರು.
ವಿದ್ಯಾರ್ಥಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ನಾನು ಹೇಳಿಲ್ಲ. ಹೆಡ್ ಮಾಸ್ಟರ್, ಬಿಇಒ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದೆ. ಮಕ್ಕಳ ಮೇಲೆ ಆ್ಯಕ್ಷನ್ ತಗೊಳ್ಳೋಕೆ ನಮಗೆ ಅಧಿಕಾರ ಇಲ್ಲ. ನಿಮ್ಮ ಮಕ್ಕಳನ್ನು ಹತೋಟಿಯಲ್ಲಿಡಬೇಕು ಎಂದು ಹೆಡ್ ಮಾಸ್ಟರ್, ಬಿಇಒಗೆ ಸೂಚನೆ ನೀಡಿದ್ದೇನೆ. ಶಿಕ್ಷಣ ಸಚಿವ ನಾನು ಹೇಳಿದ್ದೇನೆ. ನಿಮ್ಮ ಮಗ ಹಾಗೆ ಮಾತಾಡಿದ್ರೆ ನೀವು ಏನ್ ಮಾಡ್ತಿದ್ರಿ? ನಾನಾಗಿದ್ರೆ ನನ್ನ ಮಗನ ಜತೆ ಮಾತಾಡುತ್ತಿದ್ದೆ. 60-70 ಸಾವಿರ ಮಕ್ಕಳು ಇದ್ದಾಗ ಮಕ್ಕಳು ಆ ರೀತಿ ಮಾತಾಡೋದು ಸರಿಯಲ್ಲ. ಇದನ್ನು ಶಾಲೆಯಲ್ಲಿ ಡಿಸಿಪ್ಲೀನ್ ತರೋಕೆ ಆಗುತ್ತಾ ಹೀಗೆ ಮಾತಾಡಿದ್ರೆ? ಸಚಿವನಾಗಿ ಅಲ್ಲ, ನಾನೊಬ್ಬ ತಂದೆಯಾಗಿ ಇದನ್ನು ಹೇಳುತ್ತಿದ್ದೇನೆ ಎಂದು ಮತ್ತೆ ಗರಂ ಆದರು.
ನೀವು ಟ್ರೋಲ್ ಮಾಡಿದ್ರೆ ಪುಗ್ಸಟ್ಟೆ ನನಗೇನು ಆಗಬೇಕಿದೆ? ಯಾವತ್ತೂ ಮಧು ಬಂಗಾರಪ್ಪ ಮಧು ಬಂಗಾರಪ್ಪನೇ ಆಗಿರುತ್ತಾನೆ. ನಾಗೇಶ್ ಅವರು ಮಧು ಬಂಗಾರಪ್ಪಗೆ ಇಲಾಖೆ ಬಗ್ಗೆ ಏನೂ ಗೊತ್ತಿಲ್ಲ ಎಂದರು. ಅದಕ್ಕೆ ನಮ್ಮಂತಹ ದಡ್ಡರನ್ನು ಜನರು ಹೈಲೀಡ್ನಲ್ಲಿ ಗೆಲ್ಲಿಸಿದ್ರು, ಅವರನ್ನು ಸೋಲಿಸಿದ್ರು ಎಂದು ತಿರುಗೇಟು ನೀಡಿದರು.
