Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Dasara Special | ಪಾಪಗಳನ್ನು ಸಂಹರಿಸುವ ಕಾಲರಾತ್ರಿ: ನವರಾತ್ರಿ ಏಳನೇ ದಿನ
ಅನಾವರಣಪ್ರಮುಖ

Dasara Special | ಪಾಪಗಳನ್ನು ಸಂಹರಿಸುವ ಕಾಲರಾತ್ರಿ: ನವರಾತ್ರಿ ಏಳನೇ ದಿನ

Share
2 Min Read
SHARE

newsics.com

09.10.2024

ಏಕವೇಣೀ ಜಪಾಕರ್ಣಪೂರಾ ನಗ್ನ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ||
ವಾಮಪಾದೋಲ್ಲಸಲ್ಲೋಹಲತಾಕಂಟಕ ಭೂಷಣಾ
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ||

ಶರನ್ನವರಾತ್ರಿಯ ಏಳನೇ ದಿನದಂದು ತಾಯಿಯ ಸ್ವರೂಪವನ್ನು ಕಾಲರಾತ್ರಿ ಎಂದು ಕರೆಯಲಾಗುತ್ತದೆ. ದೇವಿಯ ಶರೀರದ ಬಣ್ಣವು ಗಾಢಾಂಧಕಾರದಂತೆ ಇರುತ್ತದೆ. ತನ್ನ ಜಡೆಯನ್ನು ಕಟ್ಟದೆ ಹಾಗೇ ಬಿಟ್ಟು, ಹರಡಿಕೊಂಡಿದ್ದಾಳೆ. ಇನ್ನು ಕುತ್ತಿಗೆಯಲ್ಲಿ ಫಳಫಳನೆ ಹೊಳೆಯುತ್ತಿರುವ ಮಾಲೆ ಇದೆ. ಹಾಗೂ ಈ ತಾಯಿಗೆ ಮೂರು ಕಣ್ಣುಗಳಿವೆ. ಈ ಕಣ್ಣುಗಳು ಬ್ರಹ್ಮಾಂಡದ ರೀತಿಯಲ್ಲಿ ಗೋಲಾಕಾರದಲ್ಲಿ ಇವೆ. ಕಾಲರಾತ್ರಿ ಉಸಿರನ್ನು ಬಿಡುವಾಗ ಹಾಗೂ ತೆಗೆದುಕೊಳ್ಳುವಾಗ ಬೆಂಕಿಯ ಧಗಧಗಿಸುವ ಜ್ವಾಲೆಗಳು ಹೊರಬರುತ್ತವೆ. ಆ ತಾಯಿಯ ವಾಹನವು ಕತ್ತೆ ಆಗಿದೆ. ತನ್ನ ಬಲಗೈಯ ಮೇಲ್ಭಾಗದ ವರಮುದ್ರೆಯಿಂದ ಸಕಲರಿಗೂ ವರ ನೀಡುತ್ತಿದ್ದು, ಬಲಗೈ ಕೆಳಭಾಗ ಅಭಯ ಮುದ್ರೆಯನ್ನು ಹೊಂದಿದೆ. ಇನ್ನು ಆ ಜಗಜ್ಜನನಿಯ ಎಡಭಾಗದ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಇದ್ದರೆ, ಕೆಳಗಿನ ಕೈಯಲ್ಲಿ ಖಡ್ಗ ಇದೆ.

ಈಗಾಗಲೇ ನೀಡಿರುವ ವಿವರಣೆಯಿಂದಲೇ ಖಚಿತವಾಗುತ್ತದೆ, ಕಾಲರಾತ್ರಿಯ ಸ್ವರೂಪದಲ್ಲಿ ದುರ್ಗೆಯು ಭಯಂಕರವಾಗಿ ಕಾಣುತ್ತಾಳೆ. ಆದರೆ ಫಲವನ್ನು ನೀಡುವ ವಿಚಾರಕ್ಕೆ ಬಂದಲ್ಲಿ ಸದಾ ಶುಭಫಲಗಳನ್ನೇ ನೀಡುವವಳಾಗಿದ್ದಾಳೆ. ಆದ್ದರಿಂದ ಆಕೆಯನ್ನು ಶುಭಂಕರೀ ಎಂದೂ ಕರೆಯಲಾಗುತ್ತದೆ. ಭಕ್ತರು ಅಥವಾ ಆರಾಧಕರು ತಾಯಿಯ ಸ್ವರೂಪಕ್ಕೆ ಹೆದರುವ ಅಗತ್ಯವೇ ಇಲ್ಲ.

ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಆರಾಧನೆ ಮಾಡುವುದರೊಂದಿಗೆ ಆರಾಧಕರಿಗೆ ಎದುರಾಗುವ, ಎದುರಾಗಿರುವ ಸಕಲ ಪಾಪ, ಅಡೆ-ತಡೆಗಳು ನಾಶವಾಗುತ್ತವೆ. ಅಕ್ಷಯವಾದಂಥ, ಅಂದರೆ ಕೊನೆಯೇ ಇಲ್ಲದಂಥ ಪುಣ್ಯಫಲಗಳು ದೊರೆಯುತ್ತವೆ.

