newsics.com
ಬೆಂಗಳೂರು: ದೀಪಾವಳಿ ಹಬ್ಬವನ್ನು ಈ ವರ್ಷ ಕೂಡ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದ್ದು, ಹಬ್ಬಕ್ಕೆ ಮೆರಗು ಕೊಡುವ ಪಟಾಕಿಗಳನ್ನು ಖರೀದಿಸಲು ಜನರು ಕುಟುಂಬ ಸಮೇತ ಪಾಟಾಕಿ ಅಂಗಡಿಗಳಿಗೆ ಧಾವಿಸುತ್ತಿದ್ದಾರೆ.
ದೀಪಾವಳಿ ಹಬ್ಬದ ಸಲುವಾಗಿ ಬೆಂಗಳೂರಿನ 456 ಮೈದಾನಗಳಲ್ಲಿ ಪಟಾಕಿ ಸ್ಟಾಲ್ ತೆರೆಯಲು ವ್ಯಾಪರಸ್ಥರಿಗೆ ಬಿಬಿಎಂಪಿ ಅನುವು ಮಾಡಿಕೊಟ್ಟಿದೆ. ಹೀಗಾಗಿ ನಗರದ ಏಳು ವಲಯಗಳ ಎಲ್ಲಾ ಗ್ರೌಂಡ್ಗಳಲ್ಲಿಯೂ ಪಟಾಕಿ ಸ್ಟಾಲ್ಗಳನ್ನು ತೆರೆಯಲಾಗುತ್ತಿದ್ದು, ಮತ್ತೊಂದೆ ಪಟಾಕಿ ಗೋದಾಮುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಕಳೆದ ವರ್ಷ ಪಟಾಕಿಯಿಂದಾಗಿ ಅಗ್ನಿ ದುರಂತ ಸಂಭವಿಸಿತ್ತು. ಈ ಬಾರಿ ಘಟನೆ ಮರುಕಳಿಸದಂತೆ ಕಠಿಣ ನಿಯಮಗಳನ್ನು ರೂಪಿಸಲಾಗಿದೆ.
ಕಳೆದ ವರ್ಷಕ್ಕೆ ಹೋಲಿಕೆ ಈ ವರ್ಷ ಪಟಾಕಿ ಬೆಲೆ ಕೊಂಚ ಜಾಸ್ತಿಯಾಗಿದೆ. ಇನ್ನು ಈ ವರ್ಷ ಕೂಡ ಹೆಚ್ಚು ಹಸಿರು ಪಟಾಕಿಗಳಿಗಷ್ಟೇ ವ್ಯಾಪಾರಸ್ಥರು ಒತ್ತು ನೀಡಿದ್ದಾರೆ.
ಯಾವ ಪಟಾಕಿಗೆ ಎಷ್ಟು ದರ?
- ಸುಸುರಬತ್ತಿ – 100 ರೂ.
- ಸ್ಟಾಂಡರ್ಡ್ – 1200 ರೂ.
- ಫ್ಲವರ್ ಪಾಟ್ -660 ರೂ.
- ನೆಲಚಕ್ರ – 350 ರೂ.
- ಲಕ್ಷ್ಮಿ ಪಟಾಕಿ – 1500- 2000 ರೂ.
- ಬಿಜಿಲಿ ಪಟಾಕಿ – 250 – 350 ರೂ.