newsics.com
ಸಾಗರ(ಶಿವಮೊಗ್ಗ): ಹೊಳೆಬಾಗಿಲು ನಳಿಯ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಕಳಸವಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.
ಐವರು ಸ್ನೇಹಿತರು ಸೇರಿಕೊಂಡು ಹೊಳೆಬಾಗಿಲಿನ ನದಿಯಲ್ಲಿ ತೆಪ್ಪದಲ್ಲಿ ತೆರಳಿದ್ದಾರೆ. ಈ ವೇಳೆ ತೆಪ್ಪ ಮುಳುಗಿ ರಾಜು(28) ಗಿಣಿವಾರ, ಸಂದೀಪ್(30) ಸಿಗಂದೂರು, ಚೇತನ್ (28) ನೀರು ಪಾಲಾಗಿದ್ದಾರೆ. ನವೀನ್ ಹಾಗೂ ಯಶವಂತ್ ಈಜಿಕೊಂಡು ದಡ ಸೇರಿದ್ದಾರೆ. ಈ ಐವರು ತೆಪ್ಪದಲ್ಲಿ ನಡುಗಡ್ಡೆಯೊಂದಕ್ಕೆ ತೆರಳಿ ವಾಪಸ್ ಬರುಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ದುರಂತ ಸ್ಥಳದಲ್ಲಿ ಅಗ್ನಿ ಶಾಮಕದಳ ಭೇಟಿ ನೀಡಿ, ಶೋಧ ನಡೆಸುತ್ತಿದೆ.
ತನ್ನ ಗೆಳತಿಯನ್ನು ಕೊಂದು.. ತುಂಡಾಗಿ ಕತ್ತರಿಸಿ.. ಹತ್ತಿ ಹೊಲದಲ್ಲಿ ಹೂತು ಹಾಕಿದ