ಕಾಲರಾತ್ರಿ ದೇವಿ ಕೂಡ ದುಷ್ಟರು, ರಾಕ್ಷಸರನ್ನು ನಾಶ ಮಾಡುತ್ತಾಳೆ. ಈ ದೇವಿಯ ಸ್ಮರಣೆ ಮಾತ್ರದಿಂದಲೇ ಭೂತ- ಪ್ರೇತ, ರಾಕ್ಷಸರು ಮೊದಲಾದ ದುಷ್ಟ ಸಮಸ್ಯೆಗಳು ಕರಗಿ ಹೋಗುತ್ತವೆ. ತಾಯಿಯ ಸ್ಮರಣೆಯಿಂದಾಗಿ ಗ್ರಹಬಾಧೆಗಳು ಕೂಡ ದೂರವಾಗುತ್ತವೆ.

ಯಾರು ಶ್ರದ್ಧಾ-ಭಕ್ತಿಯಿಂದ ಕಾಲರಾತ್ರಿ ದೇವಿಯನ್ನು ಆರಾಧನೆ ಮಾಡುತ್ತಾರೋ ಅಂಥವರಿಗೆ ಬೆಂಕಿಯಿಂದ ಎದುರಾಗುವ ಆತಂಕ, ನೀರಿನಿಂದ ಎದುರಾಗುವ ಬಾಧೆಗಳು, ಪ್ರಾಣಿ- ಪಕ್ಷಿ, ಕ್ರಿಮಿ- ಕೀಟಗಳಿಂದ ಎದುರಾಗಬಹುದಾದ ಬಾಧೆಗಳು ಸಹ ದೂರವಾಗುತ್ತವೆ. ಇನ್ನು ಯಾವುದೇ ಭಯಗಳು ಇಲ್ಲದೆ ಸದಾ ಉಲ್ಲಸಿತರಾಗಿ, ಆಧ್ಯಾತ್ಮಿಕ ಸಂತೋಷದಿಂದ ಇರಬಹುದಾಗಿದೆ.

ಕಾಲರಾತ್ರಿಯು ಇದೇ ಸ್ವರೂಪದಲ್ಲೇ ಶುಂಭ, ನಿಶುಂಭರೆಂಬ ಕ್ರೂರಿ ರಾಕ್ಷಸರನ್ನು ನಾಶ ಮಾಡಿದ್ದು. ಆದ್ದರಿಂದ ಆ ದೇವಿಯನ್ನು ತಾಯಿಯಂತೆ ಕಂಡು ಆರಾಧನೆ ಮಾಡಿದಲ್ಲಿ ಎಲ್ಲ ಪಾಪ ವಿನಾಶವಾಗುತ್ತದೆ. ಶತ್ರುಗಳು ಇಲ್ಲದಂತಾಗುತ್ತಾರೆ, ಪಾಪದಿಂದ ಮುಕ್ತರಾಗುತ್ತೇವೆ.

Dasara Special | ಸೌಭಾಗ್ಯ ನೀಡುವ ಕಾತ್ಯಾಯಿನಿ: ನವರಾತ್ರಿ ಆರನೇ ದಿನ

Dasara Special | ಸ್ಕಂದಮಾತೆಯ ಕೃಪಾದೃಷ್ಟಿ: ನವರಾತ್ರಿ ಐದನೇ ದಿನ

Dasara Special | ಯಶಸ್ಸು ಕರುಣಿಸುವ ಕೂಷ್ಮಾಂಡಾ: ನವರಾತ್ರಿ ನಾಲ್ಕನೇ ದಿನ

ದುರ್ಗೆಯ ಸ್ವರೂಪ ಚಂದ್ರಘಂಟಾ: ನವರಾತ್ರಿ ಮೂರನೇ ದಿನ

Dasara Special | ದ್ವಿತೀಯಂ ಬ್ರಹ್ಮಚಾರಿಣಿ: ನವರಾತ್ರಿ ಎರಡನೇ ದಿನ

ನವರಾತ್ರಿ ಮೊದಲ ದಿನ: ಶೈಲಪುತ್ರಿ ಸ್ವರೂಪ ಆರಾಧನೆ

TAGGED:Dasara Special | Kalaratriwhich kills sins: Navratri is the seventh day
Share This Article
Facebook Twitter Copy Link Print
Previous Article ರೈತ ನಾಯಕಿ ಮೇಲೆ ಅತ್ಯಾಚಾರ ಆರೋಪ: ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಎಫ್ಐಆರ್
Next Article ಶುಭ ದಿನ… ದಿನ ಭವಿಷ್ಯ, 09-10-2024, ಬುಧವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?