newsics.com
ದಕ್ಷಿಣ ಕನ್ನಡ: ಸ್ಟೈಲಿಶ್ ಜೀನ್ಸ್ ಪ್ಯಾಂಟ್ ಧರಿಸಿ ಮಾರುಕಟ್ಟೆಗೆ ಬಂದಿದ್ದ ಯುವಕನನ್ನು ಹಿಡಿದ ಪುಂಡರ ಗುಂಪೊಂದು ಆತನ ಜೀನ್ಸ್ ಪ್ಯಾಂಟ್ ಗೆ ದಬ್ಬಳದಿಂದ ಹೊಲಿಗೆ ಹಾಕಿದ್ದಾರೆ. ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ನಡೆದಿದೆ.
ಮೊಹಮ್ಮದ್ ಆಯುಬ್ ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದುಬಂದಿದೆ. ಮಾರುಕಟ್ಟೆಗೆ ಬಂದಿದ್ದ ಮೊಹಮ್ಮದ್ ಆಯುಬ್ ಮೇಲೆ 3-4 ಜನರ ಪುಂಡರ ಗುಂಪು ಈ ಕೃತ್ಯ ಎಸಗಿದೆ.
ಯುವಕನ ಎರಡು ಕೈಗಳನ್ನು ಲಾಕ್ ಮಾಡಿಸಿ ಆತನ ಜೀನ್ಸ್ ಪ್ಯಾಂಟನ್ನು ದಬ್ಬಳದಿಂದ ಹೊಲಿದಿದ್ದಾರೆ. ಎಲ್ಲರ ಎದುರೇ ನನ್ನ ಮರ್ಯಾದೆ ಹೋಯ್ತಲ್ಲ ಎಂದು ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೌದು, ಸಾರ್ವಜನಿಕವಾಗಿ ಎರಡು ಕೈಗಳನ್ನು ಬಲವಂತದಿಂದ ಹಿಡಿದಿಟ್ಟು ಯುವಕನ ಪ್ಯಾಂಟನ್ನು ಗೋಣಿ ಹೊಲಿಯುವ ಸೂಜಿಯಿಂದ ಹೊಲಿದು, ಅದನ್ನು ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಇದರಿಂದ ಮಾನಸಿಕವಾಗಿ ನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.