newsics.com
ದಾವಣಗೆರೆ: ಕೇಂದ್ರ ಸರ್ಕಾರ ಪ್ರತಿ ಮನೆಗೂ ನೀರು ತಲುಪಿಸಲು `ಹರ್ ಘರ್ ಜಲ್’ ಎಂಬ ಯೋಜನೆ ಆರಂಭಿಸಿದ್ದು, ಇದಕ್ಕಾಗಿ ಕೋಟ್ಯಂತರ ರೂ. ಹಣ ವ್ಯಯಮಾಡಿದೆ. ಆದ್ರೆ ಈ ಯೋಜನೆಯ ಹಣದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು 81 ಲಕ್ಷ ರೂ. ಲೂಟಿ ಹೊಡೆದ ಆರೋಪ ಕೇಳಿಬಂದಿದೆ.
ಹೌದು, ದಾವಣಗೆರೆಯ ಅಲೂರು ಹಟ್ಟಿ ಗ್ರಾಮದಲ್ಲಿ ಮನೆ ಮನೆಗೆ ಗಂಗೆ ಯೋಜನೆ ಕಾಮಗಾರಿ ನಡೆದಿದೆ. ಇಲ್ಲಿಯವರೆಗೂ ನೀರು ಒಂದು ದಿನವೂ ಬಂದಿಲ್ಲ. ಕಳಪೆ ಗುಣಮಟ್ಟದ ನಲ್ಲಿಗಳು, ಮೋಟರ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಇನ್ನು ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಲಾಗುತ್ತಿಲ್ಲ.
ಆಲೂರು ಗ್ರಾಮದಲ್ಲಿ 2020-21 ಸಾಲಿನ ಜಲ ಜೀವನ್ ಮಿಷನ್ ಅಡಿಯಲ್ಲಿ 81 ಲಕ್ಷ ರೂ. ಹಣ ಬಿಡುಗಡೆಯಾಗಿತ್ತು. ಗುತ್ತಿಗೆದಾರ ಗುಂಡಗತ್ತಿ ಎಂಬವರಿಗೆ ಟೆಂಡರ್ ಆಗಿ, ಕಾಮಗಾರಿ ಪೂರ್ಣಗೊಂಡಿದೆ.