newsics.com
ತಿರುವನಂತಪುರಂ: ಯುವತಿಯೊಬ್ಬಳು ಮತ್ಸ್ಯಕನ್ಯೆ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿರುವ ಘಟನೆ ಕೇರಳದ ಕೊಚ್ಚಿ ಮರೈನ್ ಡ್ರೈವ್ನಲ್ಲಿ ಕಂಡುಬಂತು.
ಹೌದು, ಬೀಚ್ ಪಕ್ಕದ ಫುಟ್ ಪಾತ್ ನಲ್ಲಿ ಬೋರ್ಡ್ ಹಿಡಿದು ಮಲಗಿ, ಜನರಿಗೆ ಹಾಗೂ ಮೀನುಗಾರರಿಗೆ ವಿಶೇಷ ಸಂದೇಶವನ್ನು ರವಾನಿಸಿದಳು. ಮೀನುಗಳನ್ನು ತಿನ್ನಬೇಡಿ ಎಂಬ ಸಂದೇಶದೊಂದಿಗೆ ಅವುಗಳನ್ನು ರಕ್ಷಿಸುವ ಕಲ್ಪನೆಯನ್ನು ಹರಡುವುದೇ ಮತ್ಸ್ಯಕನ್ಯೆ ವೇಷ ಧರಿಸಿದ್ದ ಯುವತಿಯ ಉದ್ದೇಶವಾಗಿತ್ತು. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಎಂದು ಕರೆಯಲ್ಪಡುವ ಪೆಟಾ ಸಂಸ್ಥೆಯು ಈ ಅಭಿಯಾನದ ಹಿಂದಿದೆ. ನವೆಂಬರ್ ತಿಂಗಳು ವಿಶ್ವ ಸಸ್ಯಾಹಾರಿ ಮಾಸವಾದ್ದರಿಂದ ಇಂತಹ ಕಾರ್ಯಕ್ರಮವನ್ನು ಪೆಟಾ ದೇಶಾದ್ಯಂತ ಆಯೋಜಿಸಿದೆ.
ಪೇಟಾ ಸಂಸ್ಥೆಯ ಸದಸ್ಯೆಯಾಗಿರುವ ಶಿಲ್ಪಾ, ಮತ್ಸ್ಯಕನ್ಯೆಯ ವೇಷ ಧರಿಸಿದರು. ಮೀನುಗಳು ನಮ್ಮ ಸ್ನೇಹಿತರು ಹೊರತು ಆಹಾರವಲ್ಲ ಎಂದು ಶಿಲ್ಪಾ ಬೋರ್ಡ್ ಹಿಡಿದಿದ್ದರು. ಪ್ರತಿದಿನ ಹಿಡಿಯುವ ಅನೇಕ ಮೀನುಗಳು ಅಳಿವಿನಂಚಿನಲ್ಲಿವೆ ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ನ ಸದಸ್ಯರು ಹೇಳುತ್ತಾರೆ. ಮೀನುಗಳನ್ನು ರಕ್ಷಿಸಿ ಎಂಬುದೇ ಶಿಲ್ಪಾ ಧ್ಯೇಯವಾಕ್ಯ ಆಗಿತ್ತು.
ಮೀನುಗಳು ಅತ್ಯಂತ ಬುದ್ಧಿವಂತ ಜೀವಿಗಳು. ಅವುಗಳಿಗೂ ನೋವಾಗಿದೆ. ಅವುಗಳು ಕೂಡ ಸಾಯಲು ಬಯಸುವುದಿಲ್ಲ. ನಿಮ್ಮ ಆಹಾರದೊಂದಿಗೆ ಅವುಗಳ ಮೇಲೆ ಆಕ್ರಮಣ ಮಾಡಬೇಡಿ ಎಂದು ಶಿಲ್ಪಾ ಅವರು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.