newsics.com
ತಿರುವನಂತಪುರಂ: ಅಧಿಕ ಕೀಟನಾಶಕ ಬಳಕೆ ಹಿನ್ನೆಲೆಯಲ್ಲಿ ತ್ರಿಶ್ಯೂರ್‌ನ ಗುರುವಾಯೂರು ಶ್ರೀಕೃಷ್ಣ ದೇಗುಲದಲ್ಲಿ ತುಳಸಿಯನ್ನು ನಿಷೇಧಿಸಲಾಗಿದೆ.
ಕೀಟನಾಶಕರಹಿತವಾಗಿ ಬೆಳೆದ ‘ತುಳಸಿ’ಯನ್ನು ಪೂಜೆಗಾಗಿ ಪಡೆಯಬಹುದಾದ ವ್ಯವಸ್ಥೆಯನ್ನು ಪರಿಚಯಿಸಿದೆ.
‘ತುಳಸಿ’ಯನ್ನು ಬಳಸದಂತೆ ಭಕ್ತರಿಗೆ ದೇಗುಲದ ಆಡಳಿತ ಮಂಡಳಿ ಸಲಹೆ ನೀಡಿದೆ. ಹೀಗಾಗಿ ಭಗವಾನ್ ಶ್ರೀಕೃಷ್ಣನಿಗೆ ‘ತುಳಸಿ’ ಪ್ರಿಯವಾಗಿದ್ದರೂ ಭಕ್ತರು ತುಳಸಿ ಅರ್ಪಿಸುವಂತಿಲ್ಲ.
‘ತುಳಸಿ’ಯನ್ನು ಬಳಸುತ್ತಿದ್ದ ದೇಗುಲದ ಸಿಬ್ಬಂದಿ ಅಲರ್ಜಿ, ತುರಿಕೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಆಗಾಗ ದೂರುತ್ತಿದ್ದ ಹಿನ್ನೆಲೆಯಲ್ಲಿ ಗುರುವಾಯೂರು ದೇಗುಲದಲ್ಲಿ ತುಳಸಿ ನಿಷೇಧಿಸಲಾಗಿದೆ.
‘ತುಳಸಿ’ ಬೆಳೆಯುವಾಗ ಅತಿಯಾಗಿ ಕೀಟನಾಶಕ ಬಳಸಲಾಗುತ್ತಿದೆ. ಹೆಚ್ಚು ದಿನ ಸಂರಕ್ಷಿಸಿ ಇಡಲೂ ಕ್ರಿಮಿನಾಶಕ ಬಳಕೆ ಆಗುತ್ತಿದೆ. ಅಂಗಡಿಗಳಲ್ಲಿ ಸಿಗುವ ಇಂತಹ ‘ತುಳಸಿ’ಯನ್ನೇ ಬಹುತೇಕ ಭಕ್ತರು ಖರೀದಿಸಿ, ಪೂಜೆಗಾಗಿ ಅರ್ಪಿಸುತ್ತಿದ್ದಾರೆ. ಇದನ್ನು ನಿರಂತರವಾಗಿ ಬಳಸುವ ಸಿಬ್ಬಂದಿಯು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವುದರಿಂದ ದೇಗುಲದಲ್ಲಿ ತುಳಸಿ ಬಳಕೆಗೆ ನಿರ್ಬಂಧ ಹೇರಲಾಗಿದೆ.
ಆದರೆ, ಈ ನಿರ್ಧಾರವನ್ನು ಕೆಲವು ಹಿಂದೂ ಸಂಘಟನೆಗಳು ಖಂಡಿಸಿದ್ದು, ಆಡಳಿತಾರೂಢ ಸಿಪಿಎಂ ಸರ್ಕಾರದ ವಿರುದ್ಧ ಕಿಡಿಕಾರಿವೆ.
‘ಹಲವು ತಿಂಗಳ ಹಿಂದೆಯೇ ‘ತುಳಸಿ’ ನಿರ್ಬಂಧ ಜಾರಿಗೊಳಿಸಲಾಗಿದೆ. ಕೆಲವರು ಇದೀಗ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರಷ್ಟೇ’ ಎಂದು ಗುರುವಾಯೂರು ದೇವಸ್ಥಾನದ ಅಧ್ಯಕ್ಷ ವಿ.ಕೆ. ವಿಜಯನ್ ತಿಳಿಸಿದ್ದಾರೆ.
ಭಾರತದಲ್ಲಿ ಮುಂದಿನ ದಿನಗಳಲ್ಲಿ ನಗದು ಹಣವೇ ಇರಲ್ಲ, ಡಿಜಿಟಲ್ ಕರೆನ್ಸಿ ಮಾತ್ರ: RBI ಗವರ್ನರ್ ಶಕ್ತಿಕಾಂತ ದಾಸ್
ಚಿನ್ನ, ಬೆಳ್ಳಿ ದಾಖಲಾರ್ಹ ಏರಿಕೆ ನಿರೀಕ್ಷೆ, ಹೂಡಿಕೆಗಿದು ಅತ್ಯುತ್ತಮ ಮಾರ್ಗ