ಸಭಾಪತಿ ಹೊರಟ್ಟಿ ಅವರು ನನಗೆ ಕರೆ ಮಾಡಿ ಒಳ್ಳೆ ಕೆಲಸ ಮಾಡಿದ್ದೀಯಾ ಅಂದರು. ನನ್ನ ಜವಾಬ್ದಾರಿ ನಾನು ಮಾಡಿದ್ದೇನೆ. ಟ್ರೋಲ್ ಮಾಡಿದವರು ನಿಮ್ಮ ಮಕ್ಕಳು ಹೀಗೆ ಮಾಡಿದ್ರೆ ಏನು ಮಾಡ್ತೀರಿ ಯೋಚನೆ ಮಾಡಿ. ಸಿಎಂ ಸಿದ್ದರಾಮಯ್ಯ ಅವರು ನನಗೆ ಕೊಟ್ಟಿರೋ ಜವಾಬ್ದಾರಿ. ನಾನು ನನ್ನ ಮಕ್ಕಳನ್ನು ನೋಡಿಕೊಂಡಂತೆ ಶಾಲಾ ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದೇನೆ. ಆದರೆ ಈ ರೀತಿ ಟ್ರೋಲ್ ಮಾಡೋದು ಒಳ್ಳೇದಲ್ಲ. ನನ್ನ ವಿರುದ್ಧ ಕಳೆದ ಏಳೆಂಟು ತಿಂಗಳಿಂದ ಈ ರೀತಿ ಟ್ರೋಲ್ ಮಾಡಲಾಗುತ್ತಿದೆ. ಆದರೆ ಹೀಗೆ ಮಾಡೋದ್ರಿಂದ ನಾನು ಬಗ್ಗುತ್ತೇನೆ ಅನ್ನೋದನ್ನು ಬಿಟ್ಟುಬಿಡಿ. ನಾನು ಇಂಥದ್ದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಮೇಲೆ ಇದೆಲ್ಲ ರಬ್ಬಿಶ್ ನಿಲ್ಲಿಸಿ ಸಾಕು, ಇದು ಸರಿಯಲ್ಲ ಎಂದು ಮಾಧ್ಯಮಗಳಿಗೆ ಸಲಹೆ ನೀಡಿದರು.
ಬುಧವಾರ ಬೆಳಗ್ಗೆ ಶಿಕ್ಷಣ ಸಚಿವರು ಕಾನ್ಫರೆನ್ಸ್ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಅಪಹಾಸ್ಯ ಮಾಡಿದ್ದು ವೈರಲ್ ಆಗಿತ್ತು. ‘ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕನ್ನಡ ಬರಲ್ಲ’ ಎಂದು ಸಂವಾದದಲ್ಲಿ ವಿದ್ಯಾರ್ಥಿ ಹೇಳಿದ್ದ. ಇದನ್ನು ಕೇಳಿ ಕೆರಳಿ ಕೆಂಡವಾಗಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು, ‘ಯಾರೋ ಅದು ಹೇಳಿದ್ದು , ಏನಂತ ಹೇಳಿದ್ರು.. ನಾನೇನು ಉರ್ದು ಮಾತಾಡಿದ್ನಾ.. ಈಗ ಕನ್ನಡದಲ್ಲೇ ಮಾತಾಡಿದ್ದು..’ ಎಂದಿದ್ದರು. ಅದೇ ವೇಳೆ ತಕ್ಷಣವೇ ಪಕ್ಕದಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ‘ಯಾರು ಅದು ನೋಡಿ ರೆಕಾರ್ಡ್ ಮಾಡಿ’ ಉದ್ಧಟತನ ತೋರಿದ ವಿದ್ಯಾರ್ಥಿ ಮೇಲೆ ಕ್ರಮ ಜರುಗಿಸಿ ಎಂದು ಸೂಚಿಸಿದ್ದರು.
Stylish jeans pant ಸ್ಟೈಲಿಶ್ ಜೀನ್ಸ್ಗೆ ಬೀದಿಯಲ್ಲೇ ಹೊಲಿಗೆ: ಆತ್ಮಹತ್ಯೆಗೆ ಯತ್ನಿಸಿದ ಯುವಕ
BPL CARD ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದ 69 ಸರ್ಕಾರಿ ನೌಕರರಿಗೆ ದಂಡ
Matsyakanya request ಪ್ಲೀಸ್ ಮೀನುಗಳನ್ನು ತಿನ್ನಬೇಡಿ ಎಂದ ಮತ್ಸ್ಯಕನ್ಯೆ