Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ರಿಲಯನ್ಸ್ ಸೆಂಟ್ರೋ ಸ್ಟೋರ್ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ: ಇದಕ್ಕೇನು ಕಾರಣ?
ದೇಶಪ್ರಮುಖ

ರಿಲಯನ್ಸ್ ಸೆಂಟ್ರೋ ಸ್ಟೋರ್ ತಾತ್ಕಾಲಿಕ ಸ್ಥಗಿತಕ್ಕೆ ನಿರ್ಧಾರ: ಇದಕ್ಕೇನು ಕಾರಣ?

Share
2 Min Read
SHARE

newsics.com

ಮುಂಬೈ: ರಿಲಯನ್ಸ್ ರಿಟೇಲ್ ಲಿಮಿಟೆಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಲಯನ್ಸ್ ಸೆಂಟ್ರೋ ಮಳಿಗೆಗಳನ್ನು ತಾತ್ಕಾಲಿಕವಾಗಿ ಸ್ಥತಗಿತಗೊಳಿಸಲು ಉದ್ಯಮಿ ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ.

ಮುಕೇಶ್ ಅವರ ಈ ನಿರ್ಧಾರದಿಂದ ದೇಶಾದ್ಯಂತ ಇರುವ 80 ಸೆಂಟ್ರೋ ಸ್ಟೋರ್ ಸ್ಥಗಿತಗೊಳ್ಳಲಿವೆ.

ಕಾನೂನು ಹೋರಾಟ, ವಾದ ವಿವಾದಗಳ ಬಳಿಕ ಫ್ಯೂಚರ್ ಗ್ರೂಪ್ ಕಂಪನಿಯನ್ನು ರಿಲಯನ್ಸ್ ತೆಕ್ಕೆಗೆ ಪಡೆದುಕೊಂಡಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಫ್ಯೂಚರ್ ಗ್ರೂಪ್ ಸಂಸ್ಥೆಯ ಸ್ಟೋರ್‌ಗಳನ್ನು ರಿಲಯನ್ಸ್ ಸೆಂಟ್ರೋ ಎಂದು ಮರುನಾಮಕರಣ ಮಾಡಿತ್ತು. ಕಳೆದೆರಡು ವರ್ಷದಿಂದ ದೇಶದಲ್ಲಿ 80 ರಿಲಯನ್ಸ್ ಸೆಂಟ್ರೋ ಸ್ಟೋರ್ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಎಲ್ಲಾ ಸ್ಟೋರ್‌ಗಳನ್ನು ರಿಲಯನ್ಸ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದೆ.

ರಿಲಯಯನ್ಸ್ ರಿಟೇಲ್ ಈ ನಿರ್ಧಾರ ತೆಗೆದುಕೊಳ್ಳಲು ಕೆಲ ಕಾರಣಗಳಿವೆ. ಪ್ರಮುಖವಾಗಿ ಫ್ಯೂಚರ್ ಗ್ರೂಪ್ ಕಂಪನಿ ರಿಲಯನ್ಸ್ ಜತೆ ವಿಲೀನವಾದಾಗ ಫ್ಯೂಚರ್ ಗ್ರೂಪ್ ಕಂಪನಿಗಳ ಸ್ಟೋರ್ ರಿಲಯನ್ಸ್ ಸೆಂಟ್ರೋ ಆಗಿ ಬದಲಾಗಿತ್ತು. ಆದರೆ ಮಳಿಗೆ ಒಳಗಿನ ವಿನ್ಯಾಸ ಸೇರಿದಂತೆ ಇತರ ಅರೇಂಜ್ಮೆಂಟ್‌ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಿಲಯನ್ಸ್ ಸೆಂಟ್ರೋದ ಎಲ್ಲಾ ಮಳಿಗೆಗಳನ್ನು ನವೀಕರಣ ಮಾಡಲು ರಿಲಯನ್ಸ್ ಮುಂದಾಗಿದೆ ಎಂದು ಎಕಾನಿಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ನವೀಕರಣ ಬಳಿಕ ರಿಲಯನ್ಸ್ ಸೆಂಟ್ರೋ ಮಳಿಗೆಗಳೂ ರಿಲಯನ್ಸ್ ರಿಟೇಲ್ ಬ್ರ್ಯಾಂಡ್ ಮೂಲಕವೇ ಕಾರ್ಯನಿರ್ವಹಿಸಲಿವೆ. ಫ್ಯೂಚರ್ ಗ್ರೂಪ್‌ನ ಯಾವುದೇ ಕುರುಹುಗಳು ಇರುವುದಿಲ್ಲ. ಎಲ್ಲವೂ ರಿಲಯನ್ಸ್ ಟ್ರೆಂಡ್, ರಿಲಯನ್ಸ್ ಡಿಜಿಟಲ್, ರಿಲಯನ್ಸ್ ಫ್ರೆಶ್ ಸೇರಿದಂತೆ ರಿಲಯನ್ಸ್ ರಿಟೇಲ್ ಲಿಮಿಟೆಡ್ ನೇರ ಬ್ರ್ಯಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಎಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಬೇರೆ ಬೇರೆ ಗ್ರೂಪ್ ಅಡಿಯಲ್ಲಿ ಕಾರ್ಯನಿರ್ವಹಣೆ ಬ್ರ್ಯಾಂಡಿಂಗ್ ಹಾಗೂ ಪ್ರಮೋಶನ್‌ಗೂ ಸವಾಲಾಗಿದೆ. ಹೀಗಾಗಿ ಒಂದೇ ಬ್ರ್ಯಾಂಡ್ ಅಡಿಯಲ್ಲಿ ಸುಲಭವಾಗಿ ನಿರ್ವಹಣೆ ಮಾಡಲು ಸಾಧ್ಯವಿದೆ ಎಂದು ಇದೀಗ ಮಹತ್ವದ ಬದಲಾವಣೆಗೆ ರಿಲಯನ್ಸ್ ರಿಟೇಲ್ ಮುಂದಾಗಿದೆ.

ಹೊಸ ವಿನ್ಯಾಸ, ಹೊಸ ಅವತಾರದಲ್ಲಿ ಇದೀಗ ರಿಲಯನ್ಸ್ ಸೆಂಟ್ರೋ ಮಳಿಗೆ ಕಾರ್ಯಾರಂಭಿಸುವ ಸಾಧ್ಯತೆ. ರಿಲಯನ್ಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ಬ್ರ್ಯಾಂಡ್‌ಗಳಿಗೆ ಮತ್ತಷ್ಟು ಮಾರುಕಟ್ಟೆ ಸಿಗಲಿದೆ. ಇಷ್ಟೇ ಅಲ್ಲ ರಿಲಯನ್ಸ್ ಸುಲಭವಾಗಿ ಆದಾಯ ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.

ಕರ್ನಾಟಕದ ವೈಷ್ಣೋದೇವಿ ಯಾತ್ರಿಕರಿಗೆ ತಲಾ ರೂ. 5000 ಸಹಾಯಧನ

ಬಿಯರ್ ಕುಡಿಯುವುದರಿಂದ ಸೌಂದರ್ಯ ಹೆಚ್ಚುತ್ತದೆಯೇ? ಎಷ್ಟರ ಮಟ್ಟಿಗೆ ಸತ್ಯ..?

ಭಿಕ್ಷೆ ಕೊಡಲು ನಿರಾಕರಿಸಿದ ವ್ಯಕ್ತಿಗೆ ಖಾಸಗಿ ಅಂಗ ತೋರಿಸಿದ ಮಂಗಳಮುಖಿ

ಜ್ಯೋತಿ ರೈ ರಗಡ್‌ ಲುಕ್‌ ಗೆ ಫ್ಯಾನ್ಸ್ ಫಿದಾ..!

TAGGED:Reliance Centro Store decision to temporarily shut down: What is the reason for this?
Share This Article
Facebook Twitter Copy Link Print
Previous Article ತೆಪ್ಪ ಮುಳುಗಿ ಮೂವರು ನೀರಲ್ಲಿ ನಾಪತ್ತೆ, ಇಬ್ಬರು ಪಾರು
Next Article ಶುಭೋದಯ… ಕಾರ್ತೀಕ ಮಾಸ ಶುಕ್ಲ ಪಕ್ಷ ತ್ರಯೋದಶಿ- ಚತುರ್ದಶಿ 14-11-2024, ಗುರುವಾರ